ಪುಟ:ತಿಲೋತ್ತಮೆ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ವೃಕ್ಷಕ್ಕೆ ಎರಡು ಬಳ್ಳಿಗಳು. ೧೨೭ ಸರದಿಂದ ಕರೆಸಿ, ನಿನಗೆ ಉಪದ್ರವಕೊಡಬೇಕಾಯಿತು. ಅನ್ನಲು, ಆಯೇಷೆಯು-ಮಹಾರಾಜ, ಇದರಲ್ಲಿ ನನಗಾದಉಪದ್ರವವೇನು? ಮಹಾ ರಾಣಿ ಸಾಹೇಬರು ನನ್ನನ್ನು ಈ ಪರಿ ಆದರಿಸಿದ್ದಕ್ಕಾಗಿ ನನಗೆ ಬಹಳ ಸಂತೋ ಷವಾಗಿರುತ್ತದೆ. ನನ್ನ ಸ್ವಾತಂತ್ರಕ್ಕೆ ಭಂಗಬಾರದಂತೆ ತಾವು ನಡಿಸಿ ಕೊಡುವದಕ್ಕಾಗಿ ತಮಗಾದರೂ ನಾನು ಉಪಕೃತಳಾಗಿರುವೆನು, ಎಂದು ನುಡಿದಳು, ಅದನ್ನು ಕೇಳಿ ಮಹಾರಾಣಿಯೂ, ಮಾನಸಿಂಹನೂ ಸಂತೋಷಬಟ್ಟರು. ಸ್ವಲ್ಪಕಾಲ ಅವರು ಮೂರೂ ವಿಚಾರಮಗರಾದಂತೆ ಸುಮ್ಮನೆ ಕುಳಿತುಕೊಂಡಿದ್ದರು. ಬಳಿಕ ಮಹಾರಾಣಿ ಯು ಆಯೇಷೆಯನ್ನು ಕುರಿತು-ಇನ್ನು ನೀನು ಎಲ್ಲಿಗೆ ಹೆ ಗತಕ್ಕವಳು, ಎಂದು ಕೇಳಲು, ನಾನು ದಿಲ್ಲಿಗೆ ಹೋಗುತ್ತೇನೆಂದು ಆ ಋಷೆ ಯು ಉತ್ತರಕೊಟ್ಟಳು. ಆಗ ಮಾನಸಿಂಹನು-ಹೌದು, ನೀನು ದಿಲ್ಲಿಗೆ ಹೋಗುವದೆ ಯೋಗ್ಯವು. ದಿಲ್ಲಿಯಲ್ಲಿ ನಿನಗೆ ಬಹು ಜನರ ಪರಿಚಯವಿರುವದನ್ನು ನಾನು ಬಲ್ಲೆನು. ದೊಡ್ಡ ದೊಡ್ಡ ಅಮೀರ-ಉಮರಾವುಗಳು ನಿನ್ನ ಆ ಸರು ಇರು ತಾರೆ. ಅಕಬರಬಾದಶಹರವರಿಗೆ ಸಹ ನಿನ ಗುರುತು ಇರುವದು; ಮತ್ತು ನಿನ್ನ ತಂದೆಯ ಋಣಾನುಬಂಧವು ಮೊಗಲಬಾದಶಹರೊಡನೆ ಮೊದಲಿನಿಂದ ನಡೆದು ಬಂದಿರುವದು. ಇದಲ್ಲದೆ, ಸದ್ಯಕ್ಕೆ ಪಠಾಣರ ಅಧಿಕಾರವು ಎಲ್ಲ ಕಡೆಗೆ ಲೋ ಪವಾದಂತೆ ಯಾಗಿರುತ್ತದೆ. ನಿನ್ನ ಋಣಾ ನುಬಂಧಿಗಳಾದ ಒಡಿಸಾದ ನಬಾಬರು ಸದ್ಯಕ್ಕೆ ಅಂಥ ಐಶ್ವರ್ಯಶಾ ಲಿಗಳೂ, ಸನಾ ನಾರ್ಹರೂ ಇರುವದಿಲ್ಲ; ಆದ್ದರಿಂದ ನೀನು ಇಂಥ ಜನರ ಬಳಿಯಲ್ಲಿರುವದು ನನಗೆ ನೆಟ್ಟಗೆ ಕಾಣುವದಿಲ್ಲ ಎಂದು ನುಡಿಯಲು, ಆಯೇಷೆಯು-ಒಡಿಸಾದ ಪಠಾಣರ ಸಂಬಂಧದಿಂದ ಮಹಾರಾಜರು ಪಡುವ ಅಭಿಪ್ರಾಯವನ್ನು ನೋಡಿದರೆ, ಈ ಪ್ರಸಂಗದಲ್ಲಿ ನಾನು ಅನ ರೊಡನೆ ಸ್ನೇಹಸಂಬಂಧವನ್ನು ಬಿಡದಿರುವದೇ ನನ್ನ ಕರ್ತವ್ಯವೆಂದು ನಾನು ತಿಳಿಯಬೇಕಾಗುತ್ತದೆ;- ಯಾಕಂದರೆ, ನಬಾಬ ಕಾತಲುಖಾನರವರು ಅನಾ ಥಳಾದ ನನ್ನನ್ನು ಬಾಲ್ಯದಿಂದ ಪ್ರೇಮಪೂರ್ವಕವಾಗಿ ಸಂರಕ್ಷಿಸಿರುವರು; ತಮ್ಮ ಕಪಾಛತ್ರದ ಬುಡದಲ್ಲಿ ನನ್ನನ್ನು ದೊಡ್ಡವಳನ್ನಾಗಿ ಮಾಡಿ