ಪುಟ:ತಿಲೋತ್ತಮೆ.djvu/೧೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೦ ತಿಲೋತ್ತಮೆ. “ಉಸ್ಮಾನ, ನಮ್ಮಿಬ್ಬರ ಲಗ್ನವಾಗುವದು ಈ ಜನ್ಮದಲ್ಲಿ ಅಸಂಭವವಿದ್ದರೂ, ಬಂಧು-ಭಗಿನಿಯರಲ್ಲಿಯ ಪ್ರೇಮವು ನಮ್ಮಿಬ್ಬರಲ್ಲಿ ಅಭಿವೃದ್ಧವಾಗಲಿಕ್ಕೆ ಆತಂಕವೇನಿದೆ? ವಿಪತ್ಕಾಲದಲ್ಲಿ ನಾವಿಬ್ಬರು ಪರಸ್ಪರರಿಗೆ ಸಹಾಯವೇಕೆ ಮಾಡಬಾರದು? ನನ್ನನ್ನು ನಿಮ್ಮ ಅನುಚರಳೆಂದು ಭಾವಿಸಿರಿ. ನಿಮ್ಮ ಪ್ರತಿ ಯೊಂದು ಕಾರ್ಯದಲ್ಲಿ ಸಹಾಯಮಾಡಲಿಕ್ಕೆ ನಾನು ಹಿಂದೆ-ಮುಂದೆ ನೋಡ `ಲಾರೆನು. ಪ್ರಿಯ ಬಂಧೂ, ಇನ್ನು ಮೇಲೆ ನಾವಿಬ್ಬರೂ ಒಮ್ಮನಸಿನಿಂದ ನಡೆಯೋಣ, ಇನ್ನು ಉಳಿದಿರುವ ನಮ್ಮ ಆಯುಷ್ಯವನ್ನು ಕಳೆದು ಕೊಂಡಿದ್ದ ನಮ್ಮ ರಾಜ್ಯವ ತಿರುಗಿ ಸಂಪಾದಿಸುವ ಕೆಲಸದಲ್ಲಿ ಕಳೆಯೋಣ. ಉಸ್ಮಾನ-ಆಯೇಷ, ಇಂದು ನೀನು ಈ ಹತಭಾಗ್ಯನನ್ನು ಆನಂದಗಿ ರಿಯ ಶಿಖರದಮೇಲೆ ಹತ್ತಿಸಿದೆ! ನಿನ್ನ ಮಾತುಗಳನ್ನು ಕೇಳಿ ನನಗೆ ಪರ ಮಾವಧಿ ಸಮಾಧಾನವಾಗಿದೆ. ನನಗೆ ಇನ್ನು ಯಾತರ ಇಚ್ಚೆಯ ಇರು ವದಿಲ್ಲ. ನನ್ನ ಸುಖದುಃಖಗಳಿಗೆಲ್ಲ ಆಯೇಷೆಯು ಪಾಲುಗಾರಳಾಗಿರುತ್ತಾ ಬೆಂಬದೊಂದೇ ಸಂಗತಿಯು ನನ್ನ ಸುಖಸರ್ವಸ್ವವಾಗಿರುತ್ತದೆ! ಇದಕ್ಕಿಂತ .ಹೆಚ್ಚಿನದೇನೂ ನನಗೆ ಹೇಳಬೇಕಾಗಿರುವದಿಲ್ಲ.

  • ಆಯೇಷ-ಅಣ್ಣಾ, ನಿನ್ನ ಶೀಲಕ್ಕೂ, ಪರಾಕ್ರಮಕ್ಕೂ ನಿನ ಈ ಮಾತುಗಳು ಬಹಳವಾಗಿ ಒಪ್ಪುವವು. ನಿನ್ನ ಅಲೌಕಿಕತೆಯನ್ನು ಎಷ್ಟು ಸ್ಮರಿಸಿದರೂ ನನಗೆ ಸಾಕಾಗದು; ಆದರೆ ಯುದ್ದದಲ್ಲಿ ನಿನ್ನ ಕೈ ಬಿಟ್ಟಿರುವ ರಾಜ್ಯವು ಪುನಃ ನಿನ್ನ ಕೈಸೇರುವವರೆಗೆ ನನಗೆ ಸಮಾಧಾನವಾಗಲಾರದು. ನೀನು ಮೊದಲಿನಂತೆ ವೈಭವಶಾಲಿಯು ಹೇಗೆ ಆದೀಯೆಂಬ ಚಿಂತೆಯು

ಯಾವಾಗಲೂ ನನ್ನ ಮನಸ್ಸಿನಲ್ಲಿ ಕಟಿಯುತ್ತದೆ. ಉಸ್ಮಾನ-ಇನ್ನು ಮೇಲೆ ಈ ಮಾತಿನ ಚಿಂತೆ ನಿನಗೆ ಬೇಡ, ಇನ್ನು 'ನಾನು ತೋರಿಸುವ ಸಮರಚಾಪಲ್ಯವನ್ನು ನೋಡಿ ಶತ್ರುಗಳು ಬಟ್ಟು ಕಚ್ಚ ಬಹುದು; ನನ್ನ ಪ್ರತಾಪವನ್ನು ಸಹಿಸಲಾರದೆ ಅವರು ನನ್ನ ಮುಂದೆ ತಲೆಬಾಗಿಸಬೇಕಾದೀತು. ಆಯೇಷೆ, ಬಹಳ ಮಾತುಗಳಿಂದ ಪ್ರಯೋಜನ ವೇನು? ಸಾಕ್ಷಾತ್ ಜಯಲಕ್ಷ್ಮಿ ಯೆನಿಸುವ ನೀನು ನನ್ನ ಪಕ್ಷದವಳಾಗಿ -ರಲು, ನಾನು ಯಾರಿಗೆ ಸೊಪ್ಪು ಹಾಕೇನು ಹೇಳು? ಪ್ರತ್ಯಕ ಅಕಬರಬಾದ ಶಹನು ಬಂದರೂ ಉಸ್ಮಾನನು ತನ್ನ ಖಂಬೀರತನವನ್ನು ಆತನಿಗೆ ತೋರಿ