ಪುಟ:ತಿಲೋತ್ತಮೆ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೬ ತಿಲೋತ್ತಮೆ. ಕಳಿಸಿದನು. ಮಾನಸಿಂಹನ ಅಪ್ಪಣೆಯಂತೆ ಆಯೇಷೆಯು ಅಂತಃಪುರಕ್ಕೆ ಬಂದಳು. ಆಕೆ ಬಂದದ್ದನ್ನು ಕೇಳಿ ಉರ್ಮಿಳಾರಾಣಿಯು ಆಕೆಗೆ ಎದು ಶಾಗಿ ಹೋಗಿ ಆದರದಿಂದ ಆಕೆಯನ್ನು ಬರಮಾಡಿಕೊಂಡು, ಒಂದು ವಿಶಾ ಲವಾದ ಸುಂದರ ಮಂದಿರದೊಳಗೆ ಆಕೆಯನ್ನು ಬಹುಮಾನದಿಂದ ಕರ ಕೊಂಡು ಹೋದಳು, ಅಲ್ಲಿ ಮಾನಸಿಂಹನು ಒಂದು ರತ್ನಖಚಿತವಾದ ಸಿಂಹಾಸನದಲ್ಲಿ ಗಂಭೀರಭಾವದಿಂದ ಕುಳಿತುಕೊಂಡಿದ್ದನು. ಆತನು ಆಯೇಷೆ ಬಂದದ್ದನ್ನು ನೋಡಿ ಆಸನದಿಂದ ಎದ್ದು ಸ್ವಲ್ಪ ಮುಂದಕ್ಕೆ ಹೋಗಿ, ಆಕೆಯ ಸಲುವಾಗಿಯೇ ಸಿದ್ಧ ಮಾಡಿಸಿಟ್ಟಿದ್ದ ಆಸನದಲ್ಲಿ ಕುಳಿತುಕೊಳ್ಳುವದಕ್ಕಾಗಿ ವಿನಯದಿಂದ ಆಕೆಗೆ ಸೂಚಿಸಿದನು; ಆದರೆ ಆಯೇಷೆಯು ಆ ಆಸನದಲ್ಲಿ ಕುಳಿತುಕೊಳ್ಳದೆ, ಉರ್ಮಿಳಾರಾಣಿಯ ಬಳಿಯಲ್ಲಿ ನಿಂತುಕೊಂಡಳು. ಆಗ ಮಹಾರಾಣಿಯು ಆಕೆಯ ಕೈಯನ್ನು ಹಿಡಿದು, ಒಂದು ಆಸನದ ಬಳಿಗೆ ಆಕೆಯನ್ನು ಕರಕೊಂಡು ಹೋಗಿ, ಅರ್ಧ ಆಸನದಮೇಲೆ ತಾನು ಕುಳಿತು? ಅರ್ಧಆಸನದ ಮೇಲೆ ಆಯೇಷೆಯನ್ನು ಕುಳ್ಳಿರಿಸಿಕೊಂಡಳು. ಪ್ರಥಮ ದರ್ಶನದಲ್ಲಿಯೇ ಉರ್ಮಿಳಾರಾಣಿಯ ಮನಸ್ಸಿನಲ್ಲಿ ಆಯೇಷೆಯ ವಿಷ ಯವಾಗಿ ವಿಲಕ್ಷಣವಾದ ಆದರವು ಉತ್ಪನ್ನವಾಗಿತ್ತು. ಆಯೇ ಷೆಯು ಆಸನದ ಮೇಲೆ ಕುಳಿತುಕೊಂಡ ಬಳಿಕ ಮಾನಸಿಂಹನು ತನ್ನ ಆಸನ ದಲ್ಲಿ ಕುಳಿತುಕೊಂಡು, ಆಕೆಯನ್ನು ಕುರಿತು-ತಂಗೀ, ನಿನ್ನನ್ನು ನಮ್ಮ ಜನರು ವಿವೇಕವಿಲ್ಲದೆ ನಮ್ಮ ಬಳಿಗೆ ಕರಕೊಂಡು ಬಂದರು. ಅದರಿಂದ ನಿನಗೆ ಬಹಳ ತ್ರಾಸವಾಯಿತು, ಆದರೆ ನಿನ್ನಂಥ ಗುಣಾಢಳ ದರ್ಶನವಾದದ್ದರಿಂದ ನಮಗೆ ಬಹಳ ಸಂತೋಷವಾಗಿದೆ. ಈ ದೃಷಿ ಯಿಂದ ನೋಡಿದರೆ, ನಮ್ಮ ಜನರು ಒಂದು ಬಗೆಯಿಂದ ನಮ್ಮ ಮೇಲೆ ಉಪಕಾರಮಾಡಿದರೆಂತಲೇ ಭಾವಿಸಬೇಕಾಗಿದೆ: ಆದರೂ ನಿನಗೆ ನಮಿ 0 ದಾದ ತೊಂದರೆಗಾಗಿ ನಮಗೆ ಬಹಳ ಅಸಮಾಧಾನವಾಗಿರುವದು. ಈಗ ನಿನಗೆ ಯಾವ ಬಗೆಯ ಉಪದ್ರವವನ್ನೂ ಕೊಡದೆ, ಸೈಚ್ಛೆಯಿಂದ ಆಚರಿಸುವಂತೆ ನಿನಗೆ ಸೂಚಿಸಬೇಕೆಂದು ನಾನು ಮಾಡಿದ್ದೆ ನು; ಆದರೆ. ಮಹಾರಾಜ್ ಯು ನಿನ್ನ ದರ್ಶನಕ್ಕಾಗಿ ಆತುರಪಟ್ಟದ್ದರಿಂದ ಇಷ್ಟು ಅವ