ಪುಟ:ತಿಲೋತ್ತಮೆ.djvu/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಾತ ಯದಿಂದ ತರುಣನಿಗೆ ಮುಜುರೆಮಾಡಿ ಆತನ ಕುದುರೆಯನ್ನು ಹಿಡ ಕೊಂಡು ಕಟ್ಟಿಹೋದನು. ಅಷ್ಟರಲ್ಲಿ ಮತ್ತೊಬ್ಬ ಸೇವಕನು ಕುದುರೆಯ ಜಿ॰ ನು ಇಳಿಸತೊಡಗಿದನು. ಇನ್ನೊಬ್ಬನು ಕುದುರೆಯ ಮೇವು ದಾಣಿ ಗಳ ವ್ಯವಸ್ಥೆ ಮಾಡತೊಡಗಿದನು. ಸೇವಕರ ಈ ಸೌಜನ್ಯವನ್ನೂ, ಅತಿ ಫಿನಾ ತತ್ಪರತೆಯನ್ನೂ ನೋಡಿ ತರುಣನು ಬಹಳ ಸಮಾಧಾನಪಟ್ಟನು. ಆತನು ಅತ್ಯಂತ ಕೃತಜ್ಞತೆಯಿಂದ ಆ ಸೌಜನ್ಯ ಸ್ವಭಾವದ ಸೇವಕ ರನ್ನು ಮನಸ್ಸಿನಲ್ಲಿ ಅಭಿನಂದಿಸುತ್ತ, ಆನಂದಮುದ್ರೆಯಿಂದ ಗುಡಿಯ ಮಧ್ಯರಂಗವನ್ನು ಹೊಗಲು, ಒಂದು ದಿವ್ಯ ನೋಟವು ಆತನ ಕಣ್ಣಿಗೆ ಬಿದ್ದು ತಟ್ಟನೆ ಆತನ ಹೃದಯದಲ್ಲಿ ಭಕ್ತಿರಸವು ಉಕ್ಕೇರತೊಡಗಿತು. ದಿ॰ ಸದಕಾಂತಿಯನ್ನು ಅಡಗಿಸುವ ದಿವ್ಯ ಕಾಂತಿಯುಳ್ಳ ಒಂದು ಶಾಂತ ಮೂತಿಗೆ, ಆ ತರುಣನು ಸಾಷ್ಟಾಂಗವಾಗಿ ಎರಗಿದನು. ಕೂಡಲೆ ಆ ಶಾಂತಮೂರ್ತಿಯು ನಗೆಮೊಗದಿಂದ ವಿಜಯಾಭವ, ಆಯುಷ್ಮಾನ್‌ಭವ' ೧.೦ಬ ಆಶೀರ್ವದಿಸಲು ಹೊರಡಲು, ಅ ಮಂಗಲೋಕ್ಕಿಯಲ್ಲಿ ಸ್ತ್ರೀಯರ ಮಂಜುಲವಾದ ಕಂಕಣದ ,ನಿಯು ಬೆರತು, ಸರಸವಾದ ಆ ಮಿಶ್ರಧ್ಯ ನಿಯು ತರುಣನ ಕರ್ಣ ರಂಧ್ರವನ್ನು ಪ್ರವೇಶಿಸಿ, ಆತನನ್ನು ಧನ್ಯನನ್ನಾ \ಯ, ಕುತೂಹಲವೂರ್ಣನನಾಗಿಯೂ ಮಾಡಿತು. ತರುಣನು ೧ ತ್ಸುಕತೆಯಿಂದ ಎದುಸಿಂತು ಮತ್ತೊಮ್ಮೆ ಆ ಶಾಂತಮೂರ್ತಿಯನ್ನು ಅತ್ಯ೦ತ ಲಿ॰ ನತೆಯಿಂದ ನೋಡಿ, ಆ ಕಂಕಣಧ್ವನಿಯು ಎಲ್ಲಿಯದೆಂದು ಸುತ್ತು ಮುತ್ತೈ ನೋಡಲು, ಆ ಶಾಂತಮೂರ್ತಿಯ ಎಡಗಡೆಯಲ್ಲಿ ಇಬ್ಬರು ಸುಂದರಿಯರು ಕೌತುಕದಿಂದ ತನ್ನನ್ನು ನೋಡುತ್ತ ಮರ್ಯಾ ದೆಯಿಂದ ಎದ್ದುನಿಂತುಕೊಂಡಿದ್ದರು. ಅವರಲ್ಲಿ ಅತ್ಯಂತ ಸುಂದರಿಯಾದ ಒಬ್ಬ ತರುಣಿಯ ತರಲಕಟಾಕ್ಷದಿಂದ ತರುಣನ ಕೆಚ್ಚುಗಟ್ಟಿದ ಹೃದ ಯವು ಕಂಪಿಸಿ, ಅದರಲ್ಲಿ ಆ ಸುಂದರಿಯ ದಿವ್ಯಮೂರ್ತಿಯು ಸ್ಥಿರ ಆಗಿ ಬಿಂಬಿಸಿತು. ಇದರಿಂದ ತರುಣನ ಮನಸ್ಸು ಇತ್ಯಂಡವಾಯಿತು. ಋಷಿಸದೃಶ ನಾದ ಆ ಶಾಂತಮೂರ್ತಿಯಲ್ಲಿ ಆತನ ಭಕ್ತಿಯು ಉತ್ಪನ್ನವಾದದ್ದು ಆಶ್ಚರ್ಯ ವಲ್ಲ, ಅದು ವೇದಧರ್ಮಿಯಾದ ಆ ತರುಣನ ಶೀಲವೇ