ಪುಟ:ತಿಲೋತ್ತಮೆ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಕರಣದ ಔದಾರ್ಯವು. ೧೩೩ ತಿತ್ತು. ಆಯೇಷೆಯು ಇತ್ತ ಪಾಟಣಾದಲ್ಲಿರುವಾಗ ಅತ್ತ ಉಸ್ಮಾನನು ಮಾನಸಿಂಹನೊಡನೆ ಮಾಡಿಕೊಂಡಿದ್ದ ಒಡಂಬಡಿಕೆಯನ್ನು ಮುರಿದು, ಮೊಗ ಲರೊಡನೆ ಕದನಹೂಡಿ, ಸಂಪೂರ್ಣವಾಗಿ ಸೋತು, ಮೊಗಲರ ಮಾಂಡಲಿಕ ತ್ವವನ್ನು ಒಪ್ಪಿಕೊಳ್ಳಬೇಕಾಯಿತು. ನಿಜವಾಗಿ ಉಸ್ಮಾನನ ಪರಾಕ್ರಮವನ್ನು ನೋಡಿದರೆ, ಆತನಿಗೆ ಸೋಲುಬರುವ ಸಂಭವವಿದ್ದಿಲ್ಲ; ಆದರೆ ಉಸ್ಮಾನನು ಹೊರಗಿನ ಜೀವವಾಗಿದ್ದ ಆಯೇಷೆಯು ಉಸ್ಮಾನನನ್ನು ಅಗಲಿಹೋದದ್ದರಿಂದ, ಆತನು ಹತಾಶನಾಗಿರಲು, ಮಾನಸಿಂಹನಂಥ ಪುಸಿದ್ದ ವೀರನು ಆತನನ್ನು ಸೋಲಿಸಿದನು. ಇದನ್ನು ಕೇಳಿದ್ದ ಆಯೇಷೆಯು, ಆಗಲೇ ಉಸ್ಮಾನನ ಬಳಿಗೆ ಹೋಗತಕ್ಕವಳು; ಆದರೆ ಜಗತ್ಸಂಗನ ಬಂಧವಿಮೋಚನೆ ಮಾಡಿಸುವ ದಕ್ಕಾಗಿ ಬಂದ ತಾನು, ಆ ಕೆಲಸ ಮಾಡದೆ ಹೋಗಬಾರದೆಂದು ತಿಳಿದು, ಮೊದಲು ಆಕೆಯು ದಿಲ್ಲಿಗೆ ಹೋಗುವ ಮನಸ್ಸು ಮಾಡಿದಳು. ಸದ್ಯಕ್ಕೆ ಉಸಾನನು ಒಡಂಬಡಿಕೆ ಮಾಡಿಕೊಂಡಿರುವದರಿಂದ, ಆಕೆಗೆ ಒಂದು ಬಗೆ ಯಿಂದ ಸಮಾಧಾನವಾದಂತಾಗಿತ್ತು. ಯಾಕಂದರೆ, ಉಸ್ಮಾನನ ಪರಾಕ್ರಮ ವನ್ನು ಆಕೆಯು ಅರಿತಿದ್ದಳು. ಇಂದಿಲ್ಲ ನಾಳೆ ತಾನು ಉಸ್ಮಾನನ ಬಳಿಗೆ ಹೋಗಿ, ಆತನನ್ನು ಉತ್ಸಾಹಗೊಳಿಸಬಹುದೆಂದು ಆಕೆಯು ಸಮಾಧಾನ ಮಾಡಿಕೊಂಡಳು. ಆಕೆಗೆ, ತಾನುಮಾಡತಕ್ಕ ಎರಡೂಕೆಲಸಗಳು ಸಮಾನಯೋ ಗ್ಯತೆಯವಾಗಿ ತೋರಿದ್ದರಿಂದಲುಮಾಡಬೇಕಾಗಿರುವಕುಮಾರಜಗತ್ತಿಂಗನ ಬಂಧವಿಮೋಚನೆಗಾಗಿ ದಿಲ್ಲಿಗೆ ಹೊರಡಲುದ್ಯುಕ್ತಳಾಗಿದ್ದ ಆಕೆಯು, ತಿಲೋತ್ತ ಮೆಯ ಬಳಿಗೆ ಬಂದಾಗ, ಆ ಸುರಸುಂದರಿಯು, ತನ್ನ ಸ್ಥಿತಿಯನ್ನು ಕುರಿತು ಆಲೋಚಿಸುತ್ತ ಒಬ್ಬಳೇ ಕುಳಿತುಕೊಂಡಿದ್ದಳು. ಅಷ್ಟರಲ್ಲಿ ಆಯೇಷೆಯು ಬಂದದ್ದನ್ನು ನೋಡಿ ಆಕೆಗೆ ಬಹಳ ಸಂತೋಷವಾಯಿತು. ತಿಲೋತ್ತಮೆಯು ಉತ್ಸಾಹದಿಂದ ಎದ್ದು ಆಯೇಷೆಯನ್ನು ಉಪಚರಿಸುವದಕ್ಕಾಗಿ ಆಕೆಗೆ ಎದು ರಾಗಿ ಹೋಗಲು, ಆ ನಬಾಬನಂದಿನಿಯು ತಿಲೋತ್ತಮೆಯನ್ನು ಬಿಗಿಯಾಗಿ ಅಪ್ಪಿ ಕೊಂಡಳು. ಆಗ ವಾತ್ಸಲ್ಯದಮೂಲಕ ಆಯೇಷೆಯ ಕಣೋಳಗಿಂದ ನೀರುಗಳು ಸುರಿಯಹತ್ತಿದವು. ತನಗೆ ಅತ್ಯಂತ ಪ್ರಿಯಳಾಗಿರುವ ತಿಲೋ ತಮೆಯನ್ನು ಅಗಲಿಹೋಗುವಾಗ ಆiಷೆಗೆ ಬಹಳ ವ್ಯಸನವಾಯಿತು. ತಿಲೋತ್ತಮೆಯಾದರೂ ಆಯೇಷೆಯ ಪ್ರಯಾಣದ ಸುದ್ದಿ ಯನ್ನು ಕೇಳಿ