ಪುಟ:ತಿಲೋತ್ತಮೆ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೨ ತಿಲೋತ್ತಮೆ. ವಾಗಿತ್ತು. ರಾಜಾಮಾನಸಿಂಹನು ಜಗತ್ತಿಂಗನನ್ನು ತನ್ನ ಮಗನೆಂದು ನೋಡದೆ, ಆಜನ್ಮ ಕಾರಾಗೃಹವಾಸದ ಶಿಕ್ಷೆಗೆ ಗುರಿಮಾಡಿದಾಗ, ತಿಲೋತ್ತ ಮೆಯು ತನ್ನ ದುಃಸ್ಥಿತಿಯನ್ನು ಪತ್ರಮುಖದಿಂದಆಯೇಷೆಗೆ ತಿಳಿಸಿದ್ದರಿಂದಲೇ, ಆಯೇಷೆಯು ಜಗತ್ತಿಂಗನ ಬಂಧವಿಮೋಚನಕ್ಕಾಗಿ ಯತ್ನಿಸಹತ್ತಿ ದ್ದಳು. ತಿಲೋತ್ತಮೆಯು ತನ್ನ ಸದ್ಗುಣಗಳಿಂದ ತನ್ನ ಮಾವನಾದ ಮಾನ ಸಿಂಹನ ಪ್ರೇಮವನ್ನು ಸಂಪಾದಿಸಿ, ಆತನ ಆದರಕ್ಕೆ ಪಾತ್ರಳಾಗಿದ್ದರೂ, ತನ್ನ ಪತಿಯು ಕಾರಾಗೃಹದ ಕಷ್ಟಕ್ಕೆ ಗುರಿಯಾಗಿ ತೊಳಲುತ್ತಿದ್ದದ್ದರಿಂದ, ಆ ಪತಿ ಭಕ್ತಿಪರಾಯಣಳು ಗೂಢವಾದ ಸಂತಾಪದಿಂದ ಕೊರಗುತ್ತಲಿದ್ದಳು, ಈ ಸ್ಥಿತಿ ಯಲ್ಲಿ ತಿಲೋತ್ತಮೆಗೆಆಯೇಷೆಯದರ್ಶನವಾದದ್ದರಿಂದ ಆಕೆಗೆಬಹಳಸಮಾಧಾನ ವಾಯಿತು. ಉರ್ಮಿಲಾರಾಣಿಯ ಸಮ್ಮುಖದಲ್ಲಿ ಅವರಿಬ್ಬರು ಪ್ರಮದೆಯರು ಮನಬಿಚ್ಚಿ ಮಾತಾಡಲು ಸಂಕೋಚ ಪಡುತ್ತಲಿದ್ದರು. ಆಯೇಷೆಯು ಉರ್ಮಿ ಲಾರಾಣಿಯ ಆಗ್ರಹದಿಂದ ಕೆಲವು ದಿನ ಪಾಟಣಾದಲ್ಲಿ ನಿಲ್ಲಬೇಕಾಯಿತು. 'ಆಕೆಯು ತನ್ನ ಆಪ್ತನಾದ ತಾಜಖಾನನ ಮನೆಯಲ್ಲಿರುತ್ತಿದ್ದರೂ, ಆಗಾಗ್ಗೆ ಉರ್ಮಿಲಾರಾಣಿಯನ್ನೂ, ತಿಲೋತ್ತಮೆಯನ್ನೂ ಕಾಣುವದಕ್ಕಾಗಿ ಆಕೆ ಬರುತ್ತಲಿದ್ದಳು. ಆಯೇಷಾ-ತಿಲೋತ್ತಮೆಯರು ಒಂದು ವಿಧದಿಂದ ಸಮಾನ ದುಃಖಿಗಳಾಗಿದ್ದರು; ಅದರಂತೆ ಅವರಿಬ್ಬರೂ ಒಬ್ಬ ಜಗತ್ಸಂಗವನ್ನು ಆಶ್ರಯಿ ಸಿದ್ದರು; ಮೇಲಾಗಿ ಇಬ್ಬರೂ ಸದ್ಗುಣಿಗಳಿದ್ದರು; ಅದ್ದರಿಂದ ಅವರಲ್ಲಿಯ ಪರಿಶುದ್ಧ ಪ್ರೇಮವು ವೃದ್ಧಿ೦ಗತವಾಗತೊಡಗಿತು. ಅವರಿಬ್ಬರ ಪವಿತ್ರ ಸಹ -ವಾಸದಲ್ಲಿ ಎರಡು ತಿಂಗಳುಗಳು ಕಳೆದುಹೋದವು. ಹೀಗಿರುವಾಗ ಆಯೇ ಷೆಯು ಒಂದು ದಿನ ಮಾನಸಿಂಹರವರ ಒಪ್ಪಿಗೆಯಿಂದ ದಿಲ್ಲಿಗೆ ಹೋಗುವ ದನ್ನು ನಿಶ್ಚಯಿಸಿ, ತಿಲೋತ್ತಮೆಗೆ ಹೇಳುವದಕ್ಕಾಗಿ ಆಕೆಯ ಬಳಿಗೆ ಹೊರಟಳು. ಈ ಕಾಲದಲ್ಲಿ ಆಯೇಷೆಯ ಮನಸ್ಸು ಎರಡುಕಡೆಗೆ ಹರಿಯುತ್ತಿತ್ತೆಂದು ಹೇಳಬೇಕಾಗುವದು, ತನ್ನ ಪ್ರೇಮಕ್ಕೆ ಪಾತ್ರನಾದ ಜಗಕ್ಸಿಂಗನನ್ನು ಬಂಧ ಮುಕ್ತಮಾಡುವದಕ್ಕಾಗಿ ಅದು ಒಮ್ಮೆ ದಿಲ್ಲಿ ಯಕಡೆಗೆ ಹರಿಯುತ್ತಿತ್ತು. ಅದ ರಂತೆ ತನಗೆ ಒಡಹುಟ್ಟಿದ ಅಣ್ಣನಿಗಿಂತಲೂ ಹೆಚ್ಚಾಗಿದ್ದ ಉಸ್ಮಾನಖಾನನನ್ನು ಸಮಾಧಾನಗೊಳಿಸುವದಕ್ಕಾಗಿ ಅದು ಒಮ್ಮೆ ಉಸ್ಮಾನನ ಕಡೆಗೆ ಹರಿಯ