ಪುಟ:ತಿಲೋತ್ತಮೆ.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೫ ಪುನರಾಗಮನವು | ಎಚ್ಚರವಾಯಿತು. ಕೂಡಲೆ ಆತನು ಆಯೋಣೆಯ ವೃತ್ತಾಂತವನ್ನು ವಿಚಾರಿ ಸಿಹನು. ಆಯೇಷೆಯು ಇನ್ನೂ ಎಚ್ಚತಿರದಿದ್ದರೂ, ಆಕೆಯು ಜೀವ ರುವಳೆಂಬ ವರ್ತಮಾನವನ್ನು ಕೇಳಿ ಉಸ್ಮಾನನಿಗೆ ಬಹಳ ಸಂತೋಷವಾ ಯಿತು. ಆಗ ಆತನು--ನಾವಿಬ್ಬರಂತು ಬದುಕಿದೆವು; ಆದರೆ ಆಯೇಷೆಯ ದಾಸಿಯನ್ನು ಯಾರಾದರೂ ಬದುಕಿಸಿದರೆ, ಅವರಿಗೆ ಬಹು ದೊಡ್ಡ ಇನಾಮು ಕೊಡುವೆನು. ” ಎಂದು ಹೇಳಿದನು. ಅದನ್ನು ಕೇಳಿ ನಾವಿನೊಳಗಿದ್ದವರಲ್ಲಿ ಕೆಲವರು-ಆಕೆಯನ್ನು ನಾವು ಬದಕಿಸಿದ್ದೇವೆ” ಎಂದು ಹೇಳಿದರು. ಆಯೇಷೆಯ ಮೈಮೇಲಿನ ವಸ್ತ್ರಗಳು ಯಥಾಸ್ಥಿತವಾಗಿಯಿದ್ದ ವು. ಸಂಗಮರ ವರಿಯ ಸುಂದರವಾದ ಪುತ್ತಳಿಯಂತೆ ಆಯೇಷೆಯನ್ನು ನಾವಿನಲ್ಲಿ ಮಲಗಿ ಸಿದ್ದರು. ಉಸ್ಮಾನನು ಆಕೆಯ ಬಳಿಯಲ್ಲಿ ಕುಳಿತು ಯೋಗ್ಯ ಉಪಚಾರಗ ಳನ್ನು ಮಾಡತೊಡಗಲು, ಮೆಲ್ಲಮೆಲ್ಲನೆ ಆಯೇಷೆಯು ಎಚ್ಚರಿಯುತ್ತ ಕಡೆಗೆ ಪೂರ್ಣವಾಗಿ ಎಚ್ಚತ್ತಳು, ಉಸ್ಮಾನನು ಆಕೆಯನ್ನು ತನ್ನ ಅಂತರ್ಗೃ ಹಕೆ ಕರಕೊಂಡು ಹೋದನು. ಈಮೇರೆಗೆ ಆಯೇಷೆಯು ನೀರಿನ ಬಹು ದೊಡ್ಡ ಗಂಡಾಂತರದಿಂದ ಪಾರಾದರೂ ಭಯಂಕರವಾದ ಜರದಬಾಧೆಯಿಂದ ಆಕೆಯು ಬಹಳವಾಗಿ ದಣಿದುಕೊಳ್ಳಬೇಕಾಯಿತು, ದೊಡ್ಡ ದೊಡ್ಡ ಹಕೀಮರು ಯಾವಾಗಲೂ ಆಕೆಯ ಬಳಿಯಲ್ಲಿ ಕುಳಿತು ಉಪಚಾರಮಾಡಿದರು. ಉಸ್ಮಾನನಂತು ಅನ್ನ ನೀರಿನ ಪರಿವೆಯಿಲ್ಲದೆ ಆಯೇಷೆಯ ಶುಶೂಷೆಯನ್ನು ಮಾಡಿದನು. ಆಯೇ ಷೆಯು ನಬಾಬನ ರಾಜಧಾನಿಯ ಅಲಂಕಾರವೂ, ಎಲ್ಲರ ನೇತ್ರಕ್ಕೆ ಆನಂದ ವನ್ನುಂಟುಮಾಡುವವಳೂ, ಸರ್ವರ ಚಿತ್ರವನ್ನು ಸುಪ್ರಸನ್ನಗೊಳಿಸುವವಳೂ ಇದ್ದದ್ದರಿಂದ, ಆಕೆಯ ಬೇನೆಯ ಕಾಲದಲ್ಲಿ ಅಂತರ್ಗೃಹದೊಳಗಿನ ಜನರೆಲ್ಲ ಉದಾಸೀನರಾಗಿದ್ದರು. ಕಾತಲೂಖಾನನ ಯಾವತ್ತು ಬೇಗಮೆಯರು ದುಃಖಿ ತರಾಗಿದ್ದರು. ಕಾಶ್ಮೀರೀ ಬೇಗಮಗಂತು ಹಗಲು-ರಾತ್ರಿ ನಿದ್ದೆಯಿದ್ದಿಲ್ಲ. ಇವರಂತು ಇರಲಿ, ಯಾವಾಗಲೂ ವಿಷಯಸುಖದಲ್ಲಿ ಮಗ್ನನಾಗಿರುತ್ತಿದ್ದ ಸುಲೇಮಾನಖಾನನೂ ಆಯೇಷೆಯ ಅಸ್ವಸ್ಥತೆಯನ್ನು ಕೇಳಿ ದುಃಖಿತ -ನಾಗಿದ್ದನು. ಆತನು ಮದ್ಯಪಾತ್ರೆಯನ್ನು ಪರಿತ್ಯಜಿಸಿ, ಸುಂದರ ಸ್ತ್ರೀಯರ ಕ್ರೀಡಾಕೌತುಕಗಳನ್ನು ಬದಿಗೊತ್ತಿ, ದಿನಕ್ಕೆ ಎಷ್ಟೋ ಸಾರೆ ಆಯೇಷೆಯ