ಪುಟ:ತಿಲೋತ್ತಮೆ.djvu/೧೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܘ ಅಂತಃಕರಣದ ಔದಾರ್ಯವು . ೧೩೭ ದ್ದರೆ ನಿನ್ನ ಭಾವನೆಯು ಅಯೋಗ್ಯವಾದದ್ದೆಂದು ತಿಳಿದುಕೋ, ತಿಲೋತ್ರ ಮೆಯು ಅಷ್ಟು ಕುದ್ರ ಹೃದಯದವಳಲ್ಲೆಂಬದನ್ನು ಲಕ್ಷದಲ್ಲಿಡು, ನಬಾಬ ನಂದಿನೀ, ನಿನ್ನ೦ಥ ಗುಣಾಢಳಾದ ಮಹಿಲಾಮಣಿಯು ರಾಜಪುತ್ರನ ಪ್ರೇಮಕ್ಕೆ ಪಾತ್ರಳಾಗಿರುವದರ ಸ್ಮರಣವಾದಕೂಡಲೆ, ನನ್ನ ಸರ್ವಾ೦ಗವು ಪುಲುಕಿತವಾಗುತ್ತದೆ! ನಾವಿಬ್ಬರೂ ಯುವರಾಜರನ್ನು ಆಶ್ರಯಿಸಿ ಸುಖಿಗಳಾಗಬೇಕೆಂದು ನಾನು ಮನಃಪೂರ್ವಕವಾಗಿ ಇಚ್ಚಿಸುವೆನು, ನಾವಿ ಬ್ಬರೂ ಒಬ್ಬ ರಾಜಕುಮಾರನನ್ನು ಪ್ರೀತಿಸುತ್ತಿರುವದರಿಂದ ನಮ್ಮಿಬ್ಬರ ಪ್ರೇಮದಲ್ಲಿ ಐಕ್ಯವಿರುವದು ಅವಶ್ಯವಾಗಿರುತ್ತದೆ; ಆದ್ದರಿಂದ ಪ್ರಿಯ ಭಗಿನೀ, ಆಯೇಷ, ಯುವರಾಜರ ಪ್ರೇಮಸಂಪಾದನೆಗಾಗಿ ನೀನು ಯತ್ನಿ ಸಲೇ ಬೇಕು. - ತಿಲೋತ್ತಮೆಯ ಈ ಮಾತುಗಳನ್ನು ಕೇಳಿ ಆಯೇಷೆಯು ಆಕೆಯನ್ನು ಬಿಗಿಯಾಗಿ ಅಪ್ಪಿಕೊಂಡಳು. ಆಕೆಯು ತನ್ನ ಕೋಮಲಹಸ್ತದಿಂದ ತಿಲೋ ತಮೆರು ಗದ್ದವನ್ನು ಹಿಡಿದು ಆಕೆಯ ನಿಷ್ಕಲಂಕ ಮುಖವನು ಏಕಾಗ್ರತೆ ಯಿಂದ ನೋಡುತ್ತ-ನಿನ್ನ೦ಥ ಸರಲಹೃದಯದ, ಹಾಗು ಪ್ರೇಮಲ ಸ್ವಭಾ ವದ ಸ್ತ್ರೀಯರ ಮುಖದಿಂದ ಇಂಥ ಮಾತುಗಳು ಹೊರಡತಕ್ಕವೇ ಸರಿ, ಇಂಥ ಉದಾರ ಹೃದಯದ ಸ್ತ್ರೀಯು ದೊರೆತದ್ದಕ್ಕಾಗಿ ಯುವರಾಜರ ಸುದೈವವನ್ನು ಎಷ್ಟು ಕೊಂಡಾಡಿದರೂ ಸ್ವಲ್ಪವೇ ಇರುವದು, ನಿನ್ನ ಸಹವಾಸದಲ್ಲಿ ಯುವ ರಾಜರಿಗೆ ಲೇಶವಾದರೂ ದುಃಖವು ಸೋ೦ಕಲಾರದೆಂದು ನಾನು ಖಂಡಿತವಾಗಿ ಹೇಳುತ್ತೇನೆ; ಆದರೆ ತಿಲೋತ್ತಮೇ, ನನ್ನ ಜೀವನಕ್ರಮವನ್ನು ನಾನು ನಿರ್ಧರಿಸಿಬಿಟ್ಟಿರುವೆನು ಇನ್ನು ಮೇಲೆ ಅದರಲ್ಲಿ ಅಂತರವಾಗುವ ಹಾಗಿಲ್ಲ. ನನ್ನ ನಿಶ್ಚಯವನ್ನು ಪಾಲಿಸುವದರಲ್ಲಿಯೇ ನನಗೆ ಆನಂದವಿರುವದು. ಆದರೆ ಪ್ರಿಯಭಗಿನೀ, ಇನ್ನು ಈ ಮಾತು ಇಲ್ಲಿಗೆ ಸಾಕು, ಮಾತಿನ ಭರ ದಲ್ಲಿ ಎಷ್ಟು ವೇಳೆಯು ಹೋಗಿಬಿಟ್ಟಿತು! ಇನ್ನು ಮೇಲೆ ನಮ್ಮಿಬ್ಬರ ದರ್ಶ ನವು ಪುನಃ ಆಗಲಾರದು. ನನ್ನ ಬಂಧುವಾದ ಉಸ್ಮಾನಖಾನನು ಯುದ್ಧ ದಲ್ಲಿ ಸೋತು ಪುನಃ ಮೊಗಲರ ಮಾಂಡಲಿಕತ್ವವನ್ನು ಒಪ್ಪಿಕೊಂಡಿ ರುವನು. ಯುವರಾಜರ ಬಂಧವಿಮೋಚನೆಯಾದನಂತರ ನಾನು ನನ ಬಂಧುವಿನ ಬಳಿಗೆ ಹೋಗುತ್ತೇನೆ. ಸದ್ಯಕ್ಕೆ ಮೊಗ