ಪುಟ:ತಿಲೋತ್ತಮೆ.djvu/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

* 4 * # ಕyt+ 4 +4 # ೨ ತಿಲೋತ್ತಮೆ. ಮಸ್ತಕವನ್ನಿಟ್ಟಳು. ಆಗ ಜಗತ್ತಿಂಗನು ಆಕೆಯನ್ನು ಹಿಡಿದೆತ್ತಿ ಸಂತಯಿ ಸುತ್ತ ಆಕೆಯನ್ನು ಕುರಿತು-ತಿಲೋತ್ತಮೇ, ನೀನು ಇಲ್ಲಿಗೆ ಹೇಗೆ ಬಂದೆ? ಎಂದು ಪ್ರಶ್ನೆ ಮಾಡಿದನು; ಆದರೆ ಆನಂದಾತಿಶಯದಿಂದ ಕಂಠಬಿಗಿದು ಒಂದೇ ಸವನೆ ಆನಂದಬಾಷ್ಪಗಳು ಉದರಲು, ತಿಲೋತ್ತಮೆಯ ಬಾಯಿಂದ ಅಕ್ಷರ ಗಳೇ ಹೊರಡದಾದವು ಆಕೆಯು ಪ್ರೇಮಭರದಿಂದ ಪತಿಯನ್ನು ಆಲಿಂಗಿಸಲು ಅಕೃತ್ರಿಮ ಪ್ರೇಮದ ಆ ದಂಪತಿಗಳು ಮೂಕಭಾವದಿಂದ ಆಲಿಂಗನದ ಸ್ವರ್ಗ ಸುಖವನ್ನು ಬಹಳ ಹೊತ್ತು ಅನುಭವಿಸಿದರು; ಈ ಅಲಭಸುಖವು ಆ ನೂತನ ಸುಬೇದಾರನ ಇಂದಿನ ಸುಖದರಾಶಿಗೆ ಶಿಖರಪ್ರಾಯವಾಯಿತು!

  • ಹೀಗೆ ಅಕ್ರಮಪ್ರೇಮದ ಆ ದಂಪತಿಗಳು ಆನಂದಾಶುಗಳುದುರು ೬ರಲು, ಕೆಲಕಾಲ ಆಲಿಂಗನದ ಸೌಖ್ಯವನ್ನು ಹೊಂದಿದರು, ಅಷ್ಟರಲ್ಲಿಯೇ ತಿಲೋತ್ತಮೆಯು ಗೌರವಕ್ಕಾಗಿ ಪತಿಯಿಂದ ದೂರವಾಗಲು, ಜಗತ್ಸಂಗನು

ಆಕೆಯನ್ನು ಕೈಹಿಡಿದು ಮಂಚದಮೇಲೆ ಕುಳ್ಳಿರಿಸುತ್ತ ಅತ್ಯಾದರದಿಂದ < ತಿಲೋತ್ತಮೇ, ನೀನು ಇಲ್ಲಿಗೆ ಹೇಗೆ ಬಂದೆ? ” ಎಂದು ಮತ್ತೆ ಪ್ರಶ್ನೆ ಮಾಡಿದನು. ಆಗ ತಿಲೋತ್ತಮೆಯು ವಿನಯದಿಂದ- CC ಈ ಪ್ರಶ್ನೆ ಯು' ವಿಲಕ್ಷಣವಾಗಿದ್ದರೂ, ನನ್ನ ಲಗ್ನ ಮಾಡಿಕೊಂಡದ್ದರಿಂದ ತಮಗೊದಗಿದ ಅನ ರ್ಥವನ್ನು ಮನಸ್ಸಿನಲ್ಲಿ ತಂದರೆ, ತಾವು ಪ್ರಶ್ನೆ ಮಾಡಿದ್ದು ಯೋಗ್ಯವೆಂತಲೇ ಹೇಳಬೇಕಾಗುವದು; ಬೇರೆ ಯಾರಾದರೂ ಹೀಗೆ ಪ್ರಶ್ನೆ ಮಾಡಿದ್ದರೆ, ಅದನ್ನು ವಿಲಕ್ಷಣವೆಂದು ಭಾವಿಸಬೇಕಾಗುತ್ತಿತ್ತು; ಯಾಕಂದರೆ ತನ್ನ ಗಂಡನ ಮನೆ ಯಲ್ಲಿರುವ ಸ್ತ್ರೀಗೆ II ನೀನು ಇಲ್ಲಿಗೆ ಹೇಗೆ ಬಂದೆ? ಎಂದು ಕೇಳುವದು ನಿಲ ಕಣವಲ್ಲವೇ? ಆ ಸ್ತ್ರಿಯಾದರೂ ಅದಕ್ಕೆ ಏನೆಂದು ಉತ್ತರಕೊಡಬೇಕು? " ಎಂದು ಕೇಳಿ, ತಿಲೋತ್ತಮೆಯು-- ಶ್ರೀ ಕ್ಷೇತ) ಪುರಿಯಯಾತ್ರೆಗೆ ಮಾನ ಸಿಂಹರವರು ಬಂದಾಗ ತಾನು ತನ್ನ ತಾಯಿಯ ಸಹಾಯದಿಂದ ಉರ್ಮಿಳಾ ರಾಣಿಯವರ ಆಶ್ರಯ ಪಡೆದದ್ದನ್ನೂ, ಆ ಕರುಣಾಮಯಳಾದ ರಾಣಿಯ ಕೃಪೆಯಿಂದ ತನಗೆ ಮಹಾರಾಜರ ಪರಿಚಯವಾದದ್ದನ್ನೂ, ತನ್ನ ಸೇವೆಯಿಂದ ಮಹಾರಾಜರು ಪ್ರಸನ್ನ ರಾದದ್ದನ್ನೂ, ಮಹಾರಾಣಿಯ ಚಾತುರದಿಂದ ಮಹಾ ರಾಜರು ತನ್ನನ್ನು ಕ್ಷಮಿಸಿ ಸೊಸೆಯೆಂದು ತಿಳಿದು ತನ್ನನ್ನು ಸ್ವೀಕರಿಸಿ ದ್ದನ್ನೂ, ಸ್ವಲ್ಪದರಲ್ಲಿ ಹೇಳಿದಳು. ಅದನ್ನೆಲ್ಲ ಕೇಳಿ ಜಗಕ್ಸಿಂಗನು- C ತಿಲೋ'