ಪುಟ:ತಿಲೋತ್ತಮೆ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೮ ತಿಲೋತ್ತಮೆ. ರುವರು; ನನ್ನ ಸುಖವನ್ನು ತಮ್ಮ ಸುಖವೆಂತಲೂ, ನನ್ನ ದುಃಖವನ್ನು ತಮ್ಮ ದುಃಖವೆಂತಲೂ ಅವರು ತಿಳಿಯುತ್ತ ಬಂದಿರುವರು. ಅಂಥವರ ಮನೆತನದವರು, ಈಗ ದುರ್ದೈವದ ಸೆಳವಿಗೆ ಬಿದ್ದು ಸಂಕಟಕ್ಕೆ ಗುರಿಯಾ ಗಿರಲು, ಅವರನ್ನು ನಾನು ತೊಲಗಿಹೋಗುವದು ಸೌಜನ್ಯದ ಲಕ್ಷಣವೆ? ಹಾಗೆ ತೊಲಗಿಹೋದರೆ ನಾನು ಕೃತಘ್ನತೆಯ ದೋಷಕ್ಕೆ ಗುರಿಯಾಗ ಲಿಕ್ಕಿಲ್ಲವೆ? ಈಗಿನ ಅವನತಿಯ ಪ್ರಸಂಗದಲ್ಲಿ ನಾನು ಒಡಿಸಾದ ನಬಾ ಬರ ಬಳಿಯಲ್ಲಿದ್ದು, ಯಥಾಶಕ್ತಿ ಅವರಿಗೆ ಸಹಾಯಮಾಡುವದು ನನ್ನ ಶ್ರೇಷ್ಠ ಕರ್ತವ್ಯವಾಗಿರುವದು. ಆಯೇಷೆಯ ಈ ಉತ್ತರವನ್ನು ಕೇಳಿ ಮಾನಸಿಂಹನು ನಿರುತ್ತರನಾ ದನು. ಮುಂದೆ ಏನು ಮಾತಾಡಬೇಕೆಂಬದು ಆತನಿಗೆ ತಿಳಿಯದಾಯಿತು. ಹೀಗೆ ಪತಿಯ ಪರಾಜಯವಾದದ್ದನ್ನು ನೋಡುವದು ಉರ್ಮಿಳಾರಾಣಿ ಯಿಂದಾಗಲಿಲ್ಲ. ಆಕೆಯು ಆಯೇಷೆಯನ್ನು ಕುರಿತು ಉರ್ಮಿಳಾರಾಣಿ-ತಂಗೀ, ಇನ್ನು ಮೇಲೆ ನಿನಗೆ ಮೊಗಲರ, ಅಥವಾ ಪಠಾಣರ ಸಂಬಂಧವೇನು? ನೀನು ಯಾರಕಡೆಗೂ ಹೋಗಬೇಡ, ನಮ್ಮ ಬಳಿ ಯಲ್ಲಿರು; ನೀನು ನಮ್ಮವಳಾಗಿರುತ್ತೀ. ಆಯೇಷ-ಮಹಾರಾಣಿಯವರೇ, ನನ್ನ ಮೇಲೆ ತಮ್ಮ ವಿಶೇಷ ಲೋಭವಿರುವದರಿಂದ ನಾನು ತಮ್ಮ ಬಳಿಯಲ್ಲಿರಬೇಕೆಂದು ತಮಗೆ ತೋರುವದು ಸ್ವಾಭಾವಿಕವು; ಆದರೆ ನನ್ನ ಮನಸ್ಸು ದಿಲ್ಲಿಯ ಕಡೆಗೆ ಜಗುವದರಿಂದ, ನಾನು ಅಲ್ಲಿಗೆ ಹೋಗಲೇ ಬೇಕಾಗಿ ರುವದು. - ಮಾನಸಿಂಹ- ಪಠಾಣರಿಗೆ ಸದ್ಯಕ್ಕೆ ಕಠಿಣ ಕಾಲವಿರುವದರಿಂದ ಅವರ ಬಳಿಯಲ್ಲಿರುವದು ಯೋಗ್ಯವೆಂದು ಈಗ ನೀನು ಹೇಳಲಿಲ್ಲವೇ? ಅಂದಬಳಿಕ ಈಗ ನೀನು ದಿಲ್ಲಿಗೆ ಯಾಕೆ ಹೋಗುತ್ತೀ? ಆಯೇಷ-ಕುಮಾರ ಜಗಕ್ಸಿಂಗರವರ ಬಂಧವಿಮೋಚನ ಮಾಡಿಸುವ ದಕ್ಕಾಗಿ ಈಗ ನಾನು ದಿಲ್ಲಿಗೆ ಹೋಗಬೇಕಾಗಿದೆ. ನಾನು ದಿಲ್ಲಿಗೆ ಕಳಿಸಿದ ಪತ್ರವು ದುರ್ದೆವದಿಂದ ಬಾದಶಹರಿಗೆ ಮುಟ್ಟಲಿಲ್ಲವೆಂದು ಕೇಳಿದ್ದೇನೆ. ನಾನೇ ಅಲ್ಲಿಗೆ ಹೋಗಿಬಿಡುವದು ನೆಟ್ಟಗೆ ಕಾಣುತ್ತದೆ, ಆಗ್ರಾಕ್ಕೆ ಹೋಗಿ, ದರ್ಬಾ