ಪುಟ:ತಿಲೋತ್ತಮೆ.djvu/೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ಆಗಿತ್ತು, ಆದರೆ ತರುಣಿಯರ ಕಟಾಕ್ಷಕ್ಕೆ ಎಂದೂ ಹಣಿಯದೆ ಇದ್ದ ತನ್ನ ಹೃದಯವು, ಇಂದು ಆ ಸುಂದರ ತರುಣಿಯ ಸಂದರ್ಶನಮಾತ್ರ ದಿಂದ ಕಂಪಿಸಿದ್ದನ್ನು ನೋಡಿ ಆತನಿಗೆ ಪರಮಾಶ್ಚರ್ಯವಾಯಿತು. ತಾನು. ಯುದ್ಧದಲ್ಲಿ ಯಾವಾಗಲೂ ಜಯಶೀಲನಾಗಬೇಕು; ದ್ವಂದ್ವ ಯುದ್ಧದಲ್ಲಿ ಮಹಾ ಮಹಾ ಸಮರ್ಥರನ್ನು ನೆಲಕ್ಕುರುಳಿಸಬೇಕು, ಎಂಬಿವೇ ಮೊದ ಲಾದ ಪೌರುಷ ವಿಚಾರಗಳಿಂದ ಯುದ್ಧ ಕೌಶಲ್ಯವನ್ನೂ, ಮೈಕಸುವನ್ನೂ ಮನಮುಟ್ಟಿ ಬೆಳೆಸುತ್ತಲಿದ್ದ ಆ ತರುಣನು, ಹೆಂಗಳೆಯರ ಓರೆನೋ? ಟದ ಬಲೆಗೆ ಇಂದಿನವರೆಗೆ ಸಿಕ್ಕಿಲ್ಲ. ಅಥವಾ ಇಂದಿನವರೆಗೆ ಯಾವ ಸುಂದರಿಯೂ ಆ ನಿ೦ ತಿವಿಶಾರದನಾದ ತರುಣನನ್ನು ಬಲೆಯಲ್ಲಿ ಹಿಡಿ ಯಲಿಕ್ಕೆ ಸಮರ್ಥಳಾಗಿಲ್ಲವೆಂತಲೆ: ಹೇಳಬಹುದು, ಆದರೆ ಇಂದು ಮಾತ್ರ ಆ ತರುಣನ ಹೃದಯವು ಅಭ॰ ದ್ಯವಾಗಿ ಉಳಿಯಲಿಲ್ಲ. ಸತ್ಯು ರುಷ ಸನ್ನಿಧಿಯಲ್ಲಿ ತನ್ನ ಮನಸ್ಸು ಹೀಗೆ ಒಬ್ಬ ಅಪರಿಚಿತ ಸುಂದರಿಯ ಮೇಲೆ ಹರಿಕಾದದನ್ನು ನೋಡಿ ತರುಣನು ಮನಸ್ಸಿನಲ್ಲಿ ನಾಚಿದನು; ಪರಸ್ತ್ರೀಯನ್ನು ಕಾಪಬುದ್ದಿ ಯಿಂದ ನೋಡಿದ ಮಹಾದೋಷಕ್ಕೆ ತಾನು ಎಲ್ಲಿ ಪಾತ್ರನಾಗುವೆನೋ ಎಂದು ಬೆದರಿದನು. ಆತನು ತರುಣಿಯಮೇಲೆ ಹರಿಯುತ್ತಿರುವ ತನ್ನ ಮನಸ್ಸನ್ನು ಬಿಗಿಹಿಡಿದು ಪಶ್ಚಾತ್ತಾಪದಿಂದ ಆ ಶಾಂ ತಮೂರ್ತಿಯನ್ನು ನೋಡತೊಡಗಿದನು. ಆದರೂ ಮನಸ್ಸು ತರುಣಿಯಕ ಡೆಗೆ ಹರಿಯಹತ್ತಿತು. ಅಷ್ಟರಲ್ಲಿ ಆ ತೇಜೋಮೂರ್ತಿಯು ಗಂಭೀರ ಸ್ವರ ದಿಂದ ಆ ತರುಣನನ್ನು ಕುರಿತು- ಜಗತ್ವಿಂಹ, ಬಾ, ಇತ್ತ ಕುಳಿತುಕೊಳ್ಳು. ನಿಮ್ಮ ತಂದೆಯಾದ ಅಂಬರಾಧೀಶ್ವರ ಮಾನಸಿಂಹರವರಿಗೆ ಕ್ಷೇಮವೇ? ಅಕಬರ ಬಾದಶಹನ ಪಕ್ಷಪಾತಿಗಳಾದ ಆ ರಜಪೂತಿಷ್ಟರ ಸ್ವಾಮಿಭೆ ಕ್ರಿಯ ರಾಜಕಾರ್ಯಗಳು ನಿರ್ವಿಘ್ನವಾಗಿ ನಡೆದಿರುವನೆ? ಒಡಿಸಾಪ್ರಾಂತ ದಲ್ಲಿ ಮೊಗಲರನ್ನು ಮೀರಿ ನಿಂತಿರುವ ಕಾತಲೂಖಾನನನ್ನು ಬಗ್ಗು ಬಡಿ ಯುವದಕ್ಕಾಗಿ ಅವರು ಯತ್ನಿಸುತ್ತಿರುವರು. ಕಾತಲೂಖಾನನ ಆಳವನ್ನು ಗುಪ್ತ ರೀತಿಯಿಂದ ತಿಳಕೊಂಡು ಬರುವದಕ್ಕಾಗಿ ವೇಷಾಂತರದಿಂದ ನಿನ್ನ ನ್ನು ನಿಮ್ಮ ತಂದೆಯವರು ಕಳಿಸಿದ್ದರೆಂದು ಕೇಳಿದ್ದೇನೆ. ನೀನು ಹೋದ ಕಾಠ್ಯವು ಚನ್ನಾಗಿ ಸಾಧಿಸಿತಷ್ಟೆ? ನೀನು ಇಲ್ಲಿ ಯಾವ ಮಾತಿನಿಂದಲೂ ಸಂಕೋಚ; 0