ಪುಟ:ತಿಲೋತ್ತಮೆ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುನರಾಗಮನವು. ೧೪೩ ಉಳಿದ ಹಡಗಗಳು ಮ೦ದಕ್ಕೆ ಹೋದವು, ತಮ್ಮ ಹಡಗವು ಹಿಂದೆ ಉಳಿದದ್ದನ್ನು ಆಯೇಷೆಯ ನಾವಿಕರು ನೋಡಿ ನಾಚಿ, ತಮ್ಮ ಹಡಗವು ಮುಂದಕ್ಕೆ ಸಾಗುವದಕ್ಕಾಗಿ ಶಕ್ತಿಮೀರಿ ಪ್ರಯತ್ನ ಮಾಡಹತ್ತಿದರು. ಆದರೆ ಅದರಿಂದ ಪ್ರಯೋಜನವಾಗಲಿಲ್ಲ. ಆಗ ನಾವಿಕರು ಸೂಕ್ಷ್ಮ ರೀತಿ ಯಿಂದ ಅವಲೋಕಿಸಲು, ಹಡಗಕ್ಕೆ ಎಲ್ಲಿಯೋ ತೂತುಬಿದ್ದದ್ದರಿಂದ ನೀರು ಒಳಗೆ ಸೇರಹಳ್ಳಿ ಕಡಗವು ಮುಳುಗುತ್ತಿರುವಂತೆ ತೋರಿತು. ಅದನ್ನು ನೋಡಿ ನಾವಿಕರು ಗಾಬರಿಯಾದರು, ಅವರು ಹಡಗವನ್ನು ದಂಡೆಗೆ ಒಯು ವದಕ್ಕಾಗಿ ವಿಶ್ವ ಪ್ರಯತ್ನ ಮಾಡಹತ್ತಿದರು; ಆದರೆ ಅವರ ಪ್ರಯತ್ನ ವೆಲ್ಲ ವ್ಯರ್ಥವಾಗಿ, ಹಡಗವು ಮುಣುಗಹತ್ತಿತು. ದಂಡೆಯಮೇಲಿನವ ರಿಗೂ ಕಡಗವು ಮಣಗುವದೆಂಬದು ಸ್ಪಷ್ಟವಾಗಿ ಕಾಣಿಸಹತ್ತಿತು. ಆಗ ಉಸ್ಮಾ ನನು ಗಾಬರಿಯಾದನು, ಆತನು ದಂಡೆಯಮೇಲೆ ನಿಲ್ಲಲಾ ರದೆ ನದಿಯಲ್ಲಿ ಇಳಿದನು. ಅದನ್ನು ನೋಡಿ ಆಯೇಷೆಯು ಚಕಿತಳಾ ದಳು, ತನ್ನ ಹಡಗವು ಮುಣುಗುತ್ತಿರುವದೆಂಬ ಸಂಗತಿಯು ಆಕೆಗೆ ಗೊತ್ತಾಗಿಲ್ಲ. ಆಗ ಉಸ್ಮಾನನು ಗಟ್ಟಿಯಾಗಿ ಆಯೇಷೆಯನ್ನು ಕುರಿತು_ಆಯೋಹೇ ಕೋಣೆಯೊಳಗಿಂದ ಹೊರಟು ಹೊರಗೆ ಬೈಲಿಗೆ ಬಾ, ತಡಮಾಡಬೇಡ; ಕೋಣೆಯೊಳಗೆ ಯಾರಿದ್ದೀರಿ? ನಬಾಬಕುವರಿಯನ್ನು ಬೇಗನೆ ಹೊರಗೆ ಕರಕೊಂಡು ಬರಿ, ಎಂದು ಹೇಳಿದನು. ಇಷ್ಟರಲ್ಲಿ ಉಸ್ಮಾ ನನು ಕುತ್ತಿಗೆಯವರೆಗೆ ನೀರೊಳಗೆ ಬಂದಿದ್ದನು. ಆಯೇಷೆಯು ಉಸ್ಮಾನನ ಸೂಚನೆಯಂತೆ ತನ್ನ ದಾಸಿಯೊಡನೆ ಕೋಣೆಯ ಹೊರಗೆ ಬರಲು, ಆಕೆಯ ಕಣ್ಣಿಗೂ ಆ ಅನರ್ಥಪ್ರಸಂಗವು ಬಿದ್ದು, ಉಸ್ತಾ ನನು ನೀರಲ್ಲಿ ಈಸಿ ಬರುವದರ ಕಾರಣವು ಆಕೆಗೆ ಗೊತ್ತಾಯಿತು. ಆಗ ಆಕೆಯು ಕನಿಕರದಿಂದ ಉಸ್ಮಾನನನ್ನು ಕುರಿತು-ಉಸ್ಮಾನ, ಇದೇನು ಮಾಡು ತಿರುವಿರಿ? ನೀರಲ್ಲಿ ಇಷ್ಟು ದೂರ ಬರುವಕಾರಣವೇನು? ನನ್ನ ಮೇಲೆ ಅನುಗ್ರಹಮಾಡಿ ನೀವು ದಂಡೆಗೆ ಹೋಗಬೇಕು, ಎಂದು ನುಡಿಯಲು, ಈಸುತ್ತ ಹಡಗದ ಕಡೆಗೆ ಭರದಿಂದ ಸಾಗಿದ್ದ ಉಸಾನನು ಆಯೇ ಷಗೆ--ನಿನ್ನನ್ನು ಬದುಕಿಸಿಕೊಂಡು ದಂಡೆಗೆ ಹೋಗಲು ಸಮರ್ಥನಾ ದರೆ ಮಾತ್ರ ನಾನು ತಿರುಗಿ ದಂಡೆಯನ್ನು ಕಾಣುವೆನು. ಇಲ್ಲದಿದ್ದರೆ