ಪುಟ:ತಿಲೋತ್ತಮೆ.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

'ಆ೪. ತಿಲೋತ್ತಮೆ. ವಿಮೋಚನೆಯಾದುದಕ್ಕಾಗಿ, ಅದರಂತೆ ನಿಮಗೆ ದೊಡ್ಡ ಅಧಿಕಾರವು ದೊರೆತ ದ್ದಕ್ಕಾಗಿ ನೀವು ಯಾರಿಗಾದರೂ ಕೃತಜ್ಞರಾಗಬೇಕೆನ್ನುತ್ತಿದ್ದರೆ, ಆಯೇ ಷೆಯೇ ಆ ಮಾನಕ್ಕೆ ಪಾತ್ರಳಿರುತ್ತಾಳೆ. ನಮಗೆ ಪ್ರಾಪ್ತವಾಗಿರುವ ಕಲ್ಪನಾ ತೀತ ಸುಖಕ್ಕೆ ಆಯೇಷೆಯ ಅವಿಶ್ರಾಂತಶ್ರಮವೇ ಕಾರಣವಾಗಿರುವದರಿಂದ - ನಾವು ಆಕೆಯ ಋಣದೊಳಗಿಂದ ಮುಕ್ತರಾಗಲಿಕ್ಕೆ ಯತ್ನಿಸಬೇಕು. ತನ್ನ ಮೇಲಿದ್ದ ಆಯೇಷೆಯ ದೃಢತರವಾದ ಪ್ರೇಮವನ್ನು ಜಗ ೬ಂಗನು ಈ ಮೊದಲೇ ಅರಿತಿದ್ದನು; ಆದರೂ ತನ್ನ ಸಲುವಾಗಿ ಆಕೆಯು ಪಟ್ಟ ಶ್ರಮವನ್ನೂ ಮಾಡಿದ ಸಾಹಸವನ್ನೂ ಕೇಳಿ ಆತನ ಕಂಠವು ಸದ್ದಿ ತಿತ -ವಾಯಿತು. ಆತನು ತಿಲೋತ್ತಮೆಯನ್ನು ಕುರಿತು • ಜಗಕ್ಸಿಂಗ- ಪ್ರಿಯೇ, ನೀನು ಹೇಳುವದುಯಥಾರ್ಥವು! ಆದರೆ ಆ ದೇವಿ ಯಖಣದಿಂದ ಹೇಗೆ ಮುಕ್ತನಾಗಬೇಕೆಂಬದೇ ನನಗೆ ತಿಳಿಯದಾಗಿದೆ. - ತಿಲೋತ್ತಮೆ-ನಾಥ, ಆದನ್ನು ನಾನು ತಮಗೆ ಹೇಳುವೆನು. ದಯಮಾಡಿ ನನ್ನ ಮಾತನ್ನು ನಡಿಸಿದರೆ ನಾವಿಬ್ಬರೂ ಆಯೇಷೆಯ ಗುಣ ದಿಂದ ಮುಕ್ತರಾಗುವೆವು, ನನ್ನ ಅಭಿಪ್ರಾಯವಿಷ್ಟೆ, ನೀವು ಆಯೇಷೆಯನ್ನು ಹೆಂಡತಿಯೆಂದು ಸ್ವೀಕರಿಸಬೇಕು. ಜಗತ್ಸಂಗ-ಪ್ರಾಣೇಶ್ವರಿ, ನಿನ್ನ ಈ ಪ್ರಾರ್ಥನೆಯನ್ನು ಕೇಳಿ ನನಗೆ 'ಬಹಳ ಸಂತೋಷವಾಗುತ್ತದೆ. ನಿನ೦ಥ ಉದಾರ ಮನಸ್ಸಿನ ಹೆಂಡತಿಯು ಸಿಕ್ಕಿದ್ದರಿಂದ ನಾನು ಧನ್ಯನೇ ಸರಿ. ಆಯೇಷೆಯ ಗುಣಗಳಿಗೆ ಲುದ್ದಿ ಳಾಗಿ ನೀನು ಆಕೆಯನ್ನು ಸವತಿಯಾಗಿ ಮಾಡಿಕೊಳ್ಳಲಿಕ್ಕೆ ಹಿಂದೆ-ಮುಂದೆ ನೋಡ ದೆಯಿರುವದು ಸಾಧಾರಣ ಸಂಗತಿಗಳು.. ನಿನ್ನ ಹೃದಯವು ಬಹು ಉಚ್ಚ ತರದ್ದಾಗಿರುವದು; ಆದರೆ ಈ ಕಾರ್ಯವು ಶಕ್ಯವಿರುವದೇ ಎಂಬದನ್ನು ಕುರಿತು ನೀನು ಚನ್ನಾಗಿ ವಿಚಾರಮಾಡಿದಂತೆ ತೋರುವದಿಲ್ಲ. ನನಗಂತು ಈ ಕಾರ್ಯವು ಅಸಂಭವವಾಗಿ ತೋರುತ್ತದೆ. ತಿಲೋತ್ತಮೆ-ಮಹಾರಾಜ, ಅಸಂಭವವೆಂದು ಯಾಕೆ ಹೇಳುವಿರಿ? ಆಯೇಷೆಯು ನಿಮ್ಮನ್ನು ಪ್ರೀತಿಸುತ್ತಿರುವದರಿಂದ, ಈ ಕಾರ್ಯಕ್ಕೆ ಆಕ `ಯಿಂದ ವಿಘ್ನವಾಗುವ ಸಂಭವವಿರುವದಿಲ್ಲ, ಇನ್ನು ಹಿರಿಯರ ಆಂಜಿಕೆಯ ದೊಂದು ದೊಡ್ಡ ವಿಘ್ರವು, ಆದರೆ ಆ ವಿಘ್ನವನ್ನು ಮನಸ್ಸಿನಲ್ಲಿ ತರುವ