ಪುಟ:ತಿಲೋತ್ತಮೆ.djvu/೧೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܦܐ ತಿಲೋತ್ತಮೆ. ಮಾವನು ತನ್ನ ತಮ್ಮನ ಮಾತಿಗೆ ಒಪ್ಪಿಕೊಂಡನು. ಕೂಡಲೆ ಉಸ್ಮಾನನು ಯುದ್ಧದ ಸಿದ್ಧತೆಯನ್ನು ಮಾಡತೊಡಗಿದನು. - (೨) - ೧೬ನೆಯ ಪ್ರಕರಣ-- ನೂತನಸುಬೇದಾರನು ಆಯೇಷೆಯು ದಿಲ್ಲಿಗೆ ಹೋಗಿ ಕುಮಾರ ಜಗತ್ತಿಂಗನ ಬಂಧವಿಮೋ ಚನೆಯ ಸಲುವಾಗಿ ಮಾಡಿದ ಪ್ರಯತ್ನವು ವ್ಯರ್ಥವಾಗಲಿಲ್ಲ. ಮಾನಸಿಂಹನು ತನ್ನ ಮಗನ ಅಪರಾಧಕ್ಕಾಗಿ ವಿಧಿಸಿದ ಕಠಿಣ ಶಿಕ್ಷೆಯು ಉದಾರಾಂತಃಕರಣದ ಅಕಬರಬಾದಶಹನಿಗೆ ಮೊದಲೇ ಸಮ್ಮತವಿದ್ದಿಲ್ಲ, ಅದರಲ್ಲಿ ಆಯೇಷೆಯಂಥ ಗುಣಾಢಳು ಮಧ್ಯಸ್ಥಳಾದದ್ದರಿಂದ ತು ಬಾದಶಹನು ಜಗತ್ಸಂಗನ ಬಂಧವಿ ಮೋಚನೆಯ ಅಪ್ಪಣೆಯನ್ನು ಮಾನಸಿಂಹನಕಡೆಗೆ ಬಹು ಬೇಗನೆ ಕಳಿಸಿ ದನು, ಬಾದಶಹನು ತನ್ನ ಅಪ್ಪಣೆಯಲ್ಲಿ ಮಾನಸಿಂಹನಿಗೆ- CC ನೀವು ಕುಮಾರನ ವಿಷಯವಾಗಿ ಇಷ್ಟು ಕಠಿಣಹೃದಯರಾದದ್ದು ನನಗೆ ಸಮ್ಮತವಿಲ್ಲ. ಆತನ ಅಪರಾಧದಮಾನದಿಂದ ಆತನು ಇಷ್ಟು ದಿನ ಕಾರಾಗೃಹವಾಸದ ಶಿಕ್ಷೆ. ಯನ್ನನುಭೋಗಿಸಿದ್ದೇ ಹೆಚ್ಚಾಯಿತು. ನಮ್ಮ ಈ ಹುಕುಮು ಮುಟ್ಟಿದ ಕೂಡಲೆ ಕುಮಾರನ ಬಂಧವಿಮೋಚನೆಮಾಡುವದಲ್ಲದೆ, ಆತನನ್ನು ಬಂಗಾಲ, ಬಿಹಾರ, ಒಡಿಸಾಪ್ತಾ,೦ತಗಳ ಸುಬೇದಾರನನ್ನಾಗಿ ನಿಯಮಿಸಿ, ನೀವು ಮತ್ತೊಂದು ಮಹತ್ವದ ಕೆಲಸವನ್ನು ವಹಿಸುವದಕ್ಕಾಗಿ ದರ್ಬಾರಕ್ಕೆ ಬರ ಬೇಕು, ಪಠಾಣರ ಶಾಸನದ ಭಾರವನ್ನು ಕುಮಾರನೇ ವಹಿಸಲಿ ” ಎಂದು ಬರೆದಿದ್ದನು. ಬಾದಶಹನ ಈ ಅಪ್ಪಣೆಯಿಂದ ಮಾನಸಿಂಹನಿಗೆ ಬಹಳ ಸಂತೋ ಸವಾಯಿತೆಂದು ಬರೆಯುವ ಕಾರಣವಿಲ್ಲ. ಆತನು ಆಯೇಷೆಯನ್ನು ಮನ ಸ್ಸಿನಲ್ಲಿ ಬಹಳವಾಗಿ ಹೊಗಳಿದನು. ಆ ಕನ್ಯಾರತದೊಡನೆ ತನ್ನ ಮಗನ ವಿವಾಹವನ್ನು ಮಾಡಲೇಬೇಕೆಂದು ಆತನು ನಿಶ್ಚಯಿಸಿದನು, ಆತನ ಅಪ್ಪ ಹೆಯಂತ ಸೇವಕರು ಬಂಧವಿಮೋಚನೆಮಾಡುವದಕ್ಕಾಗಿ ಕಾರಾಗೃಹಕ್ಕೆ