ಪುಟ:ತಿಲೋತ್ತಮೆ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೦ ತಿಲೋತ್ತಮೆ. ದಲ್ಲಿ ಕುಮಾರರಬಂಧವಿಮೋಚನೆಯಾದರೆ, ತಮಗೆ ಆನಂದವಾಗಲೇ ಬೇಕು; ಅ೦ದಬಳಿಕ ಕುಮಾರರ ಬಂಧವಿಮೋಚನೆ ಮಾಡುವವರು ತಮಗೆ ಒಳಿತು ಮಾಡುವವರಾಗಲಿಕ್ಕಿಲ್ಲವೇ? ಅಂಥವರನ್ನು ತಾವು ಶಿಕ್ಷಿಸಬಹುದೇ? ಆಯೇಷೆಯ ಈ ಮಾತುಗಳನ್ನು ಕೇಳಿ ಮಾನಸಿಂಹನು ವಿಸ್ಮಿತನಾ ದನು. ತನ್ನ ಮನಸ್ಸಿನ ಭಾವವನ್ನು ಅರಿತದ್ದನ್ನು ನೋಡಿ, ಆತನಿಗೆ ಆಯೇ ಷೆಯ ವಿಷಯವಾಗಿ ಆದರಬುದ್ದಿ ಯು ಉತ್ಪನ್ನ ವಾಯಿತು; ಆದರೂ ಆತನು ತನ್ನ ಗಾಂಭೀರ್ಯವನ್ನು ಪರಿತ್ಯಜಿಸದೆ, ಮತ್ತೆ ಆಯೇಷೆಯನ್ನು ಕುರಿತುಆಯೇಷೆ, ನಿನ್ನ ಮಾತಿನ ಸತ್ಯಾಸತ್ಯತೆಯನ್ನು ಕುರಿತು ಚರ್ಚಿಸು ವದು ನನಗೆ ಅವಶ್ಯವಿಲ್ಲ. ನೀನು ಕೇವಲ ನನ್ನ ಮೇಲೆ ಉಪಕಾರ ಮಾಡು ವದಕ್ಕಾಗಿಯೇ ಇಷ್ಟು ಹೆಣಗುತ್ತಿರುವೆಯೆಂದು ನಾನು ಹೇಳಲಾರೆನು. ಇದರಲ್ಲಿ ನಿನ್ನ ದೂ ಹಿತವಿರುವದು. ಆಯೇಷೆ-ಇದ್ದರೂ ಇರಬಹುದು, ನಾನು ಸ್ವಾರ್ಥಕ್ಕಾಗಿ ರಾಜ ಕುಮಾರರನ್ನು ಬಂಧಮುಕ್ತ ಮಾಡಲು ಯತ್ನಿಸುತ್ತಿದ್ದರೂ ಯತ್ನಿಸುತ್ತಿರ ಬಹುದು, ಆದರೆ ಮಹಾರಾಜ, ಕುಮಾರರ ಬಂಧವಿಮೋಚನೆಯಾಗುವದ ರಿಂದ ನನಗೊಬ್ಬಳಿಗೇ ಸಮಾಧಾನವಾಗುವದಿಲ್ಲ, ತಮಗೂ ಅದರಿಂದ ಸಮಾ ಧಾನವಾಗುವದು; ಆದ್ದರಿಂದನನ್ನನ್ನು ಶಿಕ್ಷಿಸುವಬುದ್ದಿಯು ತಮಗಾಗಲಾರದು. - ಈ ಪ್ರಸಂಗದಲ್ಲಿ ತನ್ನ ಪತಿಯು ಎರಡನೆಯಸಾರೆ ಪರಾಜಿತನಾದದ್ದನ್ನು ನೋಡಿ ಉರ್ಮಿಳಾರಾಣಿಯು ನಡುವೇ ಬಾಯಿಹಾಕಿ, ಆಯೇಷೆಗೆ--ನಿನ್ನಂಥ ಗುಣಸುಂದರಿಯನ್ನು ನಾನು ಎಲ್ಲಿಗೂ ಹೋಗಗೊಡುವದಿಲ್ಲ. ನಾನು ನಿನ್ನನ್ನು ನನ್ನ ಸೊಸೆಯಾಗಿ ಮಾಡಿಕೊಳ್ಳುವೆನು, ಅನ್ನ ಲು, ಆಯೇ ಷೆಯು ಸುಮ್ಮನಾದಳು. ಆಕೆಯ ಮೋರೆಯು ಕೆಂಪಾಯಿತು. ಆಕೆಯು ಮುಖವನ್ನು ಬಾಗಿಸಿದಳು. ಆಗ ಉರ್ಮಿಳಾರಾಣಿಯು ಮತ್ತೆ ಆಕೆಯನ್ನು ಕುರಿತು-ನೀನು ಮುಸಲ್ಮಾನ ಜಾತಿಯವಳೆಂಬ ವಿಷಯದಲ್ಲಿ ನಮ ಗೇನು ವಿಧಿನಿಷೇಧವಿಲ್ಲ. ಮಹಾರಾಜರು ಮೊದಲಿನಿಂದಲೇ ಮುಸ ಲ್ಮಾನರೊಡನೆ ಶರೀರಸಂಬಂಧಮಾಡಿದ್ದಾರೆ. ನಿನ್ನ ಲಗ್ನದಿಂದ ಅನಾಯಾಸ ವಾಗಿಯೇ ಅವರ ಕಾರ್ಯಕ್ಕೆ ಪುಷ್ಟಿಯು ದೊರೆತಂತಾಗುವದು. ಯಾಕೆ ಅಯೇಷೆ, ಮಾತಾಡಲೊಲ್ಲೆಯೇಕೆ? ನಿನ್ನ ರೂಪ, ಗುಣ, ಬುದ್ಧಿ ಗಳಿಗೆ