ಪುಟ:ತಿಲೋತ್ತಮೆ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫ನೆಯ ಪ್ರಕರಣ-- ಪುನರಾಗಮನವು. %. ಆಯೇಷೆಯು ಬರೆದ ಈ ಪತ್ರವು ಉಸ್ಮಾನನಿಗೆ ಮುಟ್ಟಿ, ಆತ ನಿಗೆ ಹೊಸಜೀವಕಳೆ ಬಂದಂತಾಯಿತು. ಆಯೇಷೆಯು ತನ್ನ ಪತ್ರ ದಲ್ಲಿ ಬರೆದಂತ, ತಾನು ಬರುವ ದಿವಸವನ್ನು ಮತ್ತೊಂದು ಪತ್ರದಿಂದ ಉಸ್ತಾನನಿಗೆ ತಿಳಿಸಿದ್ದರಿಂದ, ಆತನು ಅತ್ಯಾತುರತೆಯಿಂದ ಆಕೆಯನ್ನು ಬರಮಾಡಿಕೊಳ್ಳುವದಕ್ಕಾಗಿ, ಇಂದು ಮಹಾನದಿಯ ದಂಡೆಗೆ ಬಂದಿದ್ದನು. ಮಹಾನದಿಯ ನಿರ್ಮಲ ಪ್ರವಾಹವು ಮಂಜುಲಧ್ವನಿಮಾಡುತ್ತ ಮಲ್ಲ. ಮೆಲ್ಲನೆ ಸಾಗಿತ್ತು, ಅದರ ವಿಶಾಲವಾದ ಪ್ರವಾಹದಲ್ಲಿ ದೂರ ದೂರ ದೇಶದ ಹಡಗಗಳು ಬರುತ್ತಲಿದ್ದವು, ಅದರ ದಂಡೆಯ ಮೇಲಿರುವ ಕಟಕ ಪಟ್ಟಣದಲ್ಲಿ ವ್ಯಾಪಾರದ ಗದ್ದಲವು ಬಹಳ, ಪ್ರವಾಸಿಕರ ದಟ್ಟಣೆಯು ಹೆಚ್ಚು; ಇಳಿಯಹೊತ್ತಾದ ಕೂಡಲೆ ಪಟ್ಟಣದೊಳಗಿನ ಜನರು ವಿಶ್ರಾಂತಿ ಗಾಗಿ ನದಿಯ ತೀರಕ್ಕೆ ಬರುತ್ತಲಿದ್ದರು. ಉಸ್ಮಾನನು ಈ ದಿನ ಮೂರು ಗಂಟೆಯ ಸುಮಾರಕ್ಕೆ ನದಿಯ ತೀರಕ್ಕೆ ಬಂದಿದ್ದನು. ಆಗ ಭಾದ್ರಪದ ಮಾಸವಿದ್ದದ್ದರಿಂದ, ಮೋಡದ ಬಿಸಿಲಿನ ಕಸುವು ಇನ್ನೂ ಅಷ್ಟೊಂದು ಕುಗ್ಗಿ ದ್ವಿಲ್ಲ, ಅಲ್ಲಿ ದೊಡ್ಡ ದೊಡ್ಡ ನಕ್ಷಗಳಿದ್ದವು, ಉಸ್ಮಾನನು ನದಿಯ ದಂಡೆ ಯಲ್ಲಿ ಒಮ್ಮೊಮ್ಮೆ , ಇತ್ತಿಂದತ್ತ ಅತ್ತಿಂದಿತ್ತ, ಸಂಚರಿಸುತ್ತಲಿದ್ದನು. ಒಮ್ಮೊಮ್ಮೆ ನಡುವೆ ನಿಂತು ನದಿಯ ಕಡೆಗೆ ಬಹುದೂರ ದೃ ಷ್ಟ್ರೀಯ ನ್ನಿಟ್ಟು ನೋಡುತ್ತಲಿದ್ದನು. ಆ ಕಾಲದಲ್ಲಿ ಆತನ ಉಡಿಗೆ-ತೊಡಿಗೆಗಳು ಸರ್ವಸಾಧಾರಣವಾಗಿದ್ದವು. ಆತನು ಸೈಲಾದ ಚಣ್ಯವನ್ನು ಹಾಕಿಕೊಂಡು ಪಂಜಾಬದ ಪದ್ದತಿಯದೊಂದು ಅಂಗಿಯನ್ನು ತೊಟ್ಟುಕೊಂಡಿದ್ದನು. ಆತನ ತಲೆಯಮೇಲಿನ ಬಹು ಬೆಲೆಯುಳ್ಳ ಜರದ ಟೊಪ್ಪಿಗೆಯಿಂದ ಆತನ ಮುಖದ ಸೌಂದರ್ಯವು ಉಕ್ಕುತ್ತಲಿತ್ತು. ಆತನು ಕಾಲುಗಳಲ್ಲಿ ಜರತಾ .ರಿಯ ಕಲಾಕುಸುರಿನ ಚಡಾವುಗಳನ್ನು ಮೆಟ್ಟದ್ದನು ಇಂಥ ಸಾಧಾರಣ ಉಡಪು-ತೊಡಪುಗಳನ್ನು ಧರಿಸಿದಾಗಲೂ, ಸ್ವಭಾವಸುಂದರನಾದ ಆ