ಪುಟ:ತಿಲೋತ್ತಮೆ.djvu/೧೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೦ ತಿಲೋತ್ತಮ. ದರ್ಬಾರದ ಕಾರ್ಯವು ಮುಗಿಸಲ್ಪಟ್ಟಿತು. ತನ್ನ ಪ್ರಿಯಳಾದ ತಿಲೋತ್ತಮೆಯ ಲಗ್ನದ ವಿಷಯವಾಗಿ ತಂದೆಯ ಒಪ್ಪಿಗೆಯು ದೊರೆತದ್ದರಿಂದ ಜಗತ್ಸಂಗನಿಗೆ ಬಹಳ ಸಂತೋಷವಾಯಿತು. - ತಿಲೋತ್ತಮೆಯು ಪಾಟಣಾಕ್ಕೆ ಬಂದದ್ದು ಆತನಿಗೆ ಗೊತ್ತಿದ್ದಿಲ್ಲ: ಆದ್ದರಿಂದ ಮಂದಾರಣಗಡಕ್ಕೆ ಹೋಗಿ ತನ್ನ ಪ್ರಿಯಳನ್ನು ಕಂಡು ಆಕೆಯನ್ನು ಯಾವಾಗ ಸಮಾಧಾನ ಪಡಿಸೇನೆಂದು ಆತನು ಆತುರಪಡಹತ್ತಿದನು. ದರ್ಬಾ ರವು ಬಿಟ್ಟ ಬಳಿಕ ತಂದೆ ಮಕ್ಕಳಿಬ್ಬರೂ ಅರಮನೆಗೆ ಹೋದರು, ಆಗ ಮಹಾ ರಾಜರು ಕುಮಾರನಿಗೆ--ನೀನು ನಿನ್ನ ತಾಯಂದಿರ ಭೆಟ್ಟಿಯಾಗು, ನಾನು ಆಗ್ರಾಕ್ಕೆ ಹೊರಡುವ ಸಿದ್ಧತೆಯನ್ನು ಮಾಡುತ್ತೇನೆ, ಎಂದು ಹೇಳಿ, ಕುಮಾ ರನನ್ನು ಅಂತಃಪುರಕ್ಕೆ ಕಳಿಸಿಕೊಟ್ಟನು. ಜಗಕ್ಸಿಂಗನು ಎಲ್ಲಕ್ಕೂ ಮೊದಲು ಉರ್ಮಿಳಾರಾಣಿಯು ಇರುವ ಮಹಾಲಿಗೆ ಹೋದನು. ಅಲ್ಲಿಯೇ ಆತನ ಮೂವರು ಸಾಪತ್ನ ಮಾತೆಯರು ಅಕಸ್ಮಾತ್ ಮಾತಾಡುತ್ತ ಕುಳಿತಿದ್ದರು. ಜಗತ್ಸಂಗನು ಭಕ್ತಿ ಪುರಸ್ಸರವಾಗಿ ಎಲ್ಲರಿಗೂ ನಮಸ್ಕಾರಮಾಡಿದನು. ಆಗ ಅವನ ಮಾತೃವರ್ಗವು ಅವನನ್ನು ಆಶೀರ್ವದಿಸಿ, ಆತನು ಕಾರಾಗೃಹದಲ್ಲಿ ಕಷ್ಟ ಪಟ್ಟದ್ದಕ್ಕಾಗಿ ದುಃಖ ಪಟ್ಟಿತು, ಬಳಿಕ ಉರ್ಮಿಳಾರಾಣಿಯು ವಾತ್ಸಲ್ಯ ದಿಂದ ಕುಮಾರನನ್ನು ಕುರಿತು-ಜಗತ್, ನೀನು ಇನ್ನೂ ಊಟಮಾಡಿ ರುವದಿಲ್ಲ, ಆದ್ದರಿಂದ ಮೊದಲು ಸ್ವಲ್ಪ ಉಪಹಾರಮಾಡು, ನಿನ್ನ ಸಂಗಡ ಆಡುವ ಸುಖದುಃಖದ ಮಾತುಗಳು ಬಹಳ ಇರುತ್ತವೆ; ಆದರೆ ಹಿಂದುಗಡೆ ಮಾತಾಡೋಣವಂತೆ; ನೀನು ಮೊದಲು ನನ್ನ ಸಂಗಡ ಬಾ, ಎಂದು ಹೇಳಿ ಕುಮಾರನನ್ನು ಒಂದು ಕೋಣೆಯೊಳಗೆ ಕರಕೊಂಡು ಹೋಗಿ ಉಪಹಾರ ಮಾಡಿಸಿ, ಇನ್ನು ಸ್ವಲ್ಪ ವಿಶ್ರಮಿಸು ಎಂದು ಹೇಳಿ ತಾನು ಎರಡನೆಯ ಕಡೆಗೆ ಹೋದಳು. ಇತ್ತ ಜಗತ್ತಿಂಗನು ಹಾಸಿ ಸಿದ್ದವಾಗಿದ್ದ ಮಂಚದಮೇಲೆ ಸ್ವಲ್ಪ ಅಡ್ಡಾಗಿ ವಿಶ್ರಮಿಸಹತ್ತಿದನು. ಆತನ ಮನಸ್ಸನ್ನು ತಿಲೋತ್ತಮೆಯು ಆಕರ್ಷಿಸಿ ಬಿಟ್ಟಿದ್ದರಿಂದ ಆಕೆಯ ದರ್ಶನವಾಗದಹೊರತು ಆತನಿಗೆ ಸಮಾಧಾನ ವಾಗುವಂತೆ ಇದ್ದಿಲ್ಲ, ಜಗತ್ತಿಂಗನು ತಿಲೋತ್ತಮೆಯ ಸದ್ದು ಣಗಳ ಚಿಂತನ ಮಾಡುತ್ತಿರುವಾಗ ಒಬ್ಬ ಸುಂದರಿಯು ಉರ್ಮಿಳಾರಾಣಿಯ ಅಪ್ಪಣೆಯಿಂದ ತಾಂಬೂಲಪಾತ್ರೆಯನ್ನು ತಕ್ಕೊಂಡು ಜಗಂಗನ ಬಳಿಗೆ ಬಂದಳು. ಆಕ