ಪುಟ:ತಿಲೋತ್ತಮೆ.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಂತಃಕರಣದ ಔದಾರ್ಯವು. ೧೩೯ ವಾಸಿಸುವವೆಂಬದನ್ನು ನಾನು ಬಲ್ಲೆನು, ನಿಮ್ಮ ಅಸಾಮಾನ್ಯವಾದ 'ಸಾಹಸಕ್ಕೆ ತ್ರೈಲೋಕ್ಯದಲ್ಲಿ ಜೋಡಿಲ್ಲ; ಅಂದಬಳಿಕ ಇಂಥ ನೂರಾರು ಯುದ್ಧಗಳಲ್ಲಿ ದುರ್ದೈವದಿಂದ ನಿಮಗೆ ಸೋಲುಬಂದರೂ ನೀವು ಉದಾ ಸೀನರಾಗಲಾರಿರೆಂಬ ನಂಬಿಗೆಯು ನನಗಿರುತ್ತದೆ. ಕಾಲಗತಿಯು ಎಂಥ ವರಿಗೂ ಒಂದೇ ಸವನಾಗಿರುವದಿಲ್ಲ. ಏರಿಳಿತಗಳು ಎಲ್ಲರಪಾಲಿಗೆ ಬರತಕ್ಕೆ ವೆಂತಲೇ ಹೇಳಬೇಕಾಗುವದು. ಯಾವದೊಂದು ಸ್ಮಿತಿಯು ಕಡೆತನಕ `ಒಂದೇ ಸವನೆ ಇರುತ್ತದೆಂದು ತಿಳಿಯುವದು ಹುಚ್ಚತನವೇ ಸರಿ. ಇಂದ ಅರಸನಿದ್ದವನು ನಾಳೆ ಬಡವನಾಗಬಹುದು. ಕಾಲದ ಈ ಕುಟಿಲಗತಿಯು ಸ್ವಭಾವಸಿದ್ಧವಾಗಿದ್ದರೂ, ಅದನ್ನು ಸಹಿಸುವಧೈರ್ಯವು ಎಲ್ಲರಿಗೂ ಇರು ವದಿಲ್ಲ, ಅದನ್ನು ಸಂಪಾದಿಸಿರುವವನೇ ಪುರುಷಶ್ರೇಷ್ಟನೆನಿಸಿಕೊಳ್ಳುವನು; ಅವನಲ್ಲಿಯೇ ನಿಜವಾದ ಪೌರುಷವಿರುವದು. ಇಂಥ ಕಠಿಣಕಾಲದಲ್ಲಿ ನಿಮ್ಮ ನು ನಾನು ಬಿಟ್ಟು ಬಂದದ್ದು ಆಸ ರಾಧವಾಯಿತೆಂದು ಒಪ್ಪಿಕೊಳ್ಳದೆಯಿರಲಾರೆನು. ಪ್ರಿಯ ಬಂಧೂ, ನನ್ನ ಮೇಲೆ ನಿಮ್ಮ ಪ್ರೇಮವು ವಿಶೇಷವಾಗಿದ್ದದ್ದರಿಂದ, ನನ್ನ ವಿಯೋಗದಿಂದ ನೀವು ನಿರುತ್ಸಾಹಿಗಳಾದಿರೆಂಬದರ ಕಲ್ಪನೆಯು ಈಗ ನನಗೆ ಆಗಿರುತ್ತದೆ. ಆ ಹೇಡಿ ನಿರುತ್ಸಾಹವೃತ್ತಿಯೇ ನಿಮ್ಮ ಈ ಅಪಜಯಕ್ಕೆ ಕಾರಣವಾಗಿ ರಬಹುದು, ನನ್ನ ಈ ಅಧಮಕೃತ್ಯಕ್ಕಾಗಿ ನಾನು ಯಾವಾಗಲೂ ಪಶ್ಚಾ ತ್ಯಾಸ ಪಡುತ್ತಿರುವೆನು; ಆದರೆ ನನ್ನನ್ನು ನೀವು ವಿಶೇಷವಾಗಿ ಪ್ರೀತಿ ಸುತ್ತಿರುವದರಿಂದ, ನನ್ನ ಈ ಅಪರಾಧವನ್ನು ನೀವು ಕಮಿಸಬಾರದೇನು? ನಾನು ನಿಮ್ಮನ್ನು ಬಿಟ್ಟು ಇಲ್ಲಿಗೆ ಯಾಕೆ ಬಂದೆನೆಂಬದರ ಕಾರ ಣವು ನಿಮಗೆ ತಿಳಿಯದಿದ್ದರೂ ಚಿಂತೆಯಿಲ್ಲ, ಅದನ್ನು ಈಗ ನಾನು ಬಾಯಿ ಬಿಚ್ಚಿ ಹೇಳುವದೂ ಇಲ್ಲ, ಆದರೆ ನಾನು ಯಾವ ವಿಷಯಸುಖಕ್ಕೂ ಆಶ ಮಾಡಿ ಇಲ್ಲಿಗೆ ಬಂದಿರುವದಿಲ್ಲೆಂಬದು ನಿಜವು, ಯಃಕಶ್ಚಿತವಾದ ವಿಷಯ ಸುಖದ ಆಶೆಯಿಂದ ಅತ್ಯಂತ ಪ್ರೀತ್ಯಾಸ್ಪದರಾದ ಜನರನ್ನು ಅಗಲಿ ಬರು ವಂಥ ಕುದಳು, ಆಯೇಷೆಯಲ್ಲೆಂಬದನ್ನು ತಾವು ಮರೆಯಬಾರದು ನೀವು ನನ್ನ ಮೇಲೆ ಮಾಡುವ ಪ್ರೇಮಕ್ಕಾಗಿ ಸರ್ವಸ್ವವನ್ನು ಕಾಲಿ ನಿಂದ ಒದೆಯುವದಕ್ಕೆ ಆಯೇಷೆಯು ಹಿಂದುಮುಂದು ನೋಡುವವಳಲ್ಲ;