ಪುಟ:ತಿಲೋತ್ತಮೆ.djvu/೧೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪೮ ತಿಲೋತ್ತಮೆ. ಹೋದದ್ದು ನನಗೆ ಆಸಮ್ಮತವೂ ಆಗಿರುವದಿಲ್ಲ, ನಿನ್ನ ಪ್ರಯತ್ನದಿಂದ ಕುಮಾರನ ಬಂಧವಿಮೋಚನೆಯಾದರೆ, ನೀನು ನನ್ನ ಮೇಲೆ ಒಂದು ಬಗೆ ಯಿಂದ ಮಹದುಪಕಾರ ಮಾಡಿದಂತಾಗುವದು. ಉಸ್ಮಾನನ ಈ ಮಾತುಗಳನ್ನು ಕೇಳಿ ಆಯೇಷೆಗೆ ಬಹಳ ಸಂತೋಷ ವಾಯಿತು, ತನ್ನ ಪ್ರಾಣೇಶ್ವರನನ್ನು ಕೊಲ್ಲಬೇಕೆಂದು ಪ್ರತಿಜ್ಞೆ ಮಾಡಿದ್ದ ಉಸ್ಮಾನನು, ಈಗ ಕುಮಾರನ ಬಂಧವಿಮೋಚನೆಯ ವಿಷಯವಾಗಿ ಸಮಾ ಧಾನಪಡುವದನ್ನು ನೋಡಿ ಆಕೆಯು ಉಲ್ಲಾಸಪಟ್ಟಳು. ಆಕೆಯು ಕೌತುಕ ದಿಂದ ಉಸ್ಮಾನನನ್ನು ಕುರಿತು ಆಯೇಷೆ-ಉಸ್ಮಾನ, ಇದರಲ್ಲಿ ಉಪಕಾರವೇತರದು? ಉಸ್ಮಾನ-ನಾನು ಜಗಕ್ಸಿಂಗನನ್ನು ಕೈಮುಟ್ಟಿ ಕೊಲ್ಲುವ ಪ್ರತಿಜ್ಞೆ ಮಾಡಿರುವದನ್ನು ನೀನು ಬಲ್ಲೆ ಯಷ್ಟೆ? ಆತನನ್ನು ಕೊಲ್ಲುವ ಇಚ್ಛೆಯಿಂದಲೇ ನಾನು ಪ್ರಾಣಧಾರಣಮಾಡಿರುವೆನೆಂದು ಹೇಳಿದರೂ ಒಂದು ಪಕ್ಷದಲ್ಲಿ ಹೇಳ ಬಹುದಾಗಿದೆ, ಜಗತ್ತಿಂಗನು ಮರಣಪರ್ಯಂತರ ಕಾರಾಗೃಹದಲ್ಲಿದ್ದರೆ, ಆತ ನನ್ನು ಕೊಲ್ಲುವ ಸಂಧಿಯು ನನಗೆ ಎಲ್ಲಿ ದೊರೆಯುತ್ತಿತ್ತು ಹೇಳು? ಅಂದಬ ಳಿಕ ನೀನು ನನ್ನ ಮೇಲೆ ಉಪಕಾರ ಮಾಡಿದಹಾಗಾಗಲಿಲ್ಲವೋ? - ಉಸ್ಮಾನನ ಈ ಮಾತುಗಳನ್ನು ಕೇಳಿ ಆಯೇಷೆಗೆ ಬಹು ವ್ಯಸನವಾ ಯಿತು. ಆಕೆಯ ಕೋಮಲ ಹೃದಯವು ಕರಗಿ ಕಣ್ಣೀರುಗಳು ಹೊರಬೀಳ ತೊಡಗಲು, ಆಕೆಯು ಒತ್ತಟ್ಟಿಗೆ ಮೋರೆ ತಿರುಗಿಸಿದಳು. ಕೂಡಲೆ ಬಡಬಡ ಕಣ್ಣೀರುಗಳು ಸುರಿದವು. ಆಕೆಯು ಅವನ್ನು ಉಸ್ಮಾನನಿಗೆ ತೋರಗೊಡದೆ ಮೆಲ್ಲನೆ ಒರಿಸಿಕೊಂಡು ತಲೆಬಾಗಿಸಿ ಸುಮ್ಮನೆ ಕುಳಿತುಕೊಂಡಳು. ಆಕೆಯ ಈ ದುಃಖದ ಸ್ಥಿತಿಯನ್ನು ನೋಡಿ ಉಸ್ಮಾನನ ಹೃದಯವೂ ಕರಗಿತು. ಆತನು ಕನಿಕರದಿಂದ ಆಯೇಷೆಯನ್ನು ಕುರಿತು ಉಸ್ಮಾನ-ಆಯೇಷೇ, ನಿನ್ನ ಮನಸ್ಸನ್ನು ನೋಯಿಸುವ ಇಚ್ಛೆಯು ನನಗಿಲ್ಲ. ನಿನ್ನೊಡನೆ ನನ್ನ ಸಹವಾಸವಾಗುವ ಯೋಗವು ಇಲ್ಲವೇ ಇಲ್ಲವೆಂ ಬದನ್ನು ನಾನು ಬಲ್ಲೆನು; ಆದರೂ ನಿನ್ನ ಮೇಲಿನ ನನ್ನ ಪ್ರೇಮವು ಸ್ವಲ್ಪವೂ ಕುಂದಿರುವದಿಲ್ಲ. ಅಂದಬಳಿಕ ನನಗೆ ಪರಮ ಪ್ರಿಯಳಾಗಿರುವ ನಿನ್ನನ್ನು ದುಃಖಸಾಗರದಲ್ಲಿ ಕೆಡವುವದಕ್ಕಾಗಿ ನಾನು ಕುಮಾರ ಜಗತ್ಸಂಗನನ್ನು ಕೊಲ್ಲು