ಪುಟ:ತಿಲೋತ್ತಮೆ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ವೃಕ್ಷಕ್ಕೆ ಎರಡು ಬಳ್ಳಿಗಳು. ೧೨ ಪತಿಯ ಚರಣಗಳ ಮೇಲೆ ಮಸ್ತಕವನ್ನಿಟ್ಟಳು. ಆಕೆಯು ಸದ್ಯದಿತ ಕಂಠದಿಂದ ಪತಿಯನ್ನು ಕುರಿತು-ಮಹಾರಾಜ, ರಾಜಲಕ್ಷ್ಮಿಯು ಅನ್ನ, ಸ್ತ್ರೀಯಲ್ಲ, ತಮ್ಮ ಸೊಸೆಯಾಗಿರುವಳು. ಆಕೆಯಿಂದಲೇ ಅಂಬರಾಧೀಶ್ವ ರರ ವಂಶವು ಆಲಂಕೃತವಾಗಬೇಕಾಗಿರುವದು, ಆಕೆಯನ್ನು ಅಂಗೀಕರಿಸಿ ತಮ್ಮ ಪ್ರತಿಜ್ಞೆಯನ್ನು ಪೂರ್ಣಮಾಡಬೇಕು, ಎಂದು ಬೇಡಿಕೊಂ ಡಳು. ಆಗ ಮರೆಗೆ ನಿಂತುಕೊಂಡಿದ್ದ ರಾಜಲಕ್ಷ್ಮಿಯು ಮಹಾರಾಜರ ಚರ ಣಗಳಮೇಲೆ ಮಸ್ತಕವನ್ನಿಟ್ಟು ಕಣ್ಣೀರುಗಳಿಂದ ತನ್ನ ಆ ಮಾವನ ಚರ ಣಗಳನ್ನು ತೋಯಿಸಿದಳು. ಆಗ ಮಾನಸಿಂಹನು ವಿಸ್ಮಯಪಟ್ಟು ರಾಣಿ ಯನ್ನು ಕುರಿತು-ಮಹಾರಾಜ್, ಇದೇನು? ಈಕೆಯು ನನ್ನ ಸೊಸೆಯೆ? ನನ್ನ ಸೊಸೆಯೆ? ನಮ್ಮ ಜಗತ್ತಿಂಗನ ಧರ್ಮಪತ್ನಿ ಯೆ? ಅನ್ನಲು, ರಾಣಿಯು-ಹೌದು, ಮಹಾರಾಜ, ಈಕೆಯು ತಮ್ಮ ಸೊಸೆಯು ಈಕೆಯು ಜಗಂಗನ ವಿವಾಹಿತ ಧರ್ಮಪತಿಯು, ಈಕೆಯ ಹೆಸರು ತಿಲೋತ್ತಮೆಯು, ಎಂದು ಹೇಳಿದಳು, ಅದನ್ನು ಕೇಳಿ ಮಾನಸಿಂಗನು ವಿಚಾರಮಗ್ನನಾದನು. ಸ್ವಲ್ಪ ಹೊತ್ತಿನಮೇಲೆ ಆತನು ರಾಣಿಯನ್ನು ಕುರಿತು-ಮಹಾರಾಜ್ಯ, ಕೇಳು, ನನ್ನ ಮಾತನ್ನು ಚನ್ನಾಗಿ ಕೇಳು ನನ್ನ ಪ್ರತಿಜ್ಞೆಯು ಸರ್ವಥಾ ಭಂಗವಾಗಲಾರದು, ತಿಲೋತ್ತಮೆಯು ನನ್ನ ಸೊಸೆಯಾಗಲಿಕ್ಕೆ ಯೋಗ್ಯಳಿರುತ್ತಾಳೆಂಬದರಲ್ಲಿ ಎಳ್ಳಷ್ಟು ಸಂ ಶಯವಿಲ್ಲ. ನಾನು ಒಳ್ಳೆ ಆದರದಿಂದ ಈಕೆಯನ್ನು ಸ್ವೀಕರಿಸಿ, ಇಂ ದಿನಿಂದ ನಮ್ಮ ಪರಿವಾರದಲ್ಲಿ ಸೇರಿಸಿಕೊಂಡಿರುವೆನು, ರಾಜಮಹಿಷಿಗೆ ಉಚಿತವಾದ ಎಲ್ಲ ವ್ಯವಸ್ಥೆಯನ್ನು ಈಕೆಯ ಸಲುವಾಗಿ ಮಾಡಿಸು. ಇಂದಿನಿಂದ ಈ ನವವಧುವು ನಿನ್ನ ಸಂಗಡ ಇರುತ್ತ ಹೋಗುವಳು. - ಅಂಬರಾಧೀಶ್ವರನು ಹೀಗೆ ನುಡಿಯುತ್ತಿರುವಾಗ ತಿಲೋತ್ತಮೆಯು ಮಾವನ ಚರಣಧೂಲಿಯನ್ನು ಮಸ್ತಕದಲ್ಲಿ ಧರಿಸಿ, ಸ್ವಲ್ಪ ದೂರ ಸರಿದು ನಿಂತುಕೊಂಡು ಬಿಕ್ಕಿ ಬಿಕ್ಕಿ ಅಳಹತ್ತಿದಳು. ಉರ್ಮಿಳಾರಾಣಿಯು ಪತಿಯ ಚರಣದ ಬಳಿಯಿಂದ ಸರಿದು ನಿಂತು, ವಿನಯದಿಂದ ನಮಸ್ಕ .ರಿಸಿ, ಪತಿಯನ್ನು ಕುರಿತು-ಈ ದಾಸಿಯು ಮಹಾರಾಜರ ಕೃಪೆಯ ಲಾಭದಿಂದ ಧನ್ಯಳಾಗಿರುವಳು. ಮಹಾರಾಜರ ಉಪಕೃತಿಯನ್ನು ಜನ್ಮ