ಪುಟ:ತಿಲೋತ್ತಮೆ.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೂತನ ಸುಬೇದಾರನು. ೧೫ ಪ್ರೀತಿಯ ಬಿಳಿಯ ಕುದುರೆಯನ್ನು ಹತ್ತಿಕೊಂಡು ತಂದೆಯ ದರ್ಬಾರಕ್ಕೆ ಸಾಗಿದನು. ಆಗ ಮಹಾ ಪ್ರತಾಸಿಯಾದ ಸುಂದರ ರಾಜಪುತ್ರನನ್ನು ನೋಡಿ ಪಾಟಣಾಪಟ್ಟಣದ ಜನರು ಸಂತೋಷಬಟ್ಟರು. ದಂಡಾಳುಗಳ ಆನಂದವು ಅವರ ಹೊಟ್ಟೆಯಲ್ಲಿ ಹಿಡಿಸದಾಯಿತು. ಬಾದಶಹನ ಹೆಸರಿ ನಿಂದಲೂ, ಮಾನಸಿಂಹನ ಹೆಸರಿನಿಂದಲೂ, ಯುವರಾಜನ ಹೆಸರಿನಿಂದಲೂ ಜಯಘೋಷಗಳಾಗತೊಡಗಿದವು. ನೊಡಿದಕ್ಕೆಲ್ಲ ಆನಂದವು ತುಳುಕು ತಿತ್ತು, ಕೆಲವು ಹೊತ್ತಿನಮೇಲೆ ಯಾವತ್ತು ಜನರು ದರ್ಬಾರದ ಬಾಗಿ ಲಿಗೆ ಮುಟ್ಟಿದರು. ಇದೇ ದರ್ಬಾರದಲ್ಲಿ ಕುಮಾರನಿಗೆ ಅವನ ತಂದೆಯಾದ ಮಾನಸಿಂಹನು ಆಜನ್ಮ ಬಂದಿವಾಸದ ಶಿಕ್ಷೆಯನ್ನು ವಿಧಿಸಿದ್ದನು. ಕುಮಾ ರನು ಬಾಗಿಲಲ್ಲಿಯೇ ಕುದುರೆಯನ್ನು ಇಳಿದನು. ಆಗ ಹಲವು ಜನ ರಜಪೂತ ಸರದಾರರೂ, ಮೊಗಲ ಸರದಾರರೂ ಕುಮಾರನನ್ನು ಎದುರುಗೊಳ್ಳುವದ ಕ್ಯಾಗಿ ಬಂದು, ಆದರದಿಂದ ಆತನನ್ನು ದರ್ಬಾರದೊಳಗೆ ಕರಕೊಂಡು ಹೋದರು. ಹಿಂದಕ್ಕೆ ಜಗತ್ತಿಂಗನ ಕೈಗೆ ಬೇಡಿಗಳನ್ನು ಹಾಕಿದ ದರ್ಬಾರದಲ್ಲಿಯೇ ಇಷ್ಟು ದಿವಸಗಳಮೇಲೆ ಜಗಕ್ಸಿಂಗನು ಸನ್ಮಾನದಿಂದಲೂ, ಗೌರವದಿಂದಲೂ ರಾಜಕೀಯ ಪೊಷಾಕನ್ನು ಹಾಕಿಕೊಂಡು ಪ್ರವೇಶಮಾಡಿದ್ದನು. ಅಂದಿನಂತ ಇಂದೆಯಾದರೂ ಮಾನಸಿಂಹನು ಉಚ್ಚಾಸನದಮೇಲೆ ಗಂಭೀರಮುದ್ರೆಯಿಂದ ಕುಳಿತುಕೊಂಡಿದ್ದನು. ಆತನ ಸಿಂಹಾಸನದ ಕೆಳಮಗ್ಗಲಿಗೆ ಸರದಾರರೂ, ದರಕದಾರರೂ ಕುಳಿತುಕೊಂಡಿದ್ದರು, ಸೈನಿಕರಿಂದಲೂ, ರಾಜಸೇವಕರಿಂದಲೂ, ಪ್ರಜೆಗಳಿಂದಲೂ ದರ್ಬಾರವು ಸಂಪೂರ್ಣವಾಗಿ ತುಂಬಿಹೋಗಿತ್ತು, ಕುಮಾ ರನು ದರ್ಬಾರದಲ್ಲಿ ಬರುತ್ತ ಬರುತ್ತ ಮಾನಸಿಂಹನ ಸಿಂಹಾಸನದ ಸಮೀ ಪಕ್ಕೆ ಬಂದನು. ಸಿಂಹಾಸನವು ಉಚ್ಚ ಸ್ಥಾನದಲ್ಲಿ ಬಿತ್ತು, ಕುಮಾರನು ತನ್ನ ತಲೆಯಮೇಲಿನ ಮಂದಿಲವನ್ನು ತೆಗೆದು ಮಾನಸಿಂಹನ ಚರಣದೆಡೆಯಲ್ಲಿಟ್ಟು ಕೈಜೋಡಿಸಿ-ಮಹಾರಾಜ, ಅಪರಾಧಿಯಾದ ತಮ್ಮ ಪುತ್ರನು ನಮ್ರಭಾವ ದಿಂದ ತನ್ನ ಅಪರಾಧದ ಕ್ಷಮೆಯ ಭಿಕ್ಷೆಯನ್ನು ಬೇಡಿಕೊಳ್ಳುವನ್ನು ಅನ್ನಲು, ಮಾನಸಿಂಹನು ಗಂಭೀರಭಾವದಿಂದ-ವತ್ಸಾ, ನಿನ್ನ ಯಾವತ್ತು ಅಪರಾಧಗಳನ್ನು ಸ್ವತಃ ಅಕಬರಬಾದಶಹರೆ: ಕ್ಷಮಿಸಿರುವದರಿಂದ, ನೀನು