ಪುಟ:ತಿಲೋತ್ತಮೆ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೨ ತಿಲೋತ್ತಮೆ. ತರುಣವೀರನ ಸೌಂದರ್ಯದಲ್ಲಿ ಕೊರತೆಯುಂಟಾಗಿದ್ದಿಲ್ಲ. ಈ ಕಾಲದಲ್ಲಿ ಉಸ್ತಾನನು ನಿಶ್ಯಸ್ತನಾಗಿದ್ದನು. ಶಸ್ತ್ರಧಾರಿಗಳಾದ ಇಬ್ಬರು ಸೈನಿಕರು ಆತನ ಬೆಂಗಾವಲಿಗಿದ್ದರು. ಮೊಗಲರೊಡನೆ ಹೂಡಿದ ಯುದ್ಧದಲ್ಲಿ ಸೋತ ದ್ದರಿಂದ, ಆತನ ಮೋರೆಯು ಸ್ವಲ್ಪ ಇಳಿದಂತೆ ಕಾಣುತ್ತಿತ್ತು, ಬರ ಬರುತ್ತ ಬಿಸಿಲತಾಪವು ಕಡಿಮೆಯಾಗಹತ್ತಿ, ತಂಗಾಳಿಯು ಬೀಸತೊಡ ಗಿತು, ಆಗ ಉಸ್ಯಾನನು ಒಂದು ವಿಶಾಲವಾದ ವೃ ಕದ ದಟ್ಟನೆರಳಿ ನಲ್ಲಿ ವಿಶ್ರಮಿಸುತ್ತ ಕುಳಿತುಕೊಂಡನು. ಸ್ವಲ್ಪ ಹೊತ್ತಿನಲ್ಲಿ ಆತನು ಮತ್ತೆ ಎದ್ದು ಹೊಳೆಯಲ್ಲಿ ಬಹು ದೂರದವರೆಗೆ ಆತುರತೆಯಿಂದ ನೋಡು ಹತ್ತಿದನು; ಆದರೆ ಹಡಗುಬರುವದು ಆತನಿಗೆ ಕಾಣಿಸಲೊಲ್ಲದು. ಇಂದು ಆಯೇಷೆಯು ನಿಶ್ಚಯವಾಗಿ ಬರುವಳೆಂಬ ಉಬ್ಬಿನಿಂದ ಆತನು ನದೀ ತೀರಕ್ಕೆ ಬಂದಿದ್ದನು. ಇಷ್ಟು ಹೊತ್ತಾದರೂ ಹಡಗವು ಕಾಣದಾಗಲು, ಆತನು ಅಸಮಾಧಾನಪಟ್ಟನು. ಹೀಗೆ ಆಯೇಷೆಯ ಹಾದಿಯನ್ನು ಆತುರತೆಯಿಂದ ನೋಡುತ್ತಿದ್ದ ಉಸ್ಮಾನನಿಗೆ ಸ್ವಲ್ಪ ಹೊತ್ತಿನಮೇಲೆ ಬಹು ದೂರದಿಂದ ಎಷ್ಟೋ ಹಡಗ ಗಳು ಬರುತ್ತಿರುವಂತೆ ತೋರಿತು. ಆ ದೂರದ ಹಡಗಗಳು ನೋಡುವ ವವರ ಕಣ್ಣಿಗೆ ನದಿಯಮೇಲೆ ಹಾರಾಡುತ್ತಿರುವ ಹಕ್ಕಿಗಳ ಹಾಗೆ ಕಾಣು ಶಿದ್ದವು, ಹಡಗಗಳು ಸನಿಯಕ್ಕೆ ಬರಹತ್ತಿದಂತೆ, ಉಸ್ಮಾನನ ಉತ್ಕಂಠಯು ಹೆಚ್ಚಾಯಿತು, ಸ್ವಲ್ಪ ಅಂತರದ ಮೇಲೆ ಹಡಗಗಳು ಬಂದವು, ಅವುಗಳಲ್ಲಿ ಐದು ದೊಡ್ಡ ಹಡಗಗಳೂ, ಮೂರು ಡೋಣಿಗಳೂ ಇದ್ದು, ಒಂದು ಹಡ ಗವು ಬಹು ಬೆಲೆಯುಳ್ಳದ್ದಿತ್ತು. ಇದೇ ಹಡಗದಲ್ಲಿಯೇ ಆಯೇಷೆಯು ಇರ ಬಹುದೆಂದು ಉಸ್ಮಾನನು ತರ್ಕಿಸಿದನು. ಆತನ ತರ್ಕವು ಸುಳ್ಳಾಗಲಿಲ್ಲ. ಆತನು ಆ ಸುಂದರವಾದ ಹಡಗದಲ್ಲಿ ಆಯೇಷೆಯು ಇದ್ದದ್ದನ್ನು ನೋಡಿ ದನು, ಕಿಡಿಕೆಯೊಳಗಿಂದ ಆಯೇಷೆಯ ಸುಂದರವಾದ ನಗೆಮೊಗವು ಉಸ್ಮಾ ನನ ಕಣ್ಣಿಗೆ ಬೀಳಲು, ಅವರಿಬ್ಬರಿಗೂ ಪರಮಾನಂದವಾಯಿತು, ಉಭ ಯತರು ಪರಸ್ಪರರಿಗೆ ಸಲಾಮುಮಾಡಿದರು. ಆಯೇಷೆಯ ಅಪ್ಪಣೆಯಿಂದ ನಾವಿಕರು ಬಹು ಒತ್ತರದಿಂದ ಹಡಗಗಳನ್ನು ನಡಿಸುತ್ತಿದ್ದರು. ಅಷ; ರಲ್ಲಿ ಅಕಸ್ಮಾತ್ ಆಯೇಷೆಯ ಹಡಗದ ಗತಿಯು ಮಂದವಾಯಿತು.