ಪುಟ:ತಿಲೋತ್ತಮೆ.djvu/೧೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩೮ ತಿಲೋತ್ತಮೆ. ಲರು ಪಠಾಣರೊಡನೆ ಒಡಂಬಡಿಕೆ ಮಾಡಿಕೊಂಡಿದ್ದರಾ, ಮೊಗಲರು ಬಲಿ ಸ್ಥರೂ, ವೈಭವಶಾಲಿಗಳೂ ಆದ್ದರಿಂದ ಪಠಾಣರನ್ನು ರಸಾತಳಕ್ಕೆ ಇಳಿ ಸದೆಬಿಡರು. ಪಠಾಣರೊಡನೆಯೇ ಆಯೇಷೆಯ ಅವತಾರದ ಸಮಾ ಸ್ವಿಯೂ ಆಗುವದು, ನನ್ನ ಮರಣದ ವಾರ್ತೆಯು ಸಹ ನಿನಗೆ ಹತ್ತ ಲಿಕ್ಕಿಲ್ಲ: ಆದ್ದರಿಂದ ಪ್ರಿಯಭಗಿನೀ, ಇದೇ ನಮ್ಮಿಬ್ಬರ ಕಡೆಯಭಟ್ಟ ಯೆಂದು ತಿಳಿದುಕೋ, ಎಂದು ಹೇಳಿದಳು. ಅದನ್ನು ಕೇಳಿ ತಿಲೋತ್ತ ಮೆಗೆ ಬಹಳ ವ್ಯಸನವಾಯಿತು. ಆಯೇಷೆಯ ಮನಸ್ಸನ್ನು ತಿರುಗಿಸು ವದಕ್ಕಾಗಿ ಆಕೆಯು ಮಾಡಿದ ಪ್ರಯತ್ನವೆಲ್ಲ ವ್ಯರ್ಥವಾಯಿತು, ನಬಾ ಬಜಾದಿಯು ತನ್ನ ನಿಶ್ಚಯವನ್ನು ಬಿಡಲಿಲ್ಲ. ಅವರಿಬ್ಬರು ಹೀಗೆ ಮಾತಾಡುತ್ತ ಕುಳಿತಿರುವಾಗ ಒಬ್ಬ ದಾಸಿಯು ಬಂದು-ಮಹಾರಾ ಣೀ ಸಾಹೇಬರು ನಿಮ್ಮಿಬ್ಬರನ್ನು ಕರೆಯುವರು ಎಂದು ಹೇಳಲು, ತಿಲೋತ್ತಮೆಯು ಆಯೇಷೆಯೊಡನೆ ಅತ್ತಕಡೆಗೆ ಹೊರಟುಹೋದಳು. - ಕೆಲಹೊತ್ತಿನ ಮೇಲೆ ಆಯೇಷೆಯು ಉರ್ಮಿಲಾರಾಣಿಯ ಅನು ಮತಿಯಿಂದ ತನ್ನ ಮನೆಗೆ ಹೊರಟು ಹೋದಳು. ಆಕೆಯು ದಿಲ್ಲಿಗೆ ಹೊರಡುವ ಮೊದಲು ತನ್ನ ಬಂಧುವಾದ ಉಸ್ಮಾನನಿಗೆ, ಒಂದು ಪತ್ರ ವನ್ನು ಬರೆಯಬೇಕೆಂದು ಯೋಚಿಸಿ, ಏನು ಬರೆಯಬೇಕೆಂಬದನ್ನು ಕುರಿತು ಆಲೋಚಿಸತೊಡಗಿದಳು, ಉಸ್ಮಾನನ ಮೇಲಿದ್ದ ಆಕೆಯ ಅಕ್ಷ ತ್ರಿಮ ಬಂಧುಪ್ರೇಮದ ಯೋಗದಿಂದ, ಆಕೆಗೆ ಪತ್ರ ಬರೆಯುವ ಸ್ಫೂರ್ತಿಯು ಸಹಜವಾಗಿ ಆಯಿತು, ನಿರಾಲೋಚಿತವಾಗಿ ಬರೆದ ಸ್ಫೂರ್ತಿಪ್ರೇರಿತವಾದ ಆ ಪತ್ರವು, ಸ್ವಲ್ಪ ಹೊತ್ತಿನಲ್ಲಿ ಬರೆದು ಸಿದ್ಧವಾಯಿತು, ಅದನ್ನು ಆಯೇಷೆಯು ತನ್ನೊಳಗೆ ಓದಿನೋಡಿ ಸಮಾಧಾನಪಟ್ಟಳು. ಆ ಪತ್ರದ ಅಭಿಪ್ರಾಯವೇನಂದರೆ ಪ್ರಿಯಬಂಧು ಉಸ್ಮಾನ ಅನೇಕ ಯುದ್ಧಗಳಲ್ಲಿ ನೀವು ಸೋತದ್ದನ್ನು ಕೇಳಿದ್ದೇನೆ; ಆದರೆ 'ಅದರಿಂದ ಎಷ್ಟು ಮಾತ್ರವೂ ನಾನು ಎದೆಗುಂದಿರುವದಿಲ್ಲ; ಯಾಕಂ 'ದರೆ, ನಿಮ್ಮ ಹೃದಯದಲ್ಲಿ ಅಲೌಕಿಕಧೈರ್ಯ, ವಿಪುಲಸಾಹಸ, ಮಹತ್ಯ ರವಾದ ಉತ್ಸಾಹ, ಜಗತ್ತನ್ನು ದಂಗುಬಡಿಸುವ ಅಪೂರ್ವಶೌರ್ಯ ಇವು