ಪುಟ:ತಿಲೋತ್ತಮೆ.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೌರ್ಯಸಂಜೀವನ ೧೬೩. ಇಮೇ, ಎಲ್ಲ ಸಂಗತಿಯನ್ನು ಮನಸ್ಸಿನಲ್ಲಿ ತಂದು ಆಲೋಚಿಸಿದರೆ, ನಿನ್ನ ಬುದ್ದಿ ಕೌಶಲ್ಯದಿಂದಲೇ ನಾನು ಈ ಶುಭದಿನವನ್ನು ಕಂಡೆನೆಂದು ಹೇಳ' ಬೇಕಾಗುತ್ತದೆ. ನಾನು ಯಾವ ಶಬ್ದ ದಿಂದ ನಿನ್ನ ಉಪಕಾರವನ್ನು ನೆನಿ. ಸಲಿ? ನನ್ನ ಬಿಡುಗಡೆಯು ನಿನ್ನಿಂದಲೇ ಆಯಿತೆಂಬುದರಲ್ಲಿ ಎಳ್ಳಷ್ಟು ಸಂದೇಹವಿಲ್ಲ. ಪತಿಯ ಈಮಾತುಗಳನ್ನು ಕೇಳಿ ತಿಲೋತ್ತಮೆಯು ಸರಳ ಮನಸ್ಸಿನಿಂದಪ್ರಾಣನಾಥ, ತಾವು ನನ್ನನ್ನು ಅತಿಶಯವಾಗಿ ಪ್ರೀತಿಸುತ್ತಿರುವದರಿಂದ, ನನ್ನ ಪರಿಶ್ರಮದಿಂದಲೇ ಬಿಡುಗಡೆಯಾಯಿತೆಂದು ತಾವು ತಿಳಿದುಕೊಳ್ಳುತ್ತೀರಿ; ಇದರಿಂದ ತಮಗೆ ನಿಜವಾದ ಸಂಗತಿಯು ತಿಳಿದಿರುವದಿ ಲ್ಲೆಂದು ಹೇಳಬೇಕಾ, ಗುತ್ತದೆ. ನಾನು ನನ್ನ ಪ್ರಯತ್ನ ದಿಂದ ನನ್ನ ಸ್ಥಾನವನ್ನು ಸಂಪಾದಿಸಿಕೊಂಡು, ಮಹಾರಾಜರ ಕೃಪೆಯಿಂದ ಸೊಸೆಯೆಂದು ಸ್ವೀಕರಿಸಲ್ಪಟ್ಟೆನು. ಇದಕ್ಕಿಂತಲೂ ಹೆಚ್ಚಿನ ಕೆಲಸವೇನೂ ನನ್ನಿಂದ ಆಗಿರುವದಿಲ್ಲ. ಅಂದಬಳಿಕ ನಾನೇನು ಹೆಚ್ಚಿಗೆ ಮಾಡಿದ ಹಾಗಾಯಿತು? ತಮ್ಮ ಬಂಧವಿಮೋಚನೆಗಾಗಿ ನಾನೇನುಪ್ರಯತ್ನ ಪಟ್ಟಿ ಹಾಗಾಯಿತು? ಇದರಲ್ಲಿ ನನ್ನ ಚಾತುರ್ಯವಾದರೂ ಏನುಇರುವದು? ಅದಕ್ಕಾಗಿ ತಾವು ನನ್ನನ್ನು ಹೊಗಳುವದಾದರೂ ಏಕೆ? ನಿಜವಾಗಿ ತಮ್ಮ ಸ್ತುತಿಗೆ ಪಾತ್ರರಾದವರು ಯಾರಾದರೂ ಇದ್ದರೆ, ಅವರು ಆಯೇಷೆಯೆಂಬ ದನ್ನು ಮರೆಯಬಾರದು. ಆ ಮಹಾ ತ್ಮಳ ಉಪಕಾರವನ್ನು ನಾನಷ್ಟೇ ಅಲ್ಲ' - ನೀವು ಸಹ ಎಷ್ಟು ಸ್ಮರಿಸಿದರೂ ತೀರದು, ತಮ್ಮನ್ನು ಈ ವೈಭ ವದ ಶಿಖರದಮೇಲೆ ಕುಳ್ಳಿರಿಸಿದವಳು ಆ ನಬಾಬಜಾದಿಯು! ಆಕೆಯ ದೀರ್ಘ ಪ್ರಯತ್ನದ, ಹಾಗು ವಿಲಕ್ಷಣ ಚಾತುರ್ಯದ ಫಲವೇ ಇಂದಿನ ನಮ್ಮ ಸುದಿವಸವಾಗಿರುವದು. ಆಯೇಷೆಯ ಔದಾರ್ಯವು ಅದ್ವಿತೀಯವಾದದ್ದು. ಪರೋಪಕಾರನಿರತಳಾದ ಆ ತರುಣಿಯು ನಿಮ್ಮ ಸಲುವಾಗಿ ಬಹಳ ಕಷ್ಟ ಪಟ್ಟಿ ರುವಳು. ಆಕೆಯು Kತಾವ ತೊಂದರೆಯನ್ನೂ ಲಕ್ಷಿಸದೆ ಆಗ್ರಾಪಟ್ಟಣಕ್ಕೆ ಹೋಗಿ ಅಕಬರ ಬಾದಶಹರನ್ನು ಕಂಡು ನಿಮ್ಮ ಬಂಧವಿಮೋಚನೆ ಮಾಡಿ ಸಿದ್ದಲ್ಲದೆ, ನಿಮಗೆ ಈ ದೊಡ್ಡ ಅಧಿಕಾರವನ್ನು ಕೊಡಿಸಿದಳು. ಇದಲ್ಲದೆ ನಿಮಗಾಗಿ ಒಂದು ಲಕ್ಷ ರೂಪಾಯಿಗಳ ಜಹಗೀರನ್ನು ಆಕೆಯು ಬಾದಶಹು ರಿಂದ ಸಂಪಾದಿಸಿರುವಳೆಂದು ನಾನು ಕೇಳಿದ್ದೇನೆ; ಅ೦ದಬಳಿಕ ನಿಮ್ಮ ಬಂಧ