ಪುಟ:ತಿಲೋತ್ತಮೆ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೬ ತಿಲೋತ್ತಮೆ. ಇಮಾ, ನನ್ನ ಹೃದಯವು ನಿನ್ನಷ್ಟು ಕೋಮಲವಾದದ್ದಲ್ಲ. ಅದು ಪಾಷಾ ಣಕ್ಕಿಂತ ಕಠಿಣವಾಗಿರುತ್ತದೆ. ನೀರಸವಾದ ನನ ಹಾಳು ಹೃದಯದಲ್ಲಿ ನಿನ್ನ ಹೃದಯದಷ್ಟು ಮಾರ್ದವವು ಇರುವದಿಲ್ಲೆಂಬದು ನಿಜವು; ಆದರೆ ಪ್ರಿಯ ಸಖೀ, ಯುವರಾಜರ ಹೃದಯದಲ್ಲಿ ನಿನ್ನ ಹೊರತು ಅನ್ಯಶ್ರೀಗೆ ಸ್ಥಳವು ದೊರೆಯದಹಾಗಿರುವದರಿಂದ, ನಾನು ನನ್ನ ಹೃದಯವನ್ನು ವಜಕ್ಕಿಂತ ಕಠಿಣವಾಗಿ ಮಾಡಬೇಕಾಗಿದೆ, ಪತಿ-ಪತ್ನಿಯರಲ್ಲಿ ಪರಸ್ಪರರ ವಿಷಯವಾಗಿ ರುವ ಅಕೃತ್ರಿಮ ಪ್ರೇಮವೇ ಸರಸಪ್ರೇಮವು, ಹೀಗೆ ಪರಸ್ಪರವಲ್ಲದ ಏಕಾಕಿ ಯಾದ ಪ್ರೇಮವು 'ಎಷ್ಟು ಬಲವತ್ತರವಾಗಿದ್ದರೂ, ಅದು ನೀರಸವಾದದ್ದೇ ಸರಿ, ಇದರಮೇಲಿಂದ ಯುವರಾಜರ ವಿಷಯವಾಗಿ ನಿನ್ನಲ್ಲಿರುವ ಅಕ್ರ ಶ್ರೀಮಪ್ರೇಮವು ಸರಸಪ್ರೇಮವೆನಿಸುವದು; ಅದೇ ಯುವರಾಜರ ವಿಷಯವಾಗಿ ನನ್ನಲ್ಲಿರುವ ಪ್ರಮವು ನೀರಸಪ್ರಮವೆನಿಸುವದು, ಯುವರಾಜರಿಗೆ ನಿನ್ನನ್ನು ಪ್ರೀತಿಸಿದಂತೆ, ನನ್ನನ್ನು ಪ್ರೀತಿಸಲಿಕ್ಕೆ ಬರುವಹಾಗಿಲ್ಲ. ಆದರೆ ತಂಗೀ, ಇದು ಮಾತ್ಸರ್ಯದ ಮಾತಲ್ಲ; ಇದ್ದದ್ದನ್ನು ಇದ್ದ ಹಾಗೆ ಹೇಳುವದು. ಇದಕ್ಕಾಗಿ ನೀನು ವಿಷಾದ ಜಡತಕ್ಕದ್ದಲ್ಲ. ಯುವರಾಜರನ್ನು ಪ್ರೀತಿಸುವದರ ಹೊರತು, ಬೇರೆ ಯಾವದೊಂದನ್ನೂ ನಾನು ಚಿಂತಿಸುವದಿಲ್ಲ. ನಾನು ಸುಖಿಯಾಗಿದ್ದೇನೆ. ನನಗೆ ಸುಖವಾಗಬೇಕೆಂದು ನೀನು ಸರ್ವಥಾ ಕಷ್ಟ ಪಡ ಬೇಡ, ನನ್ನ ಜೀವನಕ್ಕೆ ಯಾತನೆಯಾಗುತ್ತಿರಬಹುದೆಂದು ಭಾವಿಸಿ, ನೀನು ನಿನ್ನ ಸರಳ ಹೃದಯಕ್ಕೆ ವ್ಯಥೆಯುನ್ನುಂಟುಮಾಡಿಕೊಳ್ಳಬೇಡ, ಎಂದು ಹೇಳಿದಳು, ಈ ಮಾತುಗಳನ್ನು ಕೇಳಿ ತಿಲೋತ್ತಮೆಯ ಹೃದಯವು ಕರಗಿ ಆಕೆಯು ಕಣ್ಣೀರುಸುರಿಸುತ್ತ-ಅಕ್ಕಾ, ನೀನು ಹೀಗೇಕೆ ಉದಾಸೀನಳಾ ಗುತ್ತೀ? ಪುರುಷರ ಹೃದಯವು ಸಮುದ್ರದಂತೆ ಇರುತ್ತದೆ. ಆ ಸಮುದ್ರ ದೊಳಗಿಂದ ತಮಗೆ ಬೇಕಾದಷ್ಟು ಪ್ರೇಮವನ್ನು ಸ್ತ್ರೀಯರು ಯಾಕೆ ಸಂಪಾ ದಿಸಿಕೊಳ್ಳಬಾರದು? ಪ್ರಿಯಭಗಿನೀ ಆಯೇಷಾ, ನೀನು ಪ್ರಾಣಕ್ಕಿಂತಲೂ ಹೆಚ್ಚಾಗಿ ಯುವರಾಜರನ್ನು ಪ್ರೀತಿಸುತ್ತೀ, ಅಂದಬಳಿಕ ಪ್ರಸಿದ್ದ ರೀತಿ ಯಿಂದ ಅವರ ಪ್ರೇಮಲಾಭವನ್ನು ಸಂವಾದಿಸಿ, ನೀನು ಯಾಕೆ ಸುಖಿಸ ಬಾರದು? ರಾಜಪುತ್ರರಮೇಲೆ ಅನ್ಯಶ್ರೀಯು ಪ್ರೇಮಮಾಡಿದರೆ, ತಿಲೋತ್ರ ಮೆಯು ಮಾತ್ಸರ್ಯಪಟ್ಟಾಳೆಂದು ನೀನು ಭಾವಿಸುತ್ತಿರಬಹುದು; ಹಾಗಿ