ಪುಟ:ತಿಲೋತ್ತಮೆ.djvu/೧೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

2೮ ತಿಲೋತ್ತಮೆ. ಅವರಲ್ಲಿ ಒಬ್ಬನು ಎಲ್ಲಕ್ಕೂ ಮುಂದೆಬಂದು-ಪ್ರಜೆಗಳಾದ ನಾವು ನೂತನ,. ಸುಭೇದಾರರನ್ನು ಅಭಿನಂದಿಸಿ, ಅವರ ಅಧಿಕಾರವನ್ನು ಆನಂದದಿಂದ ಒಪ್ಪಿ ಕೊಳ್ಳುತ್ತೇವೆ, ನಾವು ಅವರ ಆಜ್ಞೆಯನ್ನು ಶಿರಸಾವಹಿಸಿ ಅದನ್ನು ಪಾಲಿ ಸುವದಕ್ಕಾಗಿ ಸದಾ ತತ್ಪರರಾಗಿರುವೆವು. ಇವರ ಅಧಿಕಾರವೃದ್ದಿ ಯಿಂದ ಜನರು. ಅತ್ಯಂತ ಸಂತುಷ್ಟರಾಗಿರುವರು. ಇದರಂತೆಯೇ ಇವರ ಉತ್ಕರ್ಷವು ಆಗ ಛಂದು ಪರಮೇಶ್ವರನನ್ನು ಪ್ರಾರ್ಥಿಸುವೆವು, ಎಂದು ನುಡಿದನು. ಆಗ . ಸಭಾಗೃಹವೆಲ್ಲ ಕುಮಾರನ ಜಯಜಯಕಾರಧ್ವನಿಯಿಂದ ತುಂಬಿಹೋಯಿತು. ಇದನ್ನು ನೋಡಿ ಜಗಕ್ಸಿಂಗನು ಆಶ್ಚರ್ಯ ಪಟ್ಟನು. ಎಲ್ಲಿಯ ಭಯಂಕರ ವಾದ ಕತ್ತಲೆಯ ಕೋಣೆಯು, ಎಲ್ಲಿಯ ಕೈಕಾಲುಗಳೊಳಗಿನ ಸಂಕೋಲೆಗಳ ಭಾರದಿಂದ ತಳಮಳಿಸುವ ದುಸ್ಥಿತಿಯು; ಆದರೆ ಈಗ ಅಕಸ್ಮಾತ್ತಾಗಿ ದೊರೆ ತಿರುವ ಎಲ್ಲಿಯ ಬಂಗಾಲ-ಬಿಹಾರ-ಒಡಿಸಾವಾಂತಗಳ ಈ ಸುಭೇದಾರಿ ಕೆಯು! ತನ್ನ ಸ್ಥಿತಿಯಲ್ಲಿ ಹೀಗೆ ಭೂಮಾಕಾಶದಷ್ಟು ಅಂತರವಾದದ್ದನ್ನು ನೋಡಿ ಕುಮಾರನು ಮೂಢನಾದನು. ಹೀಗೆ ತಾನು ದೊಡ್ಡ ಪದವಿಗೆ ಹೋದೇನೆಂಬ ಕಲ್ಪನೆಯು ಸಹ ಕುಮಾರನ ಕನಸು-ಮನಸ್ಸುಗಳಲ್ಲಿ ಇದ್ದಿಲ್ಲ. ಆತನು ದಂಗುಬಡೆದು ಸುಮ್ಮನೆ ನಿಂತಿರಲು, ಮಾನಸಿಂಹನು-ಕುಮಾರ ಜಗತ್ವಿಂಹ, ನೀನು ಇಂದಿನಿಂದ ಈ ಸುಬೇದಾರಿಕೆಯ ಕೆಲಸವನ್ನು ವಿಸ್ತರಿಸ. ಬೇಕಾಗುವದು, ನಾನು ಸ್ವಲ್ಪ ವಿಶ್ರಮಿಸುವೆನು, ಎಂದು ಹೇಳಿ ದನು; ಆದರೂ ಕುಮಾರನ ಮುಖದಿಂದ ಮಾತುಗಳು ಹೊರಡಲಿಲ್ಲ. ಆತನು ಆಶ್ಚರ್ಯದಿಂದ ತಂದೆಯ ಮುಖವನ್ನು ನೋಡುತ್ತ ಸುಮ್ಮನೆ ನಿಂತು: ಕೊಂಡನು, ಮಾನಸಿಂಹನು ಮಗನ ಮನೋಭಾವವನ್ನು ತಿಳಿದು ಆತ ನನ್ನು ಕುರಿತು~ II ಈ ಹುಕುಮು ಮುಟ್ಟಿದ ಕೂಡಲೆ ಅಮಲಿನಲ್ಲಿ ತರಬೇ ಕೆ ” ಂದು ಬಾದಶಹರು ಆಜ್ಞಾಪಿಸಿದ್ದಾರೆ; ಮತ್ತು ಬೇಗನೆ ಆಗ್ರಾಕ್ಕೆ ಬರಬೇ. ಕೆಂದು ನನಗೆ ಬರೆದಿರುವರು; ಆದ್ದರಿಂದ ನಾನು ಬೇಗನೆ ಆಗ್ರಾಕ್ಕೆ ಹೋಗಿ ಅಲ್ಲಿಂದ ದಿಲ್ಲಿಗೆ, ಪ್ರಸಂಗಬಿದ್ದರೆ ಅಜಮೀರಕ್ಕೆ ಸಹ ಹೋಗಬೇಕಾಗಬಹುದು.. ಹೀಗೆಯೇ ಆದೀತೆಂದು ಈಗ ಹೇಳಲಿಕ್ಕೆ ಬರುವಹಾಗಿಲ್ಲ, ನನ್ನ ಗೈರಹಾಜರಿ ಯಲ್ಲಿ ನೀನು ನನ್ನ ಸುಬೇದಾರಿಯ ಕೆಲಸವನ್ನು ಸಾಗಿಸಬೇಕೆಂದು ಬಾದ. ತಹರು ಸೂಚಿಸಿರುವರು. ನಾನು ನನ್ನ ಅಧಿಕಾರದಿಂದ ಈ ಕೆಲಸವನ್ನು