ಪುಟ:ತಿಲೋತ್ತಮೆ.djvu/೧೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನೂತನ ಸುಬೇದಾರನು. ೧೫೯ ಮಾಡುವದಿಲ್ಲ; ಬಾದಶಹರ ಆಜ್ಞೆಯಿಂದ ಇದೆಲ್ಲ ಒದಗಿಬಂದಿರುವದು, ಎಂದು ಸ್ಪಷ್ಟವಾಗಿ ಹೇಳಿದನು, ಅದರಿಂದ ಕಮಾರನಿಗೆ ಸಮಾಧಾನವಾಗಿ ಆತನು ತಂದೆಯನ್ನು ಕುರಿತು-ಪೂಜ್ಯರೇ, ಮಾನ್ಯರಾದ ಬಾದಶಹರ ಆಜ್ಞೆಯನ್ನು ಪಾಲಿಸಲಿಕ್ಕೆ ನಾನು ಸದಾ ತತ್ಪರನಾಗಿರುವೆನು; ಮತ್ತು ಮಹಾರಾಜರ ಆಜ್ಞೆಯನ್ನು ಪಾಲಿಸುವದಂತು ಈ ದಾಸನ ಪರಮಾರ್ಥವಾಗಿರುತ್ತದೆ. ಈ ಅನುಗ್ರಹಕ್ಕಾಗಿ ಬಾದಶಹರ, ಹಾಗು ಮಹಾರಾಜರ ಚರಣಗಳಲ್ಲಿ ನಾನು ಅಂತಃಕರಣ ಪೂರ್ವಕವಾಗಿ ಕೃತಜ್ಞತೆಯನ್ನು ಪ್ರಕಟಿಸುವೆನು. ಇಷ್ಟಾದಬಳಿಕ ಮಾನಸಿ೦ಹನು ಸಿಂಹಾಸನದಿಂದ ಇಳಿದು ಕುಮಾರ ನನು ಕೈಹಿಡಿದು ಆ ಸಿಂಹಾಸನದಮೇಲೆ ಕುಳ್ಳಿರಿಸುವಾಗ-ಪ್ರಿಯಪುತಾ, ಬಾ, ನನ್ನ ಈ ಸಿಂಹಾಸನವನ್ನು ಆರೋಹಿಸು, ನಾನು ನಿನ್ನ ತಂದೆಯಾ ಗಿದ್ದರೂ ನಿನ್ನ ಅಧಿಕಾರದ ದೃಷ್ಟಿಯಿಂದ ಈಗ ನಿನ್ನ ಒಬ್ಬ ಪ್ರಜಾಜನವಾಗಿ ದ್ದೇನೆ. ನಿನ್ನ ಕೈಯಲ್ಲಿ ಬಾದಶಹರ ಸನದು ಕೊಡಲ್ಪಟ್ಟಿರುವದರಿಂದ, ನೀನು ಬಂಗಾಲ-ಬಿಹಾರ-ಒಡಿಸಾ ಪ್ರಾಂತಗಳ ಸುಬೇದಾರನಾಗಿರುತ್ತಿ; ಆದ್ದ ರಿಂದ ಸುಬೇದಾರನ ಆಸನದಮೇಲೆ ಕುಳ್ಳಿರಿಸುವದು ನನ್ನ ಕರ್ತವ್ಯವಾಗಿರು ತದೆ, ಎಂದು ನುಡಿಯಲು, ಜಗತ್ಸಂಗನು ತಂದೆಯ ಚರಣಗಳಮೇಲೆ ಮಸ್ತಕವನಿಟ್ಟನು. ಆಗ ಮಾನಸಿಂಹನು ಮಗನನ್ನು ಸಿಂಹಾಸನದ ಮೇಲೆ ಕುಳ್ಳಿರಿಸಿ, ತನ್ನ ಸ್ವಾಭಾವಿಕವಾದ ದೊಡ್ಡ ಗೊಗ್ಗ ರ ದನಿಯಿಂದ ಸಭಿಕರನ್ನು ಕುರಿತು-ನಾನು ಮಾನಸಿಂಹನು, ಸಾವಾಟ್ ಅಕಬರನ ಏಕನಿಷ್ಟ ನೌಕ ರನಾಗಿರುತ್ತೇನೆ. ಬಾದಶಹರ ಅಪ್ಪಣೆಯಂತೆ ನಾನು ನಿಮ್ಮೆಲ್ಲರ ಸಮಕ್ಷ ಕುಮಾರನನ್ನು ಸಿಂಹಾಸನದಮೇಲೆ ಕುಳ್ಳಿರಿಸುತ್ತೇನೆ. ಈತನ ಆಡಳಿತ ದಲ್ಲಿ ಪ್ರಜೆಗಳ ಸುಖ-ಶಾಂತಿಗಳು ಹೆಚ್ಚುವವೆಂದು ನಾನು ಆಶಿಸುವೆನು, ಎಂದು ಹೇಳಿದನು. ಆಗ ನೂತನ ಸುಬೇದಾರನು--ನಾನು ಬಾದಶಹರ ಮಂಗಲವನ್ನು ಚಿಂತಿಸುವಲ್ಲಿ ಜೀವದ ಪರಿವೆಯಿಡೆನು, ರಾಜ್ಯ ಕಾರಭಾರ ವನ್ನು ನಡಿಸುವಲ್ಲಿ ನನ್ನ ಪೂಜ್ಯ ತಂದೆಯಾದ ಮಾನಸಿಂಹರವರ ಅನುಕ ರಣವಮಾಡಲು ಹೆಣಗುವೆನು; ಅದರಂತೆ ಯಾವತ್ತು ಪ್ರಜೆಗಳ, ಹಾಗು ನೌಕರರ ಸುಖವು ಅಭಿವೃದ್ಧಿ ಸುವಂತೆ ಯಾವಾಗಲೂ ಯತ್ನಿ ಸುವೆನು, ಎಂದು ಉತ್ತರರೂಪದಿಂದ ಭಾಷಣಮಾಡಲು, ದರ್ಬಾರದ ಶಿಷ್ಟಾಚಾರಗಳೆಲ್ಲ ತೀರಿ