ಪುಟ:ತಿಲೋತ್ತಮೆ.djvu/೧೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮ. ನನ್ನನ್ನು ಕ್ಷಮೆಯಸಲುವಾಗಿ ಯಾಚಿಸುವ ಕಾರಣವಿಲ್ಲ ಎಂದು ಹೇಳಿ ದನು. ಅದಕ್ಕೆ ಜಗತ್ತಿಂಗನು-ಶಹಾನಶಹನ ಅನುಗ್ರಹವು ನನ್ನ ಮೇಲಿ ರುವದು ನಿಜವು; ಆದರೆ ನನ್ನ ಪೂಜ್ಯ ಗುರುವೂ, ಇಹ-ಪರಗಳ ಪವಿತ್ರ) ಸಾಧನವೂ ಆದ ಪಿತೃ ದೈವತವು ನನಗೆ ಪ್ರಸನ್ನವಾಗದಿದ್ದರೆ ನನ್ನ ಜೀವನವು ವ್ಯರ್ಥವೇ ಸರಿ; ಆದ್ದರಿಂದ ಈ ಅಧಮ ಪುತ್ರನು ತಮ್ಮ ಅಂತಃಕರಣದ ಗೂಢ ಭಾವವನ್ನು ಅರಿತುಕೊಳ್ಳುವದಕ್ಕಾಗಿ ಅತ್ಯಂತ ಉತ್ಸುಕನಾಗಿರುವನು, ಅನ್ನಲು, ಅದಕ್ಕೆ ಮಾನಸಿಂಹನು-ಕುಮಾರಾ, ನಾನು ನಿನ್ನ ಯಾವತ್ತು ಅಪರಾಧಗಳನ್ನು ಅಂತಃಕರಣಪೂರ್ವಕವಾಗಿ ಕ್ಷಮಿಸಿದ್ದೇನೆ, ನೀನು ಕರ್ತವ್ಯ ಪರಾಯಣನಾಗಿ ಯಾವಾಗಲೂ ಯಶಸ್ವಿಯಾಗೆಂದು ಆಶೀರ್ವದಿಸುವೆನು, ಎಂದು ಹೇಳಿ, ಕುಮಾರನಮಂದಿಲವನ್ನು ಕೈಮುಟ್ಟಿ ಆತನ ತಲೆಗೆ ಹಾಕಿದನು. ಆಗ ಜಯಧ್ವನಿಯಿಂದ ಸಭಾಗೃಹವು ಪ್ರತಿಧ್ವನಿತವಾಯಿತು. ತಂದೆಯ ಚರ ಣಗಳಮೇಲೆ ಮಸ್ತಕವನ್ನಿಟ್ಟಿದ್ದ ಜಗತ್ಸಂಗನ ಮುಖದಿಂದಅಕ್ಷರಗಳೇ ಹೊರ ಡದಾದವು. ಕೆಲಹೊತ್ತಿನಮೇಲೆ ಆತನು ಕೈ ಜೋಡಿಸಿತಂದೆಯನ್ನು ಕುರಿತು ವಿನಯದಿಂದ-ಇಂದು ನನ್ನ ಜನ್ಮವುಸಫಲವಾಯಿತು. ಪಿತೃದೇವತೆಯ ಅಸಂ ತೋಷದ ಭಾರವನ್ನು ತಲೆಯಮೇಲೆ ಹೊತ್ತು ಕೊಂಡು ಬಾಳುವದಕ್ಕಿಂತ ಸಾಯುವದೇ ಶ್ರೇಯಸ್ಕರವಾಗಿತ್ತು, ನಾನು ಈ ವರೆಗೆ ಬದುಕಿದ್ದರೂ ಸತ್ಯಂ ತೆಯೇ ಇದ್ದೆ ನು, ಕರುಣಾನಿಧಿಯಾದ ತಂದೆಯೇ, ನಾನು ಒಂದಲ್ಲ-ಎರಡಲ್ಲ. ಹಲವು ಅಪರಾಧಗಳನ್ನು ಮಾಡಿರುವೆನು; ಅವುಗಳಲ್ಲಿ ಯಾವಯಾವ ಅಪರಾ ಧಗಳು ಕ್ಷಮಿಸಲ್ಪಟ್ಟವು, ಯಾವಯಾವ ಅಪರಾಧಗಳು ಕ್ಷಮಿಸಲ್ಪಟ್ಟಿರುವದಿಲ್ಲ, ಎಂಬದನ್ನು ತಿಳಕೊಳ್ಳುವದಕ್ಕಾಗಿ ಚರಣದೆಡೆಯಲ್ಲಿ ವಿಜ್ಞಾಪನೆಯನ್ನು ಮಾಡಿಕೊಳ್ಳಬಹುದೋ? ಎಂದು ಕೇಳಿದನು. ಅದಕ್ಕೆ ಮಾನಸಿಂಹನುಪ್ರಿಯ ಪುತ್ರಾ, ನಿನ್ನ ಎಲ್ಲ ಅಪರಾಧಗಳನ್ನು ನಾನು ಕ್ಷಮಿಸಿದ್ದೇನೆ, ನೀನು ಆಯೇಷೆಯ ಪ್ರೇಮವನ್ನು ಸಂಪಾದಿಸುವದಕ್ಕಾಗಿ ಎಂದೂ ಪ್ರಯತ್ನ ಮಾಡಿ ಲೆಂಬದು ನಾನು ಮನಗಂಡಿರುವೆನು. ನಬಾಬ ಉಸ್ಮಾನಖಾನನೇ ಈ ಮಾತನ್ನು ನನ್ನ ಬಳಿಗೆ ಬುದ್ಧಿ ಪೂರ್ವಕವಾಗಿ ಬಂದು ತಿಳಿಸಿರುವನು; ಆದ್ದ ರಿಂದ ಆ ಸಂಬಂಧದಿಂದ ನಿನ್ನನ್ನು ನಾನು ಅಪರಾಧಿಯೆಂದು ಭಾವಿಸಿದ್ದು ಅನ್ಯಾಯವು, ಅನ್ನಲು, ಜಗತ್ನಿಂಗನು ಮೋರೆಯನ್ನು ತಗ್ಗಿಸಿ ಲಜೆ