ಪುಟ:ತಿಲೋತ್ತಮೆ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೪ ತಿಲೋತ್ತಮೆ. ದ್ದಳು. ಅವರಿಬ್ಬರು ಆಸನದಲ್ಲಿ ಕುಳಿತುಕೊಂಡಬಳಿಕ ಒಬ್ಬರನ್ನೊಬ್ಬರುನೋಡುತ್ತ ಇಬ್ಬರೂ ಕಣ್ಣೀರುಸುರಿಸಹತ್ತಿದರು. ಒಬ್ಬರ ಮುಖದಿಂದಲೂ ಮಾತು ಹೊರ ಡದಾದವು, ಹೀಗೆ ಮೂಕವೃತ್ತಿಯಲ್ಲಿ ಅವರು ಕಣ್ಣೀರುಸುರಿಸುತ್ತ ಕುಳಿತಿರು ವಾಗ ಆಯೇಷೆಯು ತಿಲೋತ್ತಮೆಯನ್ನು ಕುರಿತು-ತಂಗೀ, ನಾನು ದಿಲ್ಲಿಗೆ ಹೋಗುತ್ತೇನೆ. ಪುನಃ ನಿನ್ನ ದರ್ಶನವಾಗುವ ಆಶೆಯುನನಗಿಲ್ಲ. ದೇವರ ದಯೆ ಯಿಂದ ನನ್ನ ಪ್ರಯತ್ನ ವು ಫಲಿಸಿ, ಕುಮಾರ ಜ೬ ಗಂಗರವರ ಬಂಧವಿ ಮೋಚನೆಯಾದರೆ, ನೀವಿಬ್ಬರು ಸುಖದಿಂದಿದ್ದದ್ದನ್ನು ಕೇಳಿ ನಾನು ಇದ್ದಲ್ಲಿಯೇ ಆನಂದಪಡುವೆನು. ಕುಮಾರರ ಬಂಧವಿಮೋಚನೆಯಾದರೆ, ನಾನು ಕೃತ ಕೃತ್ಯಳಾಗುವೆನು. ಅದಕ್ಕಿಂತ ಹೆಚ್ಚಿನ ಆಶೆಯು ನನಗಿಲ್ಲ. ನಿನ್ನ ನಿರ್ಮಲ ಹೃದಯದವನ್ನು ನಾನು ಬಲ್ಲೆನು, ಕುಮಾರಜಗತ್ಸಂಗರವರಿಗೆ ನೀನು ಯೋಗ್ಯ ಹೆಂಡತಿಯಾಗಿರುತ್ತೀ, ನೀವಿಬ್ಬರು ಸುಖದಿಂದಿರುವದೇ ನನ್ನ ಸುಖವು. ಅಂಥ ಸುಯೋಗವನ್ನು ದೇವರು ಬೇಗನೆ ಒದಗಿಸಿಕೊಡಲಿ! - ಆಯೇಷೆಯ ಈ ಮಾತುಗಳನ್ನು ಕೇಳಿ ನಿರ್ಮಲಾಂತಃಕರಣದ ತಿಲೋತ್ತಮೆಯು ಕನಿಕರಪಟ್ಟಳು. ಆಕೆಯು ಶೋಕಾತಿಶಯದಿಂದ ಆಯೇ ಪೆಯನ್ನು ಕುರಿತು-ಅಕ್ಕಾ, ನೀನು ಹೀಗೇಕೆ ಪರಕೀಯಳಂತೆ ಮಾಡು ಯೇ? ನೀನು ಯುವರಾಜರನ್ನು ಸಂಪೂರ್ಣವಾಗಿ ಪ್ರೀತಿಸುತ್ತೀಯೆಂಬ ದನ್ನು ನಾನು ಬಲ್ಲೆನು, ನಿನ್ನ ಪ್ರಯತ್ನದಿಂದ ಯುವರಾಜರ ಬಂಧವಿ ಮೋಚನೆಯಾದರೆ, ಅವರು ನಿನ್ನನ್ನು ನಿರಾಕರಿಸಬಹುದೇ? ಅವರು ನಿಣ ಕರಿಸಿದರೆ ನಾನು ಸುಮ್ಮನಿರುವೆನೇ? ಒಂದು ವೃಕ್ಷವನ್ನು ಎರಡು ಬಳ್ಳಿಗಳು ಆಶ್ರಯಿಸಿರುವಂತೆ, ನಾವಿಬ್ಬರೂ ಯುವರಾಜರನ್ನು ಆಶ್ರಯಿಸಿ ಸುಖದಿಂದ ಇರೋಣ! ಅನ್ನಲು, ಅಯೇಷೆಯು-ತಂಗೀ, ತಿಲೋತ್ತಮೆ, ನಿನ್ನ೦ಥ ನಿರ್ಮಾತ್ಸರ್ಯದ ಸ್ತ್ರೀ ರತ್ನಗಳು ಜಗತ್ತಿನಲ್ಲಿ ಅತ್ಯಂತ ದುರ್ಲಭವು, ಯಾವ ಸ್ತ್ರೀಯು ನಿನ್ನಂತೆ ತಾನಾಗಿ ಸವತಿಮಾತ್ಸರ್ಯಕ್ಕೆ ಆಸ್ಪದಕೊಟ್ಟಾಳು ಹೇಳು? ನಿನ್ನಂಥ ಉದಾರಾಂತಃಕರಣದ ಸುರಸುಂದರಿಯು ಯುವರಾಜರ ಹೃದಯ ದಲ್ಲಿ ವಾಸಮಾಡಿಕೊಂಡಿರಲು, ಅದರಂತೆ, ನಿನಗಾಗಿಯೇ ಅವರು ತಮ್ಮ ಪಶಸ್ತ್ರ ಹೃದಯವನ್ನೆಲ್ಲ ಕೊಟ್ಟಿರಲು, ನಾನು ಆ ಪುಣ್ಯವಂತರ ಹೃದಯ .ವನ್ನು ವ್ಯಾಪಿಸಿ ನಿನಗೆ ಸಂಕೋಚವನ್ನುಂಟುಮಾಡಲಾರೆನು, ನಿನ್ನ