ಪುಟ:ತಿಲೋತ್ತಮೆ.djvu/೧೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ವೃಕ್ಷಕ್ಕೆ ಎರಡು ಬಳ್ಳಿಗಳು. ೧೨೫ ಆಯೇಷೆಯು ಅಂಬರರಾಜವಂಶಕ್ಕೆ ಅಲಂಕಾರಭೂತಳೇ ಸರಿ. ಪತಿಯ ಈ ಮಾತುಗಳನ್ನು ಕೇಳಿ ಉರ್ಮಿಳಾರಾಣಿಯು ಆಶ್ಚ ರ್ಯಪಟ್ಟಳು. ಜಗ೦ಗನು ಆಯೆಷೆಯ ಮೋಹದ ಬಲೆಗೆ ಸಿಕ್ಕು, ಅಂಬರಕುಲದ ಅಪಮಾನ ಮಾಡಿದನೆಂಬ ಸಿಟ್ಟಿನಿಂದ ತನ್ನ ಪತಿಯು ಜಗ೦ಗನನ್ನು ಹಲವುಸಾರೆ ಹಳಿದದ್ದನ್ನು ಈ ಮೊದಲೆ ಆಕೆಯು ಕೇಳಿದ್ದಳು. ಜಗತ್ತಿಂಗನ ಆಜನ ಕಾರಾಗೃಹವಾಸಕ್ಕೆ ಆಯೇಷೆಯೂ ಒಂದು ಕಾರಣವಾಗಿರಲು, ಈಗ ಮಹಾರಾಜರು ಆಕೆಯನ್ನೇ ಪ್ರಸನ್ನ ಚಿತ್ತದಿಂದ ವರ್ಣಿಸುವದರಕಾರಣವು ರಾಣಿಗೆ ತಿಳಿಯದಾಯಿತು. ಆಕೆಯು ಮುಗ್ಧ ಭಾವ ದಿಂದ ಪತಿಯ ಮುಖವನ್ನು ಎವೆಯಿಕ್ಕದೆ ನೋಡುತ್ತಿರುವಾಗ, ಮಾನಸಿಂಹನು ಗಾಂಭೀರ್ಯದಿಂದ-ಮಹಾರಾಜ್, ನಾನು ಜಗತ್ತಿ೦ಗನನ್ನು ಆಜನ್ಮಕಾರಾ ಗೃಹದಲ್ಲಿರಿಸಿದ್ದು ಅವಿಚಾರದ ಕೆಲಸವಾಯಿತು, ಕುಮಾರನು ಯಾವಮಾತಿ ನಿಂದಲೂ ಅಪರಾಧಿಯಿದ್ದಂತೆ ತೋರುವದಿಲ್ಲ. ಹೀಗಿದ್ದು, ಸಿಟ್ಟಿನಭರದಲ್ಲಿ ಆತನನ್ನು ಆಜನ್ಮಕಾರಾಗೃಹದಲ್ಲಿರಿಸಿ, ನನ್ನ ಕಾಲಮೇಲೆ ನಾನು ಕಲ್ಲು ಹಾಕಿಕೊಂಡಂತೆ ಮಾಡಿದೆನು. ಆಗಲಿ, ಉಪಾಯವಿಲ್ಲ. ನಾನಾಗಿ ಕುಮಾ ರನ ಬಂಧವಿಮೋಚನೆ ಮಾಡುವ ಹಾಗಿಲ್ಲ. ಇನ್ನು, ಆಯೇಷೆಯ ಪ್ರಯ ತೃ ದಿಂದ ಬಾದಶಹನು ಕುಮಾರನನ್ನು ಬಂಧಮುಕ್ತಮಾಡಿದರೆ ಮಾಡ ಬೇಕು, ಎಂದು ನುಡಿಯಲು, ಉರ್ಮಿಳಾರಾಣಿಯು ಬಹು ಸಮಾಧಾನ ಪಟ್ಟು ಪತಿಯನ್ನು ಕುರಿತು-ಮಹಾರಾಜ, ಕುಮಾರನ ವಿಷಯವಾಗಿ ತಮ್ಮ ಮನಸ್ಸು ಕನಿಕರಪಡುವದನ್ನು ನೋಡಿ ನನಗೆ ಬಹಳ ಸಂತೋ ಷವಾಗುತ್ತದೆ. ಹೀಗೆ ತಮ್ಮ ಮನಸ್ಸಿನ ಒಲವನ್ನು ಸಂಪೂರ್ಣವಾಗಿ ತಿರುಗಿಸಿದ ಭಾಗ್ಯಶಾಲಿನಿಯಾದ ಆ ಆಯೇಷೆಯು ಎಂಥವಳಿರಬಹುದು! ಆಕೆಯನ್ನು ಕಾಣುವ ಇಚ್ಛೆಯು ನನ್ನನ್ನು ಬಹಳವಾಗಿ ಬಾಧಿಸುತ್ತಿ ರುವದು, ಈಗಲೆ ಆಕೆಯನ್ನು ಕರೆಕಳುಹಬೇಕು, ಆಕೆಯು ನನ್ನನ್ನು ಕಂಡ ಬಳಿಕ, ಬೇಕಾದರೆ ಈ ದಿನವೇ ತನ್ನ ಆಪ್ತನ ಮನೆಗೆ ತಿರುಗಿ ಹೋಗಲೊಲ್ಲಳೇ ಕೆ, ಎಂದು ಹೇಳಿದಳು, ಅದಕ್ಕೆ ಮಾನಸಿಂಹನು ಒಪ್ಪಿ ಕೊಂಡು, ಭೋಜನಾನಂತರ ಆಯೇಷೆಯನ್ನು ಕರಕೊಂಡು ಬರುವದ .ಕಾಗಿ ಬಹುಮಾಪೂರ್ವಕವಾಗಿ ಮೇಣೆಯನ್ನು ತಾಜಖಾನನ ಮನೆಗೆ