ಪುಟ:ತಿಲೋತ್ತಮೆ.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶೌರ್ಯಸಂಜೀವನ | ೧೬೫. ಕಾರಣವಿಲ್ಲ. ಯಾಕಂದರೆ, ಮಹಾರಾಜ್ಜಿಯೂ ಮಹಾರಾಜರೂ ನಿಮ್ಮೊ. ಡನೆ ಆಯೇಷೆಯ ಲಗ್ನ ಮಾಡಬೇಕೆಂದು ಹಲವುಸಾರೆ ಆಲೋಚಿಸಿರುತ್ತಾರೆ. ಅವರು ಆಯೇನೆಯ ಮುಂದೆಯೂ ಈ ಮಾತು ತೆಗೆದಂತೆ ಮಾಡಿರುವರು. ತಮ್ಮ ಒಪ್ಪಿಗೆಯು ದೊರೆಯುವದೊ ಇಲ್ಲವೊ, ಎಂಬ ಅಪನಂಬಿಗೆಯಿಂದ ಆಯೇಷೆಯು ಅವರ ಮಾತಿಗೆ ಒಪ್ಪಿಕೊಂಡಿರಲಿಕ್ಕಿಲ್ಲ. ತಾವು ನನ್ನ ಮಾತು . ನಡಿಸುತ್ತೇವೆಂದು ವಚನಕೊಟ್ಟರೆ, ನಾನು ಪ್ರಯತ್ನ ಮಾಡಿ ಆಯೇಷೆ, ಯನ್ನು ಒಡಂಡಿಸುವೆನು. ಜಗಕ್ಸಿಂಗ-ಆಯೇಷೆ ಯು ನಮ್ಮೊಡನೆ ವಿವಾಹ ಮಾಡಿಕೊಳ್ಳಲಿಕ್ಕೆ ಒಡಂಬಡುವಳೆಂದು ಭಾ೦ತಿಯೇ ಸರಿ, ಯಾಕಂದರೆ, ಆಯೇಷೆಯು ತಾನು ನನ್ನನ್ನು ಪತಿ ಯ ಭಾವನೆಯಿಂದ ಪ್ರೀತಿಸುತ್ತಿದ್ದರೂ, ನಾನು ಆಕೆ ಯನು ಪ ಯ ಭಾವನೆಯಿಂದ ಸಿ ತಿಸುತ್ತಿರುವದಿಲ್ಲೆ೦ಬದು ಆಕೆಗೆ . ಗೊತ್ತಿರುತ್ತದೆ. ನಾನಾದರೂ ಆಯೇಷೆಯನ್ನು ಪ್ರಿತಿಸುವದಿಲ್ಲವೆಂತಲ್ಲ. ಆದರೆ ನಿನ್ನಲ್ಲಿ ಸಂಪೂರ್ಣ ಪ್ರೇಮವನಿಟ್ಟ ನಾನು ಆಯೇಷೆಯನ್ನು ಪತ್ನಿ! ಭಾವದಿಂದ ಪ್ರೀತಿಸಲಾರೆನು, ಈ ಮಾತು ಆಯೇಷೆಗೆ ಗೊತ್ತಿರುವದರಿಂದ, ಆಕೆಯು ನಮ್ಮೊಡನೆ ವಿವಾಹಮಾಡಿಕೊಳ್ಳಲಿಕ್ಕೆ ಒಪ್ಪಿಕೊಳ್ಳಲಾರಳು. ತಿಲೋತ್ತಮೆ-ಹಾಗಾದರೆ ಆ ಶೋಭಾಯಮಾನವಾದ ಕುಸುಮವು ಹೀಗೆಯೆ ಬಾಡಿ ಹೋಗಬೇಕೆಂದು ನೀವು ಇಚ್ಛಿಸುವಿರೊ? ಆ ಸುರರಮ ಣಿಯು ದಾರುಣವಾದ ದುಃಖದಿಂದ ತನ್ನ ಆಯುಷ್ಯವನ್ನು ಕಳೆಯುವದು ನಿಮಗೆ ಸಮ್ಮತವಾಗಿರುವದೊ? ಪಾಸ ಆ ಹತಭಾಗ್ಯಳ ಪ್ರೇಮಕ್ಕೆ ಪ್ರತಿ ಫಲವು ನಿಮ್ಮಿಂದ ಯಾಕೆ ದೊರೆಯಬಾರದು? ಜಗಕ್ಸಿಂಗ-ತಿಲೋತ್ತಮೆ, ಪರಮೇಶ್ವರನ ಇಚ್ಛೆಯೇನಿರುತ್ತದೆಂಬ ದನ್ನು ನಾನೇನು ಹೇಳಲಿ? ಆದರೆ ಆಯೇಷೆಯು ತನ್ನ ಶೇಷಾಯುಷ್ಯ ವನ್ನು ದಾರುಣವಾದ ಯಾತನೆಯಿಂದ ಕಳೆಯಬೇಕಾದೀ ತೆನ್ನುವಹಾಗೆ ನನಗೆ ತೋರುತ್ತದೆ. ಆಕೆಯ ದುಃಖ ನಿವಾರಣವು ಈ ಜನ್ಮದಲ್ಲಿ ಆಗಲಾ ರದು. ನಾನು ಆಕೆಯನ್ನು ಬಹಳವಾಗಿ ಪ್ರೀತಿಸುವೆನು ಆಕೆಯ ಸದ್ದು ಣ ಗಳಿಗೆ ನಾನು ಅತ್ಯಂತ ಲುಬ್ಬ ನಾಗಿರುವೆನು. ಆಕೆಯ ಸೌಂದರ್ಯವು ನನಗೆ. ಅದ್ವಿತೀಯವಾಗಿ ತೋರುವದು, ನನ್ನ ಮೇಲೆ ಆಕೆಯು ಮಾಡಿರುವ ಉಸ