ಪುಟ:ತಿಲೋತ್ತಮೆ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುನರಾಗಮನವು ೧೪೭ ನಾನು ಬ7 ಳ ಮಾತಾಡಬೇಕಾಗಿದೆ, ಅನ್ನ ಲು, ಉಸ್ಮಾನನು ಅಸಮ್ಮತಿ ಯನ್ನು ಪ್ರಕಟಿಸದೆ, ಒಳಗೆ ಬಂದು ದೂರ ನಿಂತುಕೊಂಡನು. ಒಂದು, ಮಂಚದ ಹೊರತು ಎರಡನೆಯ ಆಸನವು ಕುಳಿತುಕೊಳ್ಳಲಿಕ್ಕೆ ಅಲ್ಲಿ ಇದ್ದಿಲ್ಲ. ಅದೇ ಮಂಚದಮೇಲೆ ಕುಳಿತುಕೊಳ್ಳುವದಕ್ಕಾಗಿ ಆಯೇಷೆಯು ಆಗ್ರಹ ಮಾಡಹತ್ತಿದಳು, ಅದಕ್ಕೆ ಉಸ್ಮಾನನು-ಆಯೇಷೆ, ನೀನೇ ಕುಳಿತುಕೊ. ನನಗೆ ನಿಂತುಕೊಳ್ಳುವ ಅಭ್ಯಾಸವಿರುವದರಿಂದ, ನಾನು ಇಲ್ಲಿ ನಿಂತಿಕೊಂಡೇ. ನೀನಾಡುವ ಮಾತುಗಳನ್ನು ಅವಶ್ಯವಾಗಿ ಕೇಳುತ್ತೇನೆ ಎನ್ನಲು, ಆಯೇ ಷೆಯು-ಉಸ್ಮಾನ, ನನ್ನಲ್ಲಿ ಇಷ್ಟು ಪರಕೀಯತ್ವವನ್ನು ಭಾವಿಸುವ ಕಾರಣ ವಿಲ್ಲ. ನನ್ನ ಸಂಗಡ ಇಷ್ಟು ಸಂಕೋಚದ ನಡತೆಯೇಕೆ? ನೀವು ನನಗೆ ಇಷ್ಟು ಬಹುಮಾನ ಕೊಡುವ ಕಾರಣವಿಲ್ಲ. ನೀವು ಈ ಮಂಚದಮೇಲೆ ಕುಳಿ ತುಕೊಳ್ಳಲೇ ಬೇಕು; ಎಂದು ಆಗ್ರಹಮಾಡಿದಳು. ಆಗ ಉಸ್ಮಾ ನನು ನಿರ್ವಾಹ ವಿಲ್ಲದೆ ಮಂಚದಮೇಲೆ ಕುಳಿತುಕೊಂಡನು. ಆಯೇ ಷೆಯಾದರೂ ಅದೇ ಮಂಚದಮೇಲೆ ಕುಳಿತುಕೊಂಡದ್ದನ್ನು ನೋಡಿ, ಆತನಿಗೆ ಬಹಳ ಆಶ್ಚರ್ಯ ವಾಯಿತು. ಆಗ ಆಯೇಷೆಯು ಉಸ್ಮಾನನನ್ನು ಕುರಿತು ಆಯೇಷೆ--ನಾನು ಇಷ್ಟು ದಿವಸ ನಿರ್ವಾಹವಿಲ್ಲದೆ ನಿಮ್ಮನ್ನು ಬಿಟ್ಟು ಹೋಗಿದ್ದೆನು. ಬೇನೆ ಬಿದ್ದದ್ದರಿಂದ ನಿಮ್ಮ ಸಂಗಡ ಮಾತಾಡುವದೂ ಆಗಿ ದಿಲ್ಲ; ಆದರೆ ಉಸಾನ, ನಾನು ನಿಮ್ಮ ಅಧಿಕಾರಕ್ಕೆ ಒಳಪಟ್ಟ ಒಬ ಸ್ತ್ರೀಯಿದ್ದು, ನಿಮ್ಮ ಇಚ್ಛೆಗೆ ವಿರುದ್ಧವಾಗಿ ನಿಮ್ಮನ್ನು ಅಗಲಿಹೋದದ್ದು ಮಹಾಪರಾಧವು. ಆ ಅಪರಾಧವನ್ನು ನೀವು ದಯಮಾಡಿ ಕ್ಷಮಿಸಬೇಕು ಉಸ್ಮಾನ-ಆಯೇಷೆಯ ಅಪರಾಧವೇ ನನಗೆ ಗೋಚರವಾಗದಿರಲು, ನಾನು ಕ್ಷಮಿಸುವದಾದರೂ ಏನು? ಆಯೇಷೇ, ನೀನು ತಿರುಗಿ ನಮ್ಮ ಬಳಿಗೆ ಬಂದದ್ದರಿಂದ ನಮ್ಮ ಹೋದಪ್ರಾಣವು ತಿರುಗಿ ಬಂದಹಾಗಾಯಿತು. ನಿನ ಸಂಗಡ ನಮ್ಮ ಯಾವತ್ತು ಶೌರ್ಯ, ಧೈರ್ಯ, ಉತ್ಸಾಹ, ಸಾಮರ್ಥಶಿ ಇವೆಲ್ಲ ಹೊರಟುಹೋಗಿದ್ದವು, ಇಂಥ ಪ್ರಸಂಗಗಳಲ್ಲಿ ಪಠಾಣರು ಸೋತದ್ದು. ಸ್ವಾಭಾವಿಕವೇ ಸರಿ. ಕುಮಾರ ಜಗಂಗನು ಮಹಾಭಾಗ್ಯಶಾಲಿಯು. ಆತನು ನಿನ್ನ ಅಂತಃಕರಣವನ್ನು ಪೂರ್ಣವಾಗಿ ಆಕರ್ಷಿಸಿಕೊಂಡಿರುತ್ತಾ ನೆಂಬದನ್ನು ನಾನು ಬಲ್ಲೆ ನು. ನೀನು ಆತನ ಹಿತವನ್ನು ಸಾಧಿಸುವದಕ್ಕಾಗಿ