ಪುಟ:ತಿಲೋತ್ತಮೆ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯ ವ್ಯಾಮೋಹ. ಸೃಷ್ಟಿಸಿರುವನೆಂದು ತಿಳಿ. ನಿಮ್ಮಿಬ್ಬರಲ್ಲಿ ಪರಸ್ಪರರ ವಿಷಯವಾಗಿ ಹುಟ್ಟಿದ ಸ್ವಾಭಾವಿಕ ಪ್ರೇಮವು ಏನು ಮಾಡಿದರೂ ನಷ್ಟವಾಗಲಾರದು. ಬ್ರಹ್ಮ ಸಂಕಲ್ಪವನ್ನು ಮೀರುವವರು ಯಾರಿರುವರು? ಆದ್ದರಿಂದ, ತಿಲೋತ್ರ ಮೆಯ ಪಾಣಿಗ್ರಹಣವನ್ನು ನೀನು ಮಾಡಬೇಕು, ಆದರೆ ಈ ಯೋ ಗವು ಈಗಲೇ ಒದಗುವಹಾಗಿಲ್ಲ. ಅದು ಪರಿಣಾಮದಲ್ಲಿ ಸುಖಕರವಾಗಿ ದ್ದರೂ ಸದ್ಯಕ್ಕೆ ಕಷ್ಟದಾಯಕವಾಗಿರುತ್ತದೆ, ಆದ್ದರಿಂದ ನೀನು ಬೆಳಗಾ ಗುತ್ತಲೆ ನಿನ್ನ ತಂದೆಯಬಳಿಗೆ ಹೋಗು. ಪಠಾಣರ ಶಾಸನದ ಕೆಲಸವು ಮುಗಿದಬಳಿಕ ತಿಲೋತ್ತಮೆಯ ಸಹವಾಸವು ನಿನಗೆ ಸುಖಪ್ರದವಾಗು ವದು, ಅಲ್ಲಿಯವರೆಗೆ ನಿನ್ನ ಮನಸ್ಸು ಎಷ್ಟು ಜಗಿ ದರೂ ತಿಲೋತ್ರ ಮೆಯ ಗೊಡವಿಗೆ ನೀನು ಹೋಗಬೇಡ, ಪುನಃ ಆಕೆಯ ದರ್ಶನವೂ ನಿನಗೆ ನಿಷೇಧವೆಂದು ತಿಳಿ; ಯಾಕಂದರೆ ತಿಲೊ ತಮೆಯ ವಿವಾಹಕ್ಕೆ ನಿನ್ನ ಹಿರಿಯರ ಅನುಮತಿಯೂ ಬೇಕಾಗಿರುವದು. ಈಮೇರೆಗೆ ಅಭಿರಾಮಸ್ವಾಮಿಗಳು, ತನ್ನ ಮನಸ್ಸಿನೊಳಗಿದ್ದದ್ದನ್ನು ಬಿಚ್ಚಿ ಹೇಳಿ ತಿಲೋತ್ತಮೆಯ ಪಾಣಿಗ್ರಹಣಕ್ಕೆ ಒಪ್ಪಿಗೆಯಿತ್ತದ್ದಕ್ಕಾಗಿ ಜಗ ತಿಂಗನಿಗೆ ಪರಮಾನಂದವಾಯಿತು. ತಿಲೋತ್ತಮೆಯೂ ತನ್ನನ್ನು ಧನ್ಯ ಳೆಂದು ತಿಳಿದು, ಗುರುಗಳಾದ ಅಭಿರಾಮಸ್ವಾಮಿಗಳು ತನ್ನ ನ್ನು ಅನು ಗ್ರಹಿಸಿದ್ದಕ್ಕಾಗಿ ಶತಶಃ ಆವರನ್ನು ಮನಸ್ಸಿನಿಂದ ಅಭಿನಂದಿಸಿದಳು. ತನ್ನ ಮಗಳಿಗೆ, ಯೋಗ್ಯವರನು ಅನಾಯಾಸವಾಗಿಯೇ ಸಿಕ್ಕ ದಕ್ಕಾಗಿ ವಿಮಲಾ ದೇವಿಗೂ ಪರಮಾನಂದವಾಯಿತು. ಹೀಗೆ ಆ ಶಿವಾಲಯದಲ್ಲಿ ಆನಂದದ ಸಾಮ್ರಾಜ್ಯವು ಉಂಟಾದಂತೆಯಾಗಿದ್ದರೂ, ತಿಲೋತ್ತಮೆಯ ಪಾಣಿಗ್ರ ಹಣ ಕಾರ್ಯದಲ್ಲಿ ವಿಲಂಬವಾಗುವದನ್ನು ನೋಡಿ ವಿಮಲಾದೇವಿಗೆ ಸ್ವಲ್ಪ ಅಸಮಾಧಾನವಾಯಿತು. ಆಕೆಯು ಅಭಿರಾಮಸ್ವಾಮಿಗಳನ್ನು ಕುರಿತು ವಿನಯದಿಂದ-ಮಹಾಸ್ವಾಮಿ, ತಮ್ಮ ಆಜ್ಞೆಯು ಶಿರಸಾವಂದ್ಯವಾಗಿರು ವದು; ಆದರೆ ದೇಶದ ಈಗಿನ ಸ್ಥಿತಿಯನ್ನೂ, ತಿಲೋತ್ತಮೆಯ ರೂಪ ಲಾವಣ್ಯಗಳನ್ನೂ, ನಮ್ಮ ಕದಬಲವನ್ನೂ ಮನಸ್ಸಿನಲ್ಲಿ ತಂದು ವಿಚಾ ರಿಸಿದರೆ, ತಿಲೋತ್ತಮೆಯು ಒಬ್ಬ ಬಲಿಷ್ಠನ ಪಾಣಿಗ್ರಹಣವನ್ನು ಆದಷ್ಟು ಬೇಗನೆ ಮಾಡಿಬಿಡುವದು ನನಗೆ ಹಿತಕರವಾಗಿ ತೋರುತ್ತದೆ. ಅವಿ