ಪುಟ:ತಿಲೋತ್ತಮೆ.djvu/೧೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೌರ್ಯಸಂಜೀವನ. C೬೧ ಯನ್ನು ನೋಡಿ ಕುಮಾರನು ಭ್ರಮಿಷ್ಠನಂತೆ ಎದ್ದು ಮಂಚದ ಕೆಳಗೆ ನಿಂತು ಕೊಂಡನು. ತಾನು ಸ್ವಪ್ನದಲ್ಲಿರುವನೋ? ಎಂಬ ಭಾಂತಿಯು ಆತನಿಗೆ ಆಯಿತು. ಈ ದಿನ ಒಂದರಹಿಂದೊಂದರಂತೆ ನಡೆದ ಅಸಂಭವವಾದ ಸಂಗತಿ ಗಳಿಂದ ಆತನು ನಿಶ್ಚಯವಾಗಿ ಭ್ರಮಿಷ್ಠ ನಂತೆ ಆಗಿದ್ದನು. ಆತನು ಮನಸ್ಸಿ ನಲ್ಲಿ-ಎಲ, ಈಕೆಯು ನನ್ನ ಪ್ರಾಣಪ್ರಿಯಳಾದ ತಿಲೋತ್ತಮೆಯಿರುವ ಇಲ್ಲ! ಈಕೆಯು ಇಲ್ಲಿಗೆ ಹೇಗೆ ಬಂದಳು? ನನ್ನ ತಂದೆಯಾದರೂ ಈಕೆ ಯನ್ನು ಹೇಗೆ ಬರಗೊಟ್ಟಿರಬಹದು? ನಮ್ಮಿಬ್ಬರ ಈ ಸುಖಕರವಾದ ಸಮ್ಮೇ ಲನದ ಯೋಗವು ಯಾರ ಪುಣ್ಯದಿಂದ ಈಗ ಒದಗಿರಬಹದು? ಈ ಮಾತು ಸಂಭವನೀಯವಾಗಿರುವದೊ? ಸಂಭವನೀಯವಾಗಿರದಿದ್ದರೆ ಈಗ ತಿಲೋತ್ರ ಮೆಯು ಪ್ರತ್ಯಕ್ಷ ನನ್ನ ಕಣ್ಣಿಗೆ ಕಾಣುತ್ತಿರುವದಕ್ಕೆ ಏನೆನ್ನಬೇಕು? ಛೇ, ಈಕೆಯು ನಿಶ್ಚಯವಾಗಿ ನನ್ನ ಪ್ರಿಯಳು; ಸುಗುಣಿಮಣಿಯಾದ ತಿಲೋಕ್ಷ ಮೇಯು! ೧೭ನೆಯ ಪ್ರಕರಣ, ಶೌರ್ಯ ಸಂಜೀವನ! -ಹಿ ಈ ಕಾಲದಲ್ಲಿ ತಿಲೋತ್ತಮೆಯ ಸ್ವರೂಪವು ವರ್ಣನೀಯವಾಗಿತ್ತು. ಈಗ ಆಕೆಯು ಆನಂದದಲ್ಲಿರುವ ದುಃಬದಲ್ಲಿರುವಳೋ ಎಂಬದನ್ನು ಹೇಳುವದು ಕಠಿಣವಾಗಿತ್ತು, ಯಾಕಂದರೆ, ಆಕೆಯು ಆನಂದದಲ್ಲಿರುವ ಳೆಂದು ಹೇಳಬೇಕೆಂದರೆ ಆಕೆಯು ಕಣ್ಣೀರು ಸುರಿಸುತ್ತಿದ್ದಳು; ದುಃಖದಲ್ಲಿರು ವಳೆಂದು ಹೇಳಬೇಕಾಗಿದ್ದರೆ ಆಕೆಯ ಮುಖದಲ್ಲಿ ಮುಗುಳುನಗೆಯು ಒಪ್ಪು ತಿತ್ತು, ಹೀಗೆ ಅದ್ಭುತವಾದ ದೃಶ್ಯದಿಂದ ಒಪ್ಪುವ ತಿಲೋತ್ತವೆಯು ಕೈಯೊಳಗಿನ ತಾಂಬೂಲಪಾತ್ರೆಯನ್ನು ಕೆಳಗಿಟ್ಟು ಪತಿಯ ಚರಣಗಳಮೇಲೆ