ಪುಟ:ತಿಲೋತ್ತಮೆ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೪ ತಿಲೋತ್ತಮ. ನಿನ್ನೊಡನೆಯೇ ಈ ಪವಿತ್ರ ಜಲದಲ್ಲಿ ನನ್ನ ಗೋರಿಯು! ಎಂದು ಉತ್ತರಕೊಟ್ಟನು. ಉಸಾನನ ಈ ಉತ್ತರವು ಮುಗಿಯುವದರೊಳ ಗಾಗಿಯೇ ನಾವಿಕರು (ಘಾತವಾಯಿತೆಂದು ಗಟ್ಟಿಯಾಗಿ ಕೂಗಿದರು. ಆಯೇಷಿಯು ತಿರುಗಿ ಹೋಗಿರಿ ತಿರುಗಿ ಹೋಗಿರಿ” ಎಂದು ಕೈಸನ್ನೆ ಯಿಂದ ಉಸಾನನಿಗೆ ತಿಳಿಸಹತ್ತಿದಳು. ಆಕೆಯ ಸಖಿಯು ಆಕ್ರೋಶ ಮಾಡತೊಡಗಿದಳು; ಅಷ್ಟರಲ್ಲಿ ಹಡಗವು ನದಿಯ ತಳವನ್ನು ಕಂಡು ನೋಡಿದಲ್ಲ ಹಾಹಾಕಾರವು ಉತ್ಪನ್ನವಾಯಿತು. ಸಾವಿಕರಲ್ಲಿ ಕೆಲವರು ಈಸಿ ದಂಡೆಗೆ ಬರುವ ಪ್ರಯತ್ನ ಮಾರ ಡಗಿದರು. ಹಡಗವು ಮುಳುಗಿದ ಸೃಳಕ್ಕೆ ಸಹಾಯಾರ್ಥವಾಗಿ ಮತ್ತೊಂದು ಹಡಗವೂ ಬಂದಿತ್ತು, ಅದರಲ್ಲಿಯ ಎಷ್ಟೋ ಜನ ಸಾಹಸಿಗರು ನೀರಲ್ಲಿ ಮುಳ ಗಿದವರನ್ನು ಬದುಕಿಸುವದಕ್ಕಾಗಿ ನೀರಲ್ಲಿ ಹಾರಿಕೊಂಡರು. ಕೆಲವು ಹೊತ್ತಿನ ಮೇಲೆ ಉಸಾನಖಾನನು ನೀರಮೇಲೆ ಕಂಡನು; ಆದರೆ ಈಸುವ ತ್ರಾಣವು ಆತನಲ್ಲಿ ಎಷ್ಟು ಮಾತ್ರವೂ ಇದ್ದಿಲ್ಲ. ಕೈಗಳು ಸೋತು ಆತನು ನೀರು ಗುಟುಕರಿಸಹತ್ತಿದ್ದನು. ಆತನು ತನ್ನ ಬೆನ್ನಿಗೆ ಕಟ್ಟಿಕೊಂಡಿದ್ದ ಬಹು ಭಾರದ ಪದಾರ್ಥವು ನೀರೊಳಗೆ ಜಗ್ಗುತ್ತಿದ್ದದ್ದರಿಂದ, ಆತನ ಈಸುವ ಅವ ಸಾನವು ತೀರ ಅಳಿದು ಹೋಗಿತ್ತು, ಜೀವಹೋಗುವಕಾಲಕ್ಕೆ ಮನುಷ್ಯ ನಿಗೆ ಶ್ವಾಸವು ಹತ್ತುವಂತ ಉಸ್ಮಾನನಿಗೆ ಶ್ವಾಸವು ಹತ್ತಿತ್ತು, ಆತನಿಗೆ ಮಾತಾಡುವ ಪ್ರಾಣಸಹಇದ್ದಿಲ್ಲ. ಉಸ್ಮಾನಖಾನನ ಈ ಕಷ್ಟಮಯಸ್ಥಿತಿ ಯನ್ನು ನೋಡಿ ಒಬ್ಬ ನಾಮಿಕನು ತನ್ನ ನಾವೆಯನ್ನು ಆತನ ಬಳಿಗೆ ಸಾಗಿಸಿಕೊಂಡು ಹೋದನು. ನಾವಿನೊಳಗಿನವನೊಬ್ಬನು ತನ್ನ ಮೈಮೇಲಿನ ದೋತರದ ಒಂದು ತುದಿಯನ್ನು ಉಸ್ಮಾನಖಾನನ ಸಮೀಪಕ್ಕೆ ಒಗೆದನು. ಖಾನನು ಆ ವಸ್ತ್ರವನ್ನು ಹಿಡಿದಕೂಡಲೆ ಆ ಮನುಷ್ಯನು ಖಾನನನ್ನು ಜಗ್ಗಿ ಕೊಂಡನು. ಖಾನನು ನಾವಿನ ಸಮೀಪಕ್ಕೆ ಬಂದಕೂಡಲೆ ಮತ್ತೊ ಇನು ಬಗ್ಗಿ ಖಾನನಿಗೆ ಕೈಕೊಟ್ಟು, ಮತ್ತೆ ಕೆಲವರ ಸಹಾಯದಿಂದ ಆತ ನನ್ನು ಮೇಲಕ್ಕೆ ಎಳಕೊಂಡನು, ಈ ಕಾಲದಲ್ಲಿ ಖಾನನ ಮೈಮೇಲೆ ಎಚ್ಚ ರವಿದ್ದಿಲ್ಲ. ಖಾನನು ತನ್ನ ವಸ್ತ್ರದ ಪದರಿನಿಂದ ಆಯೇಷೆಯನ್ನು ತನ - ಟೊಂಕಕ್ಕೆ ಕಟ್ಟಿ ಕೊಂಡಿದ್ದನು. ಕೆಲವು ಹೊತ್ತಿನ ಮೇಲೆ ಉಸ್ತಾನಖಾನನಿಗೆ