ಪುಟ:ತಿಲೋತ್ತಮೆ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

വ ತಿಲೋತ್ತಮೆ. ವಿರುವತನಕ ಮರೆಯಲಾರಳು ಎಂದು ನುಡಿದಳು. ಆಗ ಮಾನಸಿಂಹನು ರಾಜಲಕ್ಷ್ಮಿಯನ್ನು ಕುರಿತು-ತಂಗೀ, ರಾಜಲಕ್ಷ್ಮಿ, ನೀನು ಇಂದಿ ನಿಂದ ನನ್ನ ಮಗಳಾದೆ; ಹೋಗು, ನನ್ನ ಊಟದ ವ್ಯವಸ್ಥೆಯನ್ನು ಮಾಡು ಹೋಗು, ಎಂದು ನುಡಿಯಲು, ತಿಲೋತ್ತಮೆಯು ಹೊರಟು. ಹೋದಳು. ಇತ್ತ ಮಾನಸಿಂಹನು ವಿಚಾರಮಗ್ನನಾಗಿ ಸ್ವಲ್ಪ ಹೊತ್ತು ಸುಮ್ಮನೆ ಕುಳಿತುಕೊಂಡನು. ಆಯೇಷಾ-ತಿಲೋತ್ತಮೆಯರಂಥ ಅಲ್‌ ಕಿಕ ರತ್ನ ಗಳೆರಡು ತನ್ನ ಮಗನನ್ನು ಆಶ್ರಯಿಸಿರುವದನ್ನು ನೋಡಿ ಆತನಿಗೆ ಪರಮಾನಂದವಾಯಿತು, ಅದರಲ್ಲಿ ಆಯೇಷೆಯಂತು ಮಾನಸಿಂಹನ ಚಿತ್ರವನ್ನು ಸಂಪೂರ್ಣವಾಗಿ ಆಕರ್ಷಿಸಿದ್ದಳು, ವಿಚಾರಮಾಡು, ಆ ಅಂಬರಾಧೀಶ್ವರನು ರಾಣಿಯನ್ನು ಕುರಿತು-ಮಹಾರಾಜೀ, ಒಂದೊಂದು ಸ್ತ್ರೀರತ್ನದ ಗುಣಗಳನ್ನು ಸರಿಸಿದರೆ ಮನಸ್ಸು ದಂಗುಬಡಿದು ಹೋಗು ಇದೆ! ನಮ್ಮ ರಾಜಲಕ್ಷ್ಮಿಯ ಗುಣಗಳಿಗೆ ನಾನು ಅತ್ಯಂತ ಸಂತು. «ನಾಗಿರುವಾಗ, ಈ ದಿನ ಆಯೇಷೆಯೆಂಬ ಸುಂದರಿಯೊಬ್ಬಳು ತನ್ನ ಉಜ್ವಲಗುಣಗಳಿಂದ ನನ್ನನ್ನು ಅಚ್ಚರಿಗೊಳಿಸಿದಳು. ಪ್ರಿಯೇ, ನೀನು ಆ ಕಾತಲುಖಾನನ ಸಾಕುಮಗಳಾದ ಆಯೇಷೆಯನ್ನು ಬಲ್ಲೆ ಯಷ್ಟೆ? ಆ ಗುಣಸುಂದರಿಯ ದರ್ಶನವು ಇಂದೇ ನನಗಾಯಿತು, ಆಕೆಯು ಮನು ಹೈಳಲ್ಲ, ಸುರಸುಂದರಿಯೇಸರಿ, ನಿನ್ನ ಬಳಿಗೆ ಆಕೆಯನ್ನು ಕರತರು ಇದ್ದೆನು; ಆದರೆ ಆಕೆಯು ಇದೇ ಪಾಟಣಾಪಟ್ಟಣದಲ್ಲಿರುವ ತನ್ನ ಆಪ್ತ ನಾದ ತೇಜಖಾನನನ್ನು ಕಂಡು ಬರಲಿಕ್ಕೆ ಅಪ್ಪಣೆ ಕೊಡಬೇಕೆಂದು ಬೇಡಿಕೊಂಡದ್ದರಿಂದ, ಆಕೆಯ ಮಾತನ್ನು ಮೀರಲಾರದೆ ಕಳಿಸಿಕೊಟ್ಟಿ ರುವೆನು. ಆಯೇಷೆಯು ನಮ್ಮ ಜಗತ್ತಿಂಗನನ್ನು ಮನಃಪೂರ್ವಕವಾಗಿ ಪ್ರೀತಿಸುತ್ತಿರುವಳು; ಆದರೆ ಜಗತ್ತಿಂಗನ ಪ್ರೇಮವು ಆಯೇಷೆಯ ಮೇಲೆ ಯಿದ್ದಂತೆ ತೋರುವದಿಲ್ಲ. ಪ್ರಿಯೇ, ಆಯೇಷೆಯು ಪಠಾಣರಾಜಕುವರಿ ಯಾಗಿದ್ದರೂ, ಬಹು ಗುಣಾಢಳು. ಜಗತ್ಸಂಗನ ಬಂಧವಿಮೋಚನವಾದ ಬಳಿಕ, ಆತನೊಡನೆ ಅಯೇಷೆಯ ಲಗ್ನವನ್ನು ಮಾಡಲೇಬೇಕು, ಇದ ರಲ್ಲಿ ತಪ್ಪೇನು? ಒಂದು ವೃಕ್ಷಕ್ಕೆ ಭಿನ್ನ ಜಾತಿಯ ಎರಡು ಬಳಿ, ಗಳು ಹಬ್ಬಿರಬಾರದೇನು? ಅವಶ್ಯವಾಗಿ ಅವರಿಬ್ಬರ ಲಗ್ನ ಮಾಡುವೆನು,