ಪುಟ:ತಿಲೋತ್ತಮೆ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ತಿಲೋತ್ತಮೆ. ವರ ಬೋಧವನ್ನು ಕೇಳಿದಮಾತ್ರದಿಂದ, ಅಥವಾ ಅವರ ಭೋಧವಚನ ಗಳನ್ನು ಗಟ್ಟಿಮಾಡಿ ಬಾಯಿಂದ ಉಚ್ಚರಿಸಿದ ಮಾತ್ರದಿಂದ ದೊಡ್ಡವರ ಮಾತಿನ ಅನುಭವವು ನಿನಗೆ ಬರಲಾರದು, ಈ ಕಲಿಯುಗದಲ್ಲಿ ಜನರ ನಾಲಿಗೆಗಳು ಉದ್ದವಾಗಿರುತ್ತವಲ್ಲದೆ ಕೈಗಳು ಉದ್ದವಾಗಿರುವದಿಲ್ಲ. ಅಂದರೆ ವೇದಾಂತವು ಜನರ ಬಾಯಲ್ಲಿರುತ್ತದಲ್ಲದೆ ಕೃತಿಯಲ್ಲಿ ತೋರಬರುವದಿಲ್ಲ. ದೊಡ್ಡ ದೊಡ್ಡ ವೇದಾಂತ ಗ್ರಂಥಗಳನ್ನು ಓದಿದ ಮಾತ್ರದಿಂದ, ಅಥವಾ ವೇದಾಂತ ವಿಷಯವನ್ನು ಸರಸವಾಗಿ ಬೋಧಿಸಿದ ಮಾತ್ರದಿಂದ ನಾವು ಜ್ಞಾನಿಗಳಾದೆವೆಂದು ದುರಭಿಮಾನಪಡುವವರು ಎಂದಿಗೂ ನೆಲೆಗಾಣುವ ದಿಲ್ಲ. ಜಗಕ್ಸಿಂಹ, ದುಡ್ಡು ಕೊಟ್ಟರೆಲ್ಲ ನೂರು ಕುಳುಗಳು ಸಿಗುತ್ತವೆ; ಆದರೆ ಸುಟ್ಟು ಕೊಳ್ಳುವವರಿಲ್ಲದಿದ್ದರೆ ಕುಳ್ಳುಸಿಕ್ಕು ಪ್ರಯೋಜನವೇನು ಹೇಳು? ಅದರಂತೆ, ಸದ್ಯೋಧಗಳನ್ನು ವಿಪುಲವಾಗಿ ಕೇಳಿದರೂ ಆ ಬೋಧವಚನ ಗಳಂತೆ ನಡೆಯುವದಕ್ಕಾಗಿ ತಪಶ್ಚರ್ಯಮಾಡದಿದ್ದರೆ, ಆ ಬೋಧವಚನಗ ಇನ್ನು ಕೇಳಿ ಪ್ರಯೋಜನವೇನು? ಪಾಪ, ಇನ್ನೂ ತುಟಿಯ ಕಾಲು ಆರದ ನೀನು ಇಂಥ ಭ್ರಾಂತಿಗೆ ಈಡಾಗಬೇಡ, ನಿನ್ನ ಮನಸ್ಸು ಈಗ ವ್ಯಾಮೋಹಕ್ಕೊಳಗಾದದ್ದು ಅಯೋಗ್ಯವಲ್ಲ; ಯಾಕಂದರೆ, ಅದು ಆಯೋ ವ್ಯ ಸ್ಥಾನದಲ್ಲಿ ಮೊಹಿಸಿರುವದಿಲ್ಲ. ದುಷ್ಯಂತನು ಶಕುಂತಲೆಗೆ ಮೊಹಿಸಿ ದಂತೆ ನೀನು ಈಗ ತಿಲೋತ್ತಮೆಗೆ ಮೊಹಿಸಿರು, ಬಲವತ್ರನಾದ ಸತ್ಸಂಗದಿಂದ ನಿಸ್ಸ೦ಗಸ್ಥಿತಿಯು ಪ್ರಾಚೀನ ಪುಣ್ಯದಿಂದ ಸಾಧಕನಿಗೆ ತಾನೆ? ಪ್ರಾಪ್ತವಾಗಬೇಕಲ್ಲದೆ, ನಾನು ನಿಸ್ಸ೦ಗವಾಗಬೇಕೆಂದು ವ್ಯರ್ಥ ಪೇಚಾಡಿ ದರೆ ಯಾವನೂ ನಿಸ್ಸ೦ಗನಾಗಲಾರನು. ಹೀಗಾಗಬೇಕೆಂದು ಮಾಡಿದ್ದೆಲ್ಲ ವೇಷವಾಗಬಹುದಲ್ಲದೆ ಸತ್ಯಸ್ವರೂಪದ್ದಾಗಲಾರದು. ಒಮ್ಮೆಲೆ ಮೋಹ ವನ್ನು ಬಿಡುವದಕ್ಕಿಂತ ಅಯೋಗ್ಯ ವಿಷಯದಲ್ಲಿ ಮೋಹವುಂಟಾಗದಂತೆ ಜಾಗರೂಕವಾಗಿರುವದು ಪ್ರಥಮಸಾಧನವು, ನೀನು ಮಹಾಕುಲೀನನಾದ ದ್ದರಿಂದಲೂ, ಸತ್ಸಂಗದಲ್ಲಿ ಗೃಹಶಿಕ್ಷಣವನ್ನು ಹೊಂದುತ್ತ ನೀನು ದೊಡ್ಡ ವನಾಗಿರುವದರಿಂದಲೂ ಸೈಜ್ಞಾವೃತ್ತಿಯ ನರಪಶುಗಳಂತೆ ಅಯೋಗ : ಸ್ಥಾನದಲ್ಲಿ ನಿನಗೆ ಮೋಹವು ಉತ್ಪನ್ನವಾಗುವ ಸಂಭವವೇ ಇಲ್ಲ. ಜಗ ೩ಂಹ, ತಿಲೋತ್ತಮೆಯನ್ನು ನಿನ್ನ ಸಲುವಾಗಿಯೇ ಬ್ರಹ್ಮದೇವನು