ಪುಟ:ತಿಲೋತ್ತಮೆ.djvu/೧೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೫ ಅಂತಃಕರಣ ಔದಾರ್ಯವು. ವಾಸಕ್ಕೆ ಸಂಪೂರ್ಣ ಹೃದಯವನ್ನು ಕೊಟ್ಟು ಬಿಟ್ಟಿದ್ದ ಆ ಉದಾರಾಂತಃಕರ ಣದ ಕುಮಾರ ಜಗಕ್ಸಿಂಗರವರು, ಅನ್ಯ ಸ್ತ್ರೀಯರಿಗೆ ತಮ್ಮ ಹೃದಯದಲ್ಲಿ ಸ್ಥಳ ಕೊಡಲಾರರೆಂಬದನ್ನು ನಾನು ಪೂರಾ ಬಲ್ಲೆನು. ಯುವರಾಜರ ಮೇಲಿದ್ದ ನನ್ನ ಪ್ರೇಮವನ್ನು ಹೊರಗೆಡವದೆ, ಗುಪ್ತವಾಗಿಡತಕ್ಕದಿತ್ತು; ಆದರೆ ಅಂಥ ಪ್ರಸಂಗಗಳೇ ಒದಗಿದ್ದರಿಂದ ನಾನು ಅದನ್ನು ಹೊರಗೆಡವಿದೆನು. ಅದಕ್ಕಾಗಿ ಈಗ ನನಗೆ ಪಶ್ಚಾತ್ತಾಪವಾಗುತ್ತಿದೆ. ಆದರೆ ಈಗ ಪಶ್ಚಾತ್ತಾಪಪಟ್ಟು ಮಾಡು ವದೇನು! ಆದದ್ದು ಆಗಿಹೋಯಿತು, ಆದರೆ ತಂಗೀ, ನೀನು ಇನ್ನು ಮೇಲೆ ನನ್ನ ಮುಂದೆ ಈಮಾತು ತೆಗೆಯಬೇಡ. ಅದರಿಂದ ನನಗೆಸುಖವಾಗದು. ಎರಡನೆಯ ವರಬಳಿಯಲ್ಲಿಯೂ ಈಮಾತು ಆಡಬೇಡ, ಕುಮಾರ ಜಗಕ್ಸಿಂಗರವರಿಗೆ ಸಂಪೂ ರ್ಣವಾಗಿ ಹೃದಯವನ್ನು ಒಪ್ಪಿಸಿರುವ ನನಗೆ, ಆ ಯುವರಾಜರ ಹೃದಯದಲ್ಲಿ ಸ್ಥಳವುದೊರೆಯುವಹಾಗಿಲ್ಲದ್ದರಿಂದ, ನಾನು ಅವಿವಾಹಿತಳಾಗಿಯೇ ಜನ್ಮವನ್ನು ಕಳೆಯುವೆನು. ಇದರಲ್ಲಿ ಯುವರಾಜರದಾದರೂ ಏನುತಪ್ಪು ಹೇಳು? ಅವರು ನಿನಗೆ ಸಂಪೂರ್ಣ ಹೃದಯವನ್ನು ಕೊಟ್ಟಿರುವಾಗ, ಅವರು ತಮ್ಮ ಹೃದ ಯದಲ್ಲಿ ನನಗಾಗಿ ಎಲ್ಲಿಸ್ತಳ ತರಬೇಕು? ಆದ್ದರಿಂದ ತಿಲೋತ್ತಮಾ, ನಿನ್ನನ್ನು ನಾನು ಕೈ ಜೋಡಿಸಿ ಬೇಡಿಕೊಳ್ಳುವದೇನಂದರೆ, ನೀನು ಈ ಮಾತನ್ನು ಸಂಪೂ ರ್ಣವಾಗಿ ಮರೆತುಬಿಡು, ಎಂದು ಅಂಗಲಾಚಿ ಬೇಡಿಕೊಂಡಳು. ಅದಕ್ಕೆ ತಿಲೋ? ತಮೆಯು-ಅಕ್ಕಾ, ಈ ಮಾತನ್ನು ನಾನುಹೇಗೆ ಮರೆಯಲಿ? ಅದರಂತೆ, ಅದನ್ನು ಎರಡನೆಯವರಿಗೆ ಹೇಳದೆಯಾದರೂಹೇಗೆ ಇರಲಿ? ಯುವರಾಜರ ಮೇಲಿದ್ದ ನಿನ್ನ ಪ್ರೇಮವನ್ನು ಅವರ ಮುಂದೆ ವ್ಯಕ್ತಪಡಿಸಿದ್ದಕ್ಕಾಗಿ ನೀನು ಪಶ್ಚಾತ್ತಾಪಪಡುವೆಯಲ್ಲ? ಆದರೆ ಅಕ್ಕಾ, ತನ್ನ ಪ್ರಿಯಕರನಿಗೆ ಪ್ರೇಮದ ಸಂಗತಿಯನ್ನು ತಿಳಿಸದಿದ್ದರೆ, ಸುಖವಾದರೂ ಹೇಗಾಗುವದು ನೀನೇ ಹೇಳು. ನನ್ನಂತೆ ನೀನಾದರೂ ಯುವರಾಜರನ್ನು ಪ್ರೀತಿಸುತ್ತಿರುವೈಯಷ್ಟೇ? ಅಂದಬ ಳಿಕ ನನ್ನಂತೆ ನೀನು ವಿರಹವ್ಯಥೆಗೆ ಯಾಕೆ ಒಳಗಾಗುವದಿಲ್ಲ! ಆಯೇಷೆಯು ತಿಲೋತ್ತಮೆಯ ಸರಲ ಹೃದಯಕ್ಕಾಗಿ ಆನಂದಪ -ಟ್ಟಳು. ಆಕೆಯು ಲಜ್ಜೆಯಿಂದ ತಲೆಬಾಗಿ ತಿಲೋತ್ತಮೆಯ ಬಲಹಸ್ತವನ್ನು ತನ್ನ ಎರಡೂ ಕೈಗಳಿಂದ ಹಿಡಿದು ಅದರೊಡನೆ ಆಡುತ್ತ ಸ್ವಲ್ಪ ಹೊತ್ತು ಸುಮ್ಮನೆ ಕುಳಿತು ಆಮೇಲೆ ವಿಷಾದಪೂರ್ವಕವಾಗಿ ನಕ್ಕು -ತಂಗೀ, ತಿಲೋ