ಪುಟ:ತಿಲೋತ್ತಮೆ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ಳು ತಿಲೋತ್ತಮೆ. ಯೋಗಕ್ಷೇಮವನ್ನು ವಿಚಾರಿಸುವದಕ್ಕಾಗಿ ಬರತೊಡಗಿದನು, ಮೇಲೆ ಹೇಳಿ ದಂತೆ ಉಸ್ಮಾನನಂತು ಎಲ್ಲವನ್ನು ಬಿಟ್ಟು ಬಿಟ್ಟು, ಹಗಲು-ರಾತ್ರಿ ಆಯೇಷೆ ಯ ಸೇವೆಯಲ್ಲಿ ತತ್ಪರನಾಗಿದ್ದನು. ಆತನಿಗೆ ಎಲ್ಲಿಯರಾಜ್ಯ, ಎಲ್ಲಿಯ ಒಡಂ ಬಡಿಕೆ, ಎಲ್ಲಿಯ ಉತ್ಸಾಹ, ಎಲ್ಲಿಯ ಆನಂದ ಅನ್ನುವಹಾಗೆ ಆಗಿತ್ತು, ಎಲ್ಲ. ವನ್ನು ಆತನು ಮರೆತು ಬಿಟ್ಟಿದ್ದನು. ಒಂದು ದಿವಸವಾಯಿತು, ಎರಡು ದಿವಸ 'ವಾಯಿತು.: ತಿಂಗಳುಗಟ್ಟಲೆ ಆಯೇಷೆಯು ಬೇನೆಯಿಂದ ಬಳಲಿದಳು, ಈ ಅವಧಿಯಲ್ಲಿ ಎಷ್ಟೋಸಾರೆ ಆಕೆಯ ಜೀವ ಹೋಗಿ ಜೀವವು ಬಂದಿತು. ಕಡೆ ಗೆ ದೇವರ ಕೃಪೆಯಿಂದ ಆಯೇ ಷೆಗೆ ಗುಣವಾಗಹತ್ತಿತು. ಬರಬರುತ್ತ ಆಕೆಯ .ಪ್ರಕೃತಿಯು ಸುಧಾರಿಸುತ್ತ ಹೋಗಿ, ಆಕೆಯ' ನಷ್ಟವಾಗಿದ್ದ ಶರೀರ ಸೌಂದ ರ್ಯವು ಪುನಃ ಪ್ರಾಪ್ತವಾಯಿತು. ಆಯೇಷೆಗೆ ಗುಣವಾಗುತ್ತ ಹೋದಂತೆ ಉಸ್ಮಾನನು ಆಯೇಷೆಯ ಬಳಿಗೆ ಹೋಗುವದನ್ನು ಕಡಿಮೆ ಮಾಡಿದನು. ಆಯೇ ಪೆಗೆ ಪೂರ್ಣ ಗುಣ ವಾದ ಬಳಿಕಂತು ಆತನು ಆಯೇಷೆಯ ಬಳಿಗೆ ಹೋಗುವದನ್ನು ಬಿಟ್ಟು ಬಿಟ್ಟನು. ಒ೦ದುದಿನ ಮಧ್ಯಾಹ್ನದ ಹನ್ನೆರಡು ಗಂಟೆಯ ಹೊತ್ತಾಗಿರಬಹುದು. ಆಗ ಆಯೇಷೆಯು ಒಬ್ಬಳೇ ತನ್ನ ಕೋಣೆಯಲ್ಲಿ ಕುಳಿತುಕೊಂಡಿದ್ದಳು. ಆಕೆಯ ಬಳಿಯಲ್ಲಿ ದಾಸಿಯರು ಸಹ ಯಾರೂ ಇದ್ದಿಲ್ಲ. ಆಕೆಯು ತನ್ನೊ ಇಗೆ ಏನೋ ವಿಚಾರಮಾಡುತ್ತಲಿದ್ದಳು. ಅಷ್ಟರಲ್ಲಿ ಉಸ್ಮಾನನು ಬಾಗಿಲಲ್ಲಿ ನಿಂತದ್ದು ಆಕೆಯ ಕಣ್ಣಿಗೆ ಬಿದ್ದಿ ತು, ಆಗ ಉಸ್ಮಾನನು ಆಯೇಷೆಯನ್ನು ಕುರಿತು:- ಉಸ್ಮಾನ-ಆಯೇ ಷೇ, ನಿಮ್ಮ ಪ್ರಕೃತಿಯು ನೆಟ್ಟಗಿರುವದಷ್ಟೇ? ಆಯೇಷ-ನೆಟ್ಟಗದೆ, ಉಸ್ಮಾನ, ಒಳಗೆ ಬರಿ. ಉಸ್ಮಾನ-ನೀನು ಒಬ್ಬಳೇ ಕುಳಿತಿಕೊಂಡಿರುವೆಯೇನು? ಒಳ್ಳೇದು ಕುಳಿತುಕೋನಾನು ಈಗ ಒಳಗೆ ಬರುವದಿಲ್ಲ; ಮತ್ತೆ ಯಾವಗಾದರೂ ಬಂದೇನಂತ. ತಾನು ಒಬ್ಬಳೇ ಕುಳಿತಿರುವದರಿಂದ ಉಸಾನನು ಒಳಗೆ ಬರುವದಕ್ಕೆ ಸಂಕೋಚ ಪಡುವದನ್ನು ನೋಡಿ, ಆಯೇಷೆಯು ಕೋಣೆಯ ಬಾಗಿಲಿಗೆ ಬಂದು ಆತುರದಿಂದ ಉಸ್ಮಾನನಿಗೆ- ಉಸ್ಮಾನ, ಒಳಗೆ ಬಾ, ನಿಮ್ಮ ಸಂಗಡ