ಪುಟ:ತಿಲೋತ್ತಮೆ.djvu/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುನರಾಗಮನವು ೧೬೯ ವದು ಯೋಗ್ಯವಲ್ಲೆಂದು ಈ ಮೊದಲೇ ನಿರ್ಧರಿಸಿದ್ದೇನೆ. ಆತನೂ ಒಂದು ಬಗೆಯಿಂದ ನನಗೆ ಬಂಧುವೇ ಸರಿ; ಆದರೆ ಆಯೇಷೆ, ಕುಮಾರನು ತಾನಾಗಿ ನನ್ನೊಡನೆ ಯುದ್ಧ ಮಾಡಲು ಇಚ್ಚಿಸಿದ ಪಕ್ಷದಲ್ಲಿ, ನಾನು ಒಲ್ಲೆ ನೆನ್ನುವದಾ ದಾದರೂ ಹೇಗೆ ಹೇಳು? ಯುದ್ದ ಪ್ರಸಂಗವೇ ಒದಗಿದ ಪಕ್ಷದಲ್ಲಿ ವೀರರಿಗೆ ಉಚಿತವಾದ ರಣಕರ್ಮವನ್ನು ನಾನು ಮಾಡಲೇ ಬೇಕಾಗುವದು. ಆಗ ನನ್ನ ಪ್ರತಿಜ್ಞೆಯು ಪೂರ್ಣವಾಗಲಿಕ್ಕೆ ನಾನು ವಿಶ್ವಪ್ರಯತ್ನ ಮಾಡ ದೆಯಿರೆನು. ಆಯೇಷೆ-ಉಸ್ಮಾನ, ನಿಮ್ಮಂಥ ಉದಾರಾಂತಃಕರಣದ ಪುರುಷರು ಈ ಭೂತಲದಲ್ಲಿ ಹುಟ್ಟುವದು ಅಪರೂಪವೇ ಸರಿ. ನಿಮ್ಮಂಥ ಸತ್ಪುರುಷರಿಗೆ ದುಃಖಕೊಡುವದಕ್ಕಾಗಿ ನಾನೇಕೆ ಜನ್ಮವೆತ್ತಿರಬಹುದು? ನನ್ನಿಂದ ಯಾರಿಗೂ ಹಿತವಾಗಿರುವದಿಲ್ಲ. ಹತಭಾಗ್ಯಳಾದ ನನ್ನ ಕಾಲಲ್ಲಿ ಮೊದಲಿನಿಂದ, ಜಗಳ ಗಳು, ಯದ್ದು ಗಳು, ಹಲವು ಪ್ರಕಾರದ ಸಂಕಟಗಳು ಉತ್ಪನ್ನವಾಗುತ್ತ ಬಂದಿರುವವು, ಪಿಯಬಂಧೂ “ ಉಸ್ಮಾನ, ನೀವು ಹಗಲು-ರಾತ್ರಿ ವಿರಹ ವ್ಯಥೆಯಿಂದ ಕುದಿಯುತ್ತಿರುವದು ನನ್ನ ಕಾಲಲ್ಲಿಯೇ ಅಲ್ಲವೆ? ಇಂಥ ಕೃತ ಘ ಳನ್ನು ನೀವು ಹಲವು ಸಾರೆ ಗಂಡಾಂತರದಿಂದ ಪಾರು ಮಾಡಿದಿರಲ್ಲ! ನನ್ನ ಸಲುವಾಗಿ ಇಷ್ಟು ಔದಾರ್ಯವನ್ನು ಯಾಕೆ ತೋರಿಸಿದಿರಿ? ಉಸ್ಮಾನ-ಆಯೇಷೆ, ನೀನು ಪ್ರೇಮದ ಮಹಿಮೆಯನ್ನು ಅರಿಯ ದವಳಲ್ಲ. ನೀನೇ ಹೇಳು, ರಾಜಕುಮಾರ ಜಗತ್ಸಂಗನು ನಿನ್ನನ್ನು ಪ್ರೀತಿಸ ದಿದ್ದರೂ, ಆತನ ಕಾರಾಗೃಹವಾಸದ ಸುದ್ದಿ ಯನ್ನು ಕೇಳಿದ ಕೂಡಲೆ ನೀನು ತಟ್ಟನೆ ಹೊರಟುಹೋಗಿ ಆತನ ಬಂಧವಿಮೋಚನಕ್ಕಾಗಿ ಯಾಕೆ ಯತ್ನಿಸಿದೆ? ನಿನ್ನ ಪ್ರಿಯಕರನ ಕಾರಾಗೃಹವಾಸವನ್ನು ನೋಡುವದು ನಿನ್ನಿಂದ ಆಗದಿರಲು, ನನಗೆ ಪ್ರಾಣಕ್ಕಿಂತಲೂ ಅಧಿಕ ಪ್ರಿಯಳಾಗಿರುವ ನೀನು ಸಾವಿಗೀಡಾಗಿರುವಾಗ, ನಾನು ಹೇಗೆ ಸುಮ್ಮನಿರಬೇಕು ನೀನೇ ಹೇಳು. ಆಯೇಷೆ-ಉಸ್ಮಾನ, ನಿಮ್ಮ ಈ ಔದಾರ್ಯದ ಉಪಕೃತಿಗಾಗಿ ನಾನು ಅತ್ಯಂತ ಕೃತಜ್ಞಳಾಗಿರುವೆನು, ನಿಮ್ಮ ಸುಖ-ದುಃಖಗಳೇ ನನ್ನ ಸುಖ-ದುಃಖ ಗಳು; ನಿಮ್ಮ ಲಾಭ-ಹಾನಿಗಳೇ ನನ ಲಾಭ-ಹಾನಿಗಳು; ಆದರೆ ಅಣ್ಣಾ?