ಪುಟ:ತಿಲೋತ್ತಮೆ.djvu/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಒಂದು ವೃಕ್ಷಕ್ಕೆ ಎರಡು ಬಳ್ಳಿಗಳು. ೧೨೯ ರದಲ್ಲಿ ನಾನು ನಿಜವಾದ ಸಂಗತಿಯನ್ನು ಬಾದಶಹರ ಮುಂದೆ ಹೇಳಿದರೆ, ನಿಶ್ಚಯವಾಗಿ ಕುಮಾರರ ಬಂಧವಿಮೋಚನೆಯಾಗುವದು. - ಮಾನಸಿಂಹ ( ಆಯೇಷೆಯ ಮನಸ್ಸನ್ನು ಪರೀಕ್ಷಿಸುವದಕ್ಕಾಗಿ ) - ನಬಾಬನಂದಿನೀ, ಅಪರಾಧಕ್ಕಾಗಿ ಅರಸನಿಂದ ಶಿಕ್ಷೆ ಹೊಂದಿದವನಿಗೆ ಸಹಾಯ ಮಾಡಿ, ನೀನು ರಾಜದ್ರೋಹಿಯಾಗುತ್ತೀಯಾ? ನೀನು ಸ್ತ್ರೀಯೆಂದು ತಿಳಿದು ಈಮೊದಲು ಆದ ನಿನ್ನ ಅಪರಾಧವನ್ನು ನಾನು ಕ್ಷಮಿಸಿದೆನು, ಮೇಲೆ ಮೇಲೆ ನೀನು ಹೀಗೆ ಅಪರಾಧಮಾಡಹತ್ತಿದರೆ, ನಿನ್ನನ್ನು ಶಿಕ್ಷಿಸದೆಯಿರುವದು ಹೇಗೆ? ನೀನು ಈ ಇಲ್ಲದ ಉಸಾಬರಿಗೆ ಹೋಗುವದನ್ನು ಬಿಟ್ಟು ಬಿಡು. ಇಲ್ಲದಿ ದ್ದರೆ ರಾಜದ್ರೋಹಿಯೆಂದು ನಿನ್ನನ್ನು ಅನಿರ್ವಾಹಪಕ್ಷ ಶಿಕ್ಷಿಸುವ ಪ್ರಸಂಗವು ನನಗೆ ಬಂದೀತು. ಆಯೇಷ-ನನ್ನನ್ನು ಶಿಕ್ಷಿಸುವ ಅಧಿಕಾರವು ಮಹಾರಾಜರಿಗೆ ಸಂಪೂರ್ಣವಾಗಿ ಇರುತ್ತದೆ, ಆದರೆ ಮಹಾರಾಜರು ಎಂದಿಗೂ ನನ್ನನ್ನು ಶಿಕ್ಷಿಸಲಾರರೆಂದು ನಾನು ನಂಬಿದ್ದೇನೆ. ಮಾನಸಿಂಹ-ಅದೇಕೆ? ಆಯೇಷ-ತಮಗೆ ಒಳಿತು ಮಾಡುವವರನ್ನು ಈ ಜಗತ್ತಿನಲ್ಲಿ ಯಾರೂ ಶಿಕ್ಷಿಸುವದಿಲ್ಲ. ಮಾನಸಿಂಹ-ನೀನು ನನ್ನ ತೀರ್ಪಿನ ವಿರುದ್ದವಾಗಿ ಬಾದಶಹರ ಕಡೆಗೆ ಅಪೀಲು ಮಾಡುತ್ತೀ; ಮತ್ತು ನಿಜವಾದ ರಾಜದ್ರೋಹಿಗೆ ಸಹಾಯ ಮಾಡು, ಇಂಥ ನೀನು, ರಾಜನಿಷ್ಠನಾದ ನನಗೆ ಒಳಿತು ಮಾಡುವವ ಳಾಗಬಹುದೋ? - ಆಯೇಷೆ- ( ಗಾಬರಿಯಾಗದೆ ) -ಮಹಾರಾಜ, ತಮ್ಮ ಮಾತು ಗಳು ಕಠಿಣವಾಗಿರುವಂತೆ, ತಮ್ಮ ಅಂತಃಕರಣವು ಕಠಿಣವಾಗಿರುವದಿಲ್ಲ. ಕುಮಾರರ ಆಜನ್ಮ ಕಾರಾಗೃಹವಾಸವು ತಮಗೆ ಸದ್ಯಕ್ಕೆ ತಾಪದಾಯಕವಾ ಗಿರುತ್ತದೆಂದು ನಾನು ನಂಬಿರುವೆನು ಜಗತ್ತಿಗೆ, ವಿಶೇಷವಾಗಿ ಬಾದಶಹ ರಿಗೆ, ನ್ಯಾಯಪಕ್ಷಪಾತಿತ್ವವನ್ನು ತೋರಿಸುವದಕ್ಕೋಸ್ಕರ ಸಾಧಾರಣ ತಪ್ಪಿ ಗಾಗಿ ಕುಮಾರರಿಗೆ ಕಠಿಣ ಶಾಸನವನ್ನು ತಾವು ವಿಧಿಸಿರುವಿರಿ. ಕುಮಾರರ ಬಂಧವಿಮೋಚನೆಯ ಚಿಂತೆಯು ತಮ್ಮನ್ನು ಬಾಧಿಸುತ್ತದೆ. ಇಂಥ ಪ್ರಸಂಗ