ಪುಟ:ತಿಲೋತ್ತಮೆ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುನರಾಗಮನವು . ೧೫n ಸದೆ ಬಿಹನೆಂಬದನ್ನು ಚೆನ್ನಾಗಿ ನೆನಪಿನಲ್ಲಿಡು. ಈಮೇರೆಗೆ ಮಾತಾಡುತ್ತಿರುವಾಗ ಕಾಶ್ಮೀರೀ ಬೇಗಮೆಯು ಆಯೇಷ ಯನ್ನು ಕರೆದು- C ಆಯೇಷ, ಔಷಧವನ್ನು ತಕ್ಕೊಳ್ಳುವ ಹೊತ್ತಾ ಯಿತು. ” ಎಂದು ಸೂಚಿಸಿದಳು. ಅದನ್ನು ಕೇಳಿ ಆಯೆಷೆಯು ತನ್ನ ತಾಯಿಯನ್ನು ಒಳಗೆ ಬಾರೆಂದು ಕರೆಯಲು, ಆ ಕಾಶ್ಮೀರಿ ಬೆಗವಳು ಒಳಗೆ ಬಂದಳು. ಆಕೆಯನ್ನು ನೋಡಿದಕೂಡಲೆ ಇಬ್ಬರೂ ಪಲ್ಲಂಗದಿಂದ ಇಳಿದು ನಿಂತುಕೊಂಡರು. ಅವರಿಬ್ಬರ ಮುಖದಲ್ಲಿ ಪ್ರಸನ್ನತೆಯ ಚಿಹ್ನವು ವ್ಯಕ್ತ ವಾದದ್ದನ್ನು ನೋಡಿ ಬೇಗನಳು ಬಹಳ ಸಂತೋಷಪಟ್ಟಳು. ಅವರಿಬ್ಬರ ಪ್ರಸನ್ನತೆಯನ್ನು ಆ ರಾಣಿಯು ಶುಭಸೂಚನೆಯೆಂದು ತಿಳಿದಳು. ಬೇಗನಳೊಡನೆ ಆಯೇಷೆಯು ಹೊರಟು ಹೋದಬಳಿಕ ಉಸ್ಯಾನನು ತನ್ನ ಅಣ್ಣನಾದ ಸುಲೇಮಾನನ ಬಳಿಗೆ ಹೋದನು. ತನ್ನ ಬಂಧುವು ಅನಾಯಾಸವಾಗಿ ಬಂದದ್ದಕ್ಕಾಗಿ ಸುಲೆಮಾನನಿಗೆ ಬಹಳ ಸಂತೋಷವಾ ಯಿತು. ಅಣ್ಣನು ಯಾವಾಗಲೂ ವಿಷಯಾಸಕ್ತನಾಗಿರುವದರಿಂದ, ಉಸ್ತಾ ನನು ಸಹಸಾ ಆತನ ಬಳಿಗೆ ಕರೆಯಿಸದೆ ಹೋಗುತ್ತಿದ್ದಿಲ್ಲ. ಅಂಥವನು ಈ ದಿನ ತಾನಾಗಿ ಹೋಗಲಿಕ್ಕೆ, ಆತನಲ್ಲಿ ಉಂಟಾದ ಯುದ್ಧೋತ್ಸಾಹವೇ ಕಾರ ಣವಾಯಿತು. ಆಯೆಷೆಯು ತನ್ನ ಅನುಚರಳಾಗಿ ತಮ್ಮ ಸುಖ-ದುಃಖ ಗಳ ಪಾಲುಗಾರಳಾದದ್ದೆಂದು ದೊಡ್ಡ ಬಲವೆಂದು ಆತನು ತಿಳಿದನು. ಈ ಆನಂದದ ವರ್ತಮಾನವನ್ನು ಹೇಳುವದಕ್ಕಾಗಿಯೇ ಆತನು ತನ್ನ ಅಣ್ಣನ ಬಳಿಗೆ ಬಂದಿದ್ದನು. ಶಿಷ್ಟಾಚಾರದಂತೆ ಆ ಬಂಧುಗಳ ಆದರೋಪಚಾರಗಳಾದ ಬಳಿಕ ಉಸ್ಮಾನನು ತನ್ನ ಅಣ್ಣನಿಗೆ--ನಬಾಬಸಾಹೇಬ, ಮೊಗಲರು ಕಸಿದು ಕೊಂಡಿದ್ದ ನಮ್ಮ ರಾಜ್ಯವನ್ನು ತಿರುಗಿ ಸಂಪಾದಿಸುವದಕ್ಕಾಗಿ ನಾನು ಇಂದಿ ನಿಂದಲೇ ಪ್ರಯತ್ನ ಮಾಡಬೇಕೆಂದು ನಿಶ್ಚಯಿಸಿದ್ದೇನೆ. ಆಯೇಷೆಯು ನಮ್ಮ ಬಳಿಗೆ ಬಂದದ್ದು, ಜಯಲಕ್ಷ್ಮಿಯೇ ನಮ್ಮ ಬಳಿಗೆ ಬಂದ ಹಾಗಾಯಿತೆಂದು ತಾವು ತಿಳಿಯಬೇಕು. ಮೊಗಲರೊಡನೆ ಅಪಮಾನಕಾರಕವಾದ ಒಡಂಬಡಿ ಕೆಯನ್ನು ಮಾಡಿಕೊಂಡು ಅವರ ಮಾಂಡಲಿಕರಾಗಿ ನಾವು ಜೀವಿಸುವದಕ್ಕಿಂತ ಸಮರಭೂಮಿಯಲ್ಲಿ ದೇಹವಿಡುವದು ಶ್ರೇಯಸ್ಕರವು. ಇದರಿಂದ ನಮ್ಮ ವಂಶದ ಕೀರ್ತಿಯನ್ನಾದರೂ ಕಾದುಕೊಂಡಂತಾಗುವದು, ಅನಲು, ಸುಲೇ