ಪುಟ:ತಿಲೋತ್ತಮೆ.djvu/೧೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೫೪ ತಿಲೋತ್ತಮೆ. ಹೃದಯವು ಕರಗಲಿಕ್ಕಿಲ್ಲವೆ? ನನಗೆ ಹಲವು ಜನ ಮಲತಾಯಂದಿರು ಇರುವ ರಲ್ಲ; ಅವರಲ್ಲಿ ಒಬ್ಬರಾದರೂ ನನ್ನ ಬಂಧವಿಮೋಚನದ ಉಪಾಯವನ್ನು ಯೋಚಿಸಬಾರದೇನು? ಇಷ್ಟು ಜನ ಆಸ್ತೇಷ್ಟರಿದ್ದರೂ ಜಗತ್ತಿಂಗನು ತನ್ನ ಶೇಷಾಯುಷ್ಯವನ್ನು ಹೀಗೆ ಮನಸ್ತಾಪದಲ್ಲಿ ಕಳೆಯಬೇಕಾಯಿತೇ? ನನಗೆ ಸಂಕೋಲೆಗಳ ದುಃಖವಿಲ್ಲ, ಬಂಧನದ ಭಯವಿಲ್ಲ: ಕಾರಾಗೃಹವಾಸದ ಹಂಗು ಇಲ್ಲ, ಆದರೆ ಒಮ್ಮೆಯೇ ದೂರದಿಂದ ಯಾಕಾಗಲೊಲ್ಲದು, ನನ್ನ ಪ್ರಾಣ ಪ್ರಿಯರಾದ ಜನರನ್ನು ನೋಡುವ ಸುಯೋಗವು ಒದಗಿದರೆ, ಇಂಥ ಕಷ್ಟ ವನಾ ದರೂ ನಾನು ಸಹಿಸುವೆನು. ತಿಲೋತ್ತಮೆಯನ್ನು ದೂರದಿಂದ ನೋಡುವದಕ್ಕೂ ಉಪಾಯವಿಲ್ಲವೇನು? ಆಯೇನೆಯ ಪುಣ್ಯ ಮೂರ್ತಿಯ ದರ್ಶನವು ಪುನಃ ನನಗೆ « ಆಗುವದಿಲ್ಲವೆ? - ಹೀಗೆ ಜಗಂಗನು ವ್ಯಸನಪಡುತ್ತಿರುವಾಗ ಸೆರೆಮನೆಯ ಬಾಗಿಲು ದಡಕ್ಕನೆ ತೆರೆಯಿತು. ಕಾರಾಗೃಹರಕ್ಷಕನನ್ನು ಮುಂದೆಮಾಡಿಕೊಂಡು ಮಥುರಾಸಿಂಹನು ಒಳಗೆ ಬಂದು ಜಗತ್ತಿ೦ಗನಿಗೆ ಬಹು ವಿನಯದಿಂದ ಮುಜುರೆ ಮಾಡಿದನು. ಇನೊಬ್ಬ ಸೇವಕನು ಅಮೂಲ್ಯವಾದ ವಸ್ತ್ರಾಲಂಕಾರಗಳನು ತಕ್ಕೊಂಡು ಮಥುರಾಸಿಂಹನನ್ನು ಹಿಂಬಾಲಿಸಿ ಬಂದಿದ್ದನು. ಇದನ್ನೆಲ್ಲ ನೋದಿ ಜಗತ್ಸಂಗನು ಆಶ್ಚರ್ಯಪಟ್ಟನು. ಆಗ ಮಥುರಾಸಿಂಹನು ವಿನಯ ದಿಂದ ಕೈಜೋಡಿಸಿ - IC ಯುವರಾಜರೇ, ಹಿಂದಕ್ಕೆ ಮಹಾರಾಜರ ಆಜ್ಞಾ ಪತ್ರವನ್ನು ತೋರಿಸಿ, ಮಂದಾರಣಗಡದಹತ್ಯರ ತಮ್ಮನ್ನು ಸೆರೆಹಿಡ ಕೊಂಡು ಬಂದ ಈ ದಾಸನ ಕೈಯಲ್ಲಿ ತಮ್ಮ ಬಂಧವಿಮೋಚನೆಮಾಡುವ ಬಗ್ಗೆ ಆಜ್ಞಾಪಿಸಿರುವ ಬಾದಶಹರ ಆಜ್ಞಾಪತ್ರವಿರುತ್ತದೆ. ಅವಲೋಕಿಸುವ ದಾಗಬೇಕು, ಸ್ವಾಮಿನಿಷ್ಟ ಸೇವಕರಿಗೆ ಸ್ವಾಮಿಯು ಯಾವಯಾವ ಆಜ್ಞೆಗ ಳನ್ನು ಪಾಲಿಸುವ ಪ್ರಸಂಗ ಬರುವದೆಂಬದನ್ನು ಹೇಳಲಾಗುವದಿಲ್ಲ. ಸೇವ ಕರ ಅಪರಾಧಗಳನ್ನು ಕ್ಷಮಿಸಲು ಒಡೆಯರೇ ಸಮರ್ಥರು! ಎಂದು ನುಡಿದು, ಬಂಧವಿಮೋಚನದ ಸಂಬಂಧದಿಂದ ಕಳಿಸಲ್ಪಟ್ಟಿದ್ದ ಬಾದಶಹನ ಆಜ್ಞಾ ಪತ್ರ ವನ್ನು ಯುವರಾಜನಿಗೆ ತೋರಿಸಿದನು. ಕೂಡಲೆ ರಕ್ಷಕನು ಬೇಡಿಗಳನ್ನು ಕಡಿಮ ರಾಜಕುಮಾರನನ್ನು ಬಂಧಮುಕ್ತ ಮಾಡಿದನು. ಜಗತ್ತಿಂಗನು ಮಂಗಲಸ್ನಾನಮಾಡಿ ವಸ್ತ್ರಾಲಂಕಾರಗಳಿಂದ ಅಲಂಕೃತನಾಗಿ ತನ್ನ ಅತ್ಯಂತ