ಪುಟ:ತಿಲೋತ್ತಮೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವ್ಯಾಮೋಹ. ಪಡಲಾಗದೆಂತಲೂ, ಯಾವ ಸಂಶಯ-ವಿಕಲ್ಪಗಳಿಗೂ ಗುರಿಯಾಗಬಾರ ದೆಂತಲೂ ನಾನು ನಮ್ಮ ವೃತ್ತಾಂತವನ್ನು ಈಗ ನಿನಗೆ ತಿಳಿಸುತ್ತೇನೆ. ನಿನಗೆ ನನ್ನ ಪರಿಚಯವಿಲ್ಲದಿದ್ದರೂ ನಿನ್ನ ಪರಿಚಯವು ನನಗೆ ಚನ್ನಾಗಿ ಇರು ತದೆ. ನನ್ನನ್ನು ಜನರು ಅಭಿರಾಮಸ್ವಾಮಿಯೆಂದು ಕರೆಯುವರು. ಮಂ ದಾರಣಗಡದ ಒಡೆಯರಾದ ವೀರೇಂದ್ರಸಿಂಹರವರು ನನ್ನ ನ್ನು ಕುಲಗುರು ಗಳೆಂದು ತಿಳಿಯುವರು, ಈ ತಿಲೋತ್ತಮೆಯು ನಿರೇ೦ದ್ರಸಿಂಹರ ಮಗಳು. ಇನ್ನೂ ಈಕೆಯ ಲಗ್ನವಾಗಿರುವದಿಲ್ಲ. ಈ ವಿಮಲಾದೇಸಿಯು ವೀರೇಂದ್ರ ಸಿಂಹರ ಹೆಂಡತಿಯು, ವಿರೇಂದ್ರಸಿಂಹರವರು ಅಕ ಓರ ಬಾದಶಹನ ಪಕ್ಷ ಪಾತಿಗಳಾದದ್ದರಿಂದ, ಅವರು ಪಠಾಣ ಕಾತಲೂಖಾನನ ಶತ್ರುಗಳೂ, ಮೊಗಲ ಬಾದಶಹರ, ಅರ್ಥಾತ್ ಮಾನಸಿಂಹರವರ ಮಿತ್ರರೂ ಆಗಿದ್ದಾರೆ. ವಾರ್ಗತೈನ ನಾವು ಈ ಶಿವಾಲಯದಲ್ಲಿ ಇಳಿದುಕೊಳ್ಳಬೇಕಾಯಿತು. ಅನಾಯಾಸವಾಗಿ ನಿನ್ನ ದರ್ಶನವಾದದ್ದರಿಂದ ನಮ್ಮೆಲ್ಲರಿಗೆ ಬಹಳ ಸಂತೋಷ ವಾಗಿದೆ. ಪರಕೀಯಭಾವವನ್ನು ಎಣಿಸದೆ ನೀನು ನಮ್ಮ ಆತಿಥ್ಯವನ್ನು ಸ್ವೀಕರಿಸತಕ್ಕದ್ದು. ಅಭಿರಾಮಸ್ವಾಮಿಗಳ ಯಥಾರ್ಥವಾದ ಈ ಸ್ಪಷ್ಟೋಕ್ತಿಗಳು ಕೇಳಿ ಜಗ೦ಗನಿಗೆ ಆಶ್ಚರ್ಯವಾಯಿತು. ನಾನು ಎಂದೂ ಇವರನ್ನು ನೋಡದೆಯಿರುವಾಗ, ನನ್ನ ಪರಿಚ ಯ ವ ಇಷ್ಟು ಸ್ಪಷ್ಟವಾಗಿ ಇವ ರಿಗೆ ಹೇಗಾಗಿರಬಹುದೆಂದು ಆತನು ಯೋಚಿಸತೊಡಗಿದನು. ಇನ್ನೂ ತಿಲೋತ್ತಮೆಯ ಲಗ್ನವಾಗಿಲ್ಲೆಂಬ ಮಾತು ಆತನ ಕಿವಿಗೆ ಬಹು ಇಂ ಪಾಗಿ ಕೇಳಿಸಿತು. ಈ ಮಾತಿನಿಂದ ಆತನಲ್ಲಿ ತಿಲೋತ್ತಮೆಯ ವಿಷಯ ವಾಗಿ ನಿಷ್ಕಾರಣವಾದ ಆಪ್ರಭಾವವು ಉತ್ಪನ್ನವಾಯಿತು. ಆತನು ಉತ್ಸುಕತೆಯಿಂದ ಮತ್ತೊಮೆ , ತಿಲೋತ್ತಮೆಯ ಕಡೆಗೆ ನೋಡಿದನು ಆಗ ಅವರಿಬ್ಬರ ದೃಷ್ಟಿ ಯ ಸಮ್ಮೇಲನವಾಗಲು, ಪರಸ್ಪರರಲ್ಲಿ ದೃಢತರ ವಾದ ಪ್ರೇಮವು ಉತ್ಪನ್ನವಾಯಿತು, ಜಗತ್ತಿಂಗನ ಘನವಾದ ಯೋಗ್ಯ ತೆಯನ್ನೂ, ಸರ್ವಗುಣಸಂಪನ್ನತೆಯನ್ನೂ ಚಾಣಾಕ್ಷಳಾದ ವಿಮಲಾದೇ ವಿಯು ತಿಳಿದು, ತನ್ನ ತಿಲೋತ್ತಮೆಗೆ ಈತನು ಯೋಗ್ಯವರನೆಂದು ಭಾವಿ ಸಿದಳು; ಆದರೆ ಈತನು ತನ್ನ ಅಳಿಯನಾಗುವದು ಅಸಂಭವವೆಂಬ