ಪುಟ:ತಿಲೋತ್ತಮೆ.djvu/೧೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧ ನೂತನ ಸುಬೇದಾರನು. ೧೫೩ ಬಂದರು. ಆಗ ಕುಮಾರನು ತನ್ನ ದುಸ್ಥಿತಿಯನ್ನು ಸ್ಮರಿಸುತ್ತ ಚಿಂತಾಮ ಗ್ಯನಾಗಿ ಕುಳಿತುಕೊಂಡಿದ್ದನು. ತನ್ನ ಸಲುವಾಗಿ • ಆಯೇಷೆಯು ಪಟ್ಟ ಶ್ರಮವೂ ಮಾಡಿದ ಸಾಹ ಸವೂ ವ್ಯರ್ಥವಾದವೆಂದು ಆತನು ಬಹಳ ಅಸಮಾಧಾನ ಪಡುತ್ತಲಿದ್ದನು. ಆಯೇಷೆಯ ವಿಷಯವಾಗಿ ಆತನಲ್ಲಿ ಆದರವು ಬಹಳ. ಆತನು ಕಾರಾಗೃಹ ದಲ್ಲಿ ಕುಳಿತು ಆಕೆಯ ಗುಣಗಳ ಚಿಂತನ ಮಾಡುತ್ತಲಿದ್ದನು. ಆಗ ಆತನು ತನ್ನ ಮನಸ್ಸಿನಲ್ಲಿ ಆಯೇಷೆಯಂಥ ಸದ್ಗುಣಸಂಪನ್ನ ಯ ಸಹಾಯ ವುಳ್ಳ ನಾನೇ ಧನ್ಯನು, ಮನುಷ್ಯರ ಹೃದಯವಂತು ಇರಲಿ, ದೇವತೆಗಳ ಹೃದಯವೂ ಆಯೇಷೆಯ ಹೃದಯದಷ್ಟು ಪವಿತ್ರವಾಗಿರಲಿಕ್ಕಿಲ್ಲ. ಆಯೇ ಟೆಯು ದೇವಿಯು, ದಿವ್ಯಗುಣಗಳ ಖನಿಯು! ಆದರೆ ಹಾಯ! ಇಂಥ ಮಹಿ ಲೆಯು ತನ್ನ ಹೃದಯವನ್ನು ಅಪಾತ್ರನಾದ ನನಗೆ ಕೊಟ್ಟು ನಿರಂತರ ದುಃಖ ವನ್ನು ಭೋಗಿಸುತ್ತಿರುವಳು, ಅಧಮನಾದ ನಾನು ಆ ರಮಣಿಯ ದುಃಖಕ್ಕೆ ಕಾರಣೀಭೂತನಾಗಿರುವೆನು. ಪಾಪಿಷ್ಠನಾದ ನಾನು ಆ ದೇವಿಯದೃಷ್ಟಿಗೆ ಬೀಳದಿದ್ದರೆ, ನಿಶ್ಚಯವಾಗಿ ಆಕೆಯು ಸುಖಿಯಾಗುತ್ತಿದ್ದಳು. ಯಾವನಾ ದರೂ ಪ್ರೇಮಮುಗ್ಧನಾದ ಪುರುಷತ್ರೆ ಹೃನು ಅಮೂಲ್ಯವಾದ ಆ ರತ್ನ ವನ್ನು ತನ್ನ ಹೃದಯದಲ್ಲಿಟ್ಟು ಕೊಂಡು ಬಹು ಜಾಗರೂಕತೆಯಿಂದ ರಕ್ಷಿಸು ತಿದ್ದನು. ಹೀಗಾಗಿದ್ದರೆ ಆಯೆಷಾರೂಪ ಕುಸುಮವು ಈಗಿನಂತೆ ಮಲಿನ ವಾಗಿ ಬಾಡಿಹೋಗುತ್ತಿದ್ದಿಲ್ಲ. ಆದರೆ ಉಪಾಯವೇನಿದೆ? ಕೃತಜ್ಞನೂ, ನರಾ ಧಮನೂ ಆದ ನಾನು ಆಯೇಷೆಯಮೇಲೆ ಪ್ರೇಮಮಾಡಲಿಕ್ಕೆ ಸಮರ್ಥನೆ ಇರುವದಿಲ್ಲ, ತಿಲೋತ್ತಮೆಗೆ ನನ್ನ ಹೃದಯವನ್ನು ಕೊಟ್ಟು ಬಿಟ್ಟಿರುವದ ರಿಂದ, ಆಯೇಷೆಗೆ ನನ್ನ ಹೃದಯದಲ್ಲಿ ಸ್ಥಳವೇ ಇಲ್ಲ. ” ಎಂದು ಆಯೇಷೆ ಯನ್ನು ಚಿಂತಿಸುವಭರದಲ್ಲಿ ಆತನಿಗೆ ತಿಲೋತ್ತಮೆಯ ನೆನಪಾಯಿತು. ಆಗೆ ಆತನು ಶೋಕಾತಿಶಯದಿಂದ--ಹಾಯ, ದುರ್ದೈವವೇ! ಈ ಜನ್ಮದಲ್ಲಿ ನನ್ನ ಪ್ರಿಯಳಾದ ತಿಲೋತ್ತಮೆಯ ದರ್ಶನವು ನನಗೆ ಪುನಃ ಆಗಲಿಕ್ಕಿಲ್ಲವೆ? ಆಕೆಯೊಡನೆ ಪ್ರೇಮದಿಂದ ಮಾತಾಡುವ ಯೋಗವು ನನಗೆ ಒದಗಲಿಕ್ಕಿಲ್ಲವೆ? ಕರ್ತವ್ಯನಿಷ್ಠರಾದ ನನ್ನ ಹಿರಿಯರು ನನ್ನ ಅಪರಾಧಕ್ಕಾಗಿ ಇಂಥ ಕಠಿಣಶಿಕ್ಷೆ. - ಯನ್ನು ವಿಧಿಸಿರುವರು; ಆದರೆ ಮಗನಮೇಲಿನ ಅಂತಃಕರಣದಿಂದ ಅವರ