ಪುಟ:ತಿಲೋತ್ತಮೆ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

17೬೬ ತಿಲೋತ್ತಮೆ. ಕಾರವನ್ನು ತೀರಿಸುವದು ಕಲ್ಕಾಂತದಲ್ಲಿಯೂ ನನ್ನಿಂದಾಗದು. ಆದರೆ ಇಷ್ಟೆಲ್ಲ ನಿಜವಿದ್ದರೂ ಆಯೇಷೆ ಯನ್ನು ಹೆಂಡತಿಯೆಂದು ತಿಳಿಯಲಿಕ್ಕೆ ಮಾತ್ರ ನಾನು ಸಮರ್ಥನಾಗಿರುವದಿಲ್ಲ. ಪ್ರಿಯೇ, ನಿನ್ನನ್ನು ಹೆಂಡತಿಯನ್ನಾಗಿ ಮಾಡಿಕೊಂಡು, ನಿನಗೆ ಸಂಪೂರ್ಣ ಹೃದಯವನ್ನು ನಾನು ಕೊಟ್ಟು ಬಿಟ್ಟರು ವದರಿಂದ, ಆಯೇಷೆಯ ವಾಸಕ್ಕೆ ನನ್ನ ಹೃದಯದಲ್ಲಿ ಸ್ಥಳವೇ ಇಲ್ಲ. ಆಯೇ ಸೆಯು ಸಾಮಾನ್ಯಳಲ್ಲ. ಆಕೆಯು ಸಂಪೂರ್ಣ ಹೃದಯವನ್ನು ವ್ಯಾಪಿಸಿಕೊಂಡಿರತಕ್ಕವಳು, ಸಂದಿಗೊಂದಿಗಳಲ್ಲಿ ಇರತಕ್ಕವಳಲ್ಲ. ಅಂದಬಳಿಕ ನಾನು ಆಯೇಷೆಯನ್ನು ಹೆಗೆ ಲಗ್ನವಾಗಲಿ? ಆಯೇಷೆಯಾದರೂ ನನ್ನನ್ನು ಹೇಗೆ ಲಗ್ನವಾಗುವಳು? ಆಕೆಯು ನನ್ನನ್ನು ಲಗ್ನವಾಗುವಹಾಗಿಲ್ಲ, ಮಂದಿ ಯನ್ನೂ ಲಗ್ನ ಮಾಡಿಕೊಳ್ಳುವಹಾಗಿಲ್ಲ. ಆದ್ದರಿಂದ ಆಯೇಷೆಯು ಈಜನ್ಮ ದಲ್ಲಿ ಕಷ್ಟದಿಂದ ಕಾಲಹರಣ ಮಾಡತಕ್ಕವಳೇ ಸರಿ, ತಿಲೋತ್ತಮೆ, ನಮ್ಮಿ ಬರಮೇಲೆ ಆಯೇಷೆಯ ಪ್ರೇಮವು, ವಿಶೇಷವಾಗಿರುವದು. ಆ ಪ್ರೇಮದ ಯೋಗದಿಂದಲೆ: ಆಕೆಯು ನಮ್ಮ ಮೇಲೆ ಉಸಕಾರಮಾಡಿರುವಳಲ್ಲದೆ, ನನ್ನಿಂದ ಪ್ರತ್ಯುಪಕಾರವನ್ನು ಬಯಸಿಮಾಡಿರುವದಿಲ್ಲ. ಆಕೆಯನ್ನು ನನ್ನ ಪ್ರೇಮಸಂಪಾದನದ ದೃಷ್ಟಿಯಿಂದ ಉಪಕಾರಮಾಡಿದ್ದರೆ, ಮೇಲಿಂದಮೇಲೆ ನನ್ನ ಭೆಟ್ಟಿಯನ್ನು ತಕ್ಕೊಳ್ಳುತ್ತಿದ್ದಳು. ಆದ್ದರಿಂದ ಸ್ವಲ್ಪವಾದರೂ ಸ್ವಾರ್ಥದ ಇಚ್ಛೆಯಿಲ್ಲದೆ ಆಕೆಯು ನಮ್ಮಮೇಲೆ ಉಪಕಾರ ಮಾಡಿದಂತಾಗಿರುವದು ತಿಲೆತ್ತವೆ-ಸರಿ ಸರಿ; ತಮ್ಮ ಬೆ: ಧ ದಿಂದ ಆಯೇ ಸೆ ಯ ಯೋಗ್ಯ ತೆಯ ಜಾನವು ನನಗೆ ಕೆಲಮಟ್ಟಿಗೆ ಆದಂತಾಯಿತು. ಆ ಯೆ: ಷೆ ಯು ತಮ್ಮ ಹೃದಯದೊಳಗಿನ ಸಂಪೂ.- ಪ್ರೇಮವನ್ನು ಸಂಪಾದಿಸಿದ ಹೊರತು ಸಂತು, ಇಲಾಗಲಾರಳು. ಒಬನೆಬ್ಬ ರಾಜನಿಗಿರುವ ಅನೇಕ ಹೆಂಡುಗೆ ( ನಾವು -ರಾಣಿ ಯರು ” ಎಂದು ಹೇಳಿಕೊಳ್ಳಲಿಕ್ಕೆ ಆಸ್ಪದ ಸಿಕ್ಕಮಾತ್ರದಿಂದ ಅವರು ಸಂತುಷ್ಟರಾಗಿರುವಂತೆ, ಅ ಋಷೆ ಯು ಸಂತುಷ್ಟ ಲಾಗಿರಲಾರಳು; ಆಯೇ ಷೆಯ ಪ್ರೇಮ-ಸೂರ್ಯನ ಪ್ರಕಾಶವು ಹರಡಲಿಕ್ಕೆ ಸ್ವತಂತ್ರ ) ಹೃದಯಾಕಾ ಶವೆ: ಬೆ: ಕಾಗಿರುವದು; ತಮ್ಮ ಹೃದಯದಲ್ಲಿ ಯಂತು ಸ್ಥಳವಿಲ್ಲ; ಅಂದಬಳಿಕ ಆ ಮಹಾತ್ಮಳ ದುಃಖ ನಿವಾರಣವು ಹಗಾಗಬೇಕು? ಆದರೆ ಮಹಾರಾಜ, ಇದಕ್ಕೆ ಉತ್ತರವೇ ಇಲ್ಲವೆ? ಪ್ರಬಲ ವಾಸನೆಯಿಂದಲೂ , ಭಗೀರಥ ಪ್ರಯ