ಪುಟ:ತಿಲೋತ್ತಮೆ.djvu/೧೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೂತನ ಸುಬೇದಾರನು. ೫೬ ಯಿಂದ-ಇನ್ನೂ ಕೆಲವು ಅಪರಾಧಗಳು ನನ್ನಿಂದ ಘಟಿಸಿರುವವಲ್ಲವೆ ಎಂದು ಕೇಳಿದನು. - ಕುಮಾರನ ಈ ಮಾತುಗಳನ್ನು ಕೇಳಿ ಮಾನಸಿಂಹನ ಗಂಭೀರಮುದ್ರೆ. ಯಲ್ಲಿ ನಸುನಗೆಯು ತೋರಿತು. ಆತನು ಮಗನನ್ನು ಕುರಿತು-ಹ! ವೀರೇ೦ದ್ರಸಿಂಹನ ಮಗಳನ್ನು ನೀನು ಲಗ್ನ ಮಾಡಿಕೊಂಡಿರುತ್ತೀ, ನಿನ್ನ ಈ ಕೃತಿಯನ್ನು ನಾನು ಮಹಾಪರಾಧವೆಂದು ಭಾವಿಸಿದ್ದೆ ನು; ಆದರೆ ಅದು ನನ್ನ ಭಾ೦ತಿಯೇ ಸರಿ, ವೀರೇಂದ್ರಸಿಂಹನ ಮಗಳಾದ ತಿಲೋತ್ತಮಯು ರೂಪ-ಗುಣಗಳಿಂದ ಅತ್ಯಂತ ಶ್ರೇಷ್ಠಳಿರುತ್ತಾಳೆಂಬದು ನನಗೆ ಗೊತ್ತಾಗಿದೆ. ತಿಲೋತ್ತಮೆಯು ಪ್ರತ್ಯಕ್ಷ ರಾಜಲಕ್ಷ್ಮಿಯ ಅವತಾರವಿದ್ದದ್ದರಿಂದ ಆಕೆಯೊ ಡನೆ ನೀನು ಲಗ್ನವಾದದ್ದರ ಅಪರಾಧವನ್ನು ನಾನು ಕ್ಷಮಿಸಿದ್ದೇನೆ ಎಂದು ಹೇಳಿದನು. ಅದನ್ನು ಕೇಳಿ ಜಗಂಗನ ಹೃದಯವು ಆನಂದಪೂರ್ಣವಾ ಯಿತು. ಆತನ ಕಂಠವು ಬಿಗಿದು ಮಾತುಗಳು ಹೊರಡದಾದವು. ಮಾನ ಸಿಂಹನು ಮತ್ತೆ ಕುಮಾರನನ್ನು ಕುರಿತು-ನಿನ್ನ ರಾಜಕೀಯವಾದ ಅಪ -ರಾಧವನ್ನ೦ತು ಬಾದಶಹರು ಕ್ಷಮಿಸಿರುವದರಿಂದ ಅದರ ವಿಷಯವಾಗಿ ನಾನು ಏನೂ ಹೇಳುವದು ಉಳಿದಿರುವದಿಲ್ಲ; ಉಳಿದ ಅಪರಾಧಗಳನ್ನು ನಾನು ಕ್ಷಮಿಸಿಯೇ ಇರುತ್ತೇನೆ; ಅಂದಬಳಿಕ ಬಾದಶಹರ, ಹಾಗು ನನ್ನ ಇಬ್ಬರ ಮತದಿಂದಲೂ ನೀನು ನಿರ್ದೋಷಿಯೆಂದು ಸಿದ್ದವಾದಂತಾಯಿತು ಎಂದು ನುಡಿದನು, ಆಗ ಮತ್ತೆ ಸಭಾಗ ಹವು ಜಯಘೋಷದಿಂದ ಪೂರ್ಣವಾ ಯಿತು, ಆಗ ಮಾನಸಿಂಹನು ಜಗತ್ತಿಂಗನ ಕೈಯಲ್ಲಿ ಅಕಬರಬಾದಶಹನ ಸನ ದನ್ನು ಕೊಟ್ಟು ಆನಂದಭರದಿಂದ-ಯುವರಾಜನೇ, ಶಹಾನಶಹಾ ಅಕಬರ ರವರ ಆಜ್ಞೆಯಿಂದ ನೀನು ಇಂದಿನಿಂದ ಬಂಗಾಲ-ಬಿಹಾರ-ಒಡಿಸಾ ಪಾಂತ, ಗಳ ಸುಬೇದಾರನಾಗಿರುವೆ. ನಿನ್ನಂತೆ ಎಲ್ಲರ ದೈವವು ತೆರೆಯುವದು ದುರ್ಲಭವು, ಇಂಥ ಭಾಗ್ಯವು, ಎಲ್ಲರ ಹಣೆಬರಹದಲ್ಲಿ ಬರೆದಿರುವದಿಲ್ಲ. ನೀನು ಕರ್ತವ್ಯಪರಾಯಣನಾಗಿ ನ್ಯಾಯದಿಂದ ನಡೆದು ಸತ್ಯ-ಸಾಹಸ-ಸುವಿಚಾರ ಗಳ ಯೋಗದಿಂದ ಕೀರ್ತಿಶಾಲಿಯಾಗೆಂದು ನಾನು ನಿನ್ನನ್ನು ಆಶೀರ್ವದಿಸು ವೆನು ಎಂದು ನುಡಿಯುತ್ತಿರಲು, ದರ್ಬಾರದೊಳಗಿನವರೆಲ್ಲರು ಬಹುಮಾನ ಪೂರ್ವಕವಾಗಿ ಎದ್ದುನಿಂತು ಕುಮಾರ ಜಗತ್ತಿಂಗನನ್ನು ಅಭಿನಂದಿಸಿದರು