ಪುಟ:ತಿಲೋತ್ತಮೆ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಕರಣದ ಔದಾರ್ಯವು. ೧೩೧ ಜೋಡಿಲ್ಲ. ನಿನ್ನನ್ನು ವರಿಸಿದವನು ಧನ್ಯನೇಸರಿ, ನಮ್ಮ ಕುಮಾರ ಜಗ ೬ಂಗನ ಧನ್ಯತೆಯನ್ನು ಕಣ್ಣು ಮುಟ್ಟಿ ನೋಡುವ ಸುಯೋಗವನ್ನು ನನಗೆ ನೀನು ಒದಗಿಸಿಕೊಡು. ನನ್ನ ಆಶಾಭಂಗವನ್ನು ಮಾಡಬೇಡ, ಎಂದು ಹೇಳಿದಳು, ಅದಕ್ಕೆ ಆಯೇಷೆಯು-ಮಹಾರಾಣೀ ಸಾಹೇಬರೇ, ತಾವು ನನ್ನನ್ನು ಬಹಳವಾಗಿ ಪ್ರೀತಿಸುತ್ತೀರಿ, ನಾನು ತಮ್ಮ ದಾಸಿಯೇ ಇರು ವೆನು; ಆದರೆ ನೀವು ನನಗೆ ಕೊಡುವ ಅಧಿಕಾರಕ್ಕೆ ನಾನು ಎಷ್ಟು ಮಾತ್ರವೂ ಪಾತ್ರಳಿರುವದಿಲ್ಲ. ನಾನು ನನ್ನ ಜೀವನದ ಮಾರ್ಗವನ್ನು ಮೊದಲೇ ಗೊತ್ತು ಮಾಡಿಕೊಂಡು ಬಿಟ್ಟಿರುತ್ತೇನೆ. ಅದರಲ್ಲಿ ಅಂತರವಾಗುವಹಾಗಿಲ್ಲ. ತಾವು ದಯಮಾಡಿ ನನಗೆ ಬೇಗನೆ ಅಪ್ಪಣೆಕೊಡಿರಿ, ನಾಳೆ ಬೆಳಗಾಗುತ್ತಲೆ ನಾನು ಪಾಟಣಾಪಟ್ಟಣವನ್ನು ಬಿಟ್ಟು ಹೊರಡಬೇಕೆಂದು ಮಾಡಿದ್ದೇನೆ, ಎಂದು ಹೇಳಿದಳು, ಅದಕ್ಕೆ ಉರ್ಮಿಳಾರಾಣಿಯು-ಇಲ್ಲ, ನೀನು ನನ್ನ ಬಳಿಯ ಲ್ಲಿಯೇ ಇರಲಿಕ್ಕೆ ಬೇಕು, ತಿಲೋತ್ತಮೆಯು ನಿನ್ನನ್ನು ಕಾಣಬೇಕೆನ್ನು ತಿದ್ದಳು; ಆದ್ದರಿಂದ ಆಕೆಯ ಬಳಿಗೆ ನಾವು ಹೋಗೋಣ, ಎಂದು ಹೇಳಿ, ಮಹಾರಾಜರ ಒಪ್ಪಿಗೆಯಿಂದ ಆಕೆಯು ಆಯೇಷೆಯನ್ನು ಕರಕೊಂಡು ತಿಲೋ ತಮೆಯ ಬಳಿಗೆ ಹೊರಟಳು. ೧೪ನೆಯ ಪ್ರಕರಣ- ಅಂತ:ಕರಣದ ಔದಾರ್ಯವು. ಹಿಂದಕ್ಕೆ ಕಾತಲುಖಾನನ ಸೆರೆಯಲ್ಲಿ ತಿಲೋತ್ತಮೆಯು ಇದ್ದಾಗ, ಆಕೆಗೆ ಆಯೇಷೆಯ ಪರಿಚಯವಾದದ್ದನ್ನೂ, ಆಯೇಷೆಯ ಪ್ರೇಮವು ತನ್ನ ಪತಿಯಾದ ಜಗತ್ತಿ೦ಗನ ಮೇಲೆ ಇರುತ್ತದೆಂಬದು ತಿಲೋತ್ತಮೆಗೆ ಗೊತ್ತಿ ದ್ದದ್ದನ್ನೂ ವಾಚಕರು ನೆನಪಿನಲ್ಲಿಟ್ಟಿರಬಹುದು, ಜಗತ್ತಿಂಗನು ತಿಲೋತ್ತಮೆಯ ವಿವಾಹಮಾಡಿಕೊಳ್ಳುವಾಗ, ಆಯೇಷೆಯನ್ನು ಬುದ್ದಿ ಪೂರ್ವಕ ಕರಿಸಿಕೊಂಡ ದ್ದರಿಂದ, ಆಯೇಷಾ-ತಿಲೋತ್ತಮೆಯರಲ್ಲಿ ಅಕೃತ್ರಿಮ ಪ್ರೇಮವು ಉತ್ಪನ್ನ