ಪುಟ:ತಿಲೋತ್ತಮೆ.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೮ ತಿಲೋತ್ತಮೆ. ಯಾದಂತಾಯತು, ಆದರೆ ಸೊಸೆಯನ್ನು ಸಂಗಡ ಕರಕೊಂಡು ಹೋದರೆ ಕುಮಾರನಿಗೆ ಅಸಮಾಧಾನವಾಯಿತೆಂದು ತಿಳಿದು ತಿಲೋತ್ತಮ ಯನ್ನು ಸಂಗಡ ಕರಕೊಂಡು ಹೋಗಲಿಲ್ಲ. ವಿನಯಶಾಲಿನಿ ಯಾದ ತಿಲೋತ್ತಮೆಯು, ತನ್ನ ಮನಸ್ಸಿನೊಳಗಿಲ್ಲದಿದ್ದರೂ ಅತೆ ಮಾವಂದಿರ ಇಚ್ಛೆಯನ್ನು ಪೂರ್ಣಮಾಡಬೇಕೆಂಬ ಸೌಜನ್ಯದಿಂದ ಹೊರ ಡಲು ಸಿದ್ಧಳಾಗಿದ್ದಳು. ಆದರೆ ಊರ್ಮಿಳಾರಾಣಿಯು ಪ್ರೇಮಪೂರ್ವಕವಾಗಿ ಆಕೆಯ ಪ್ರಯಾಣವನ್ನು ತಡೆದದ್ದರಿಂದ, ಆ ನವಭಾವದ ಸೊಸೆಯು ನಿಂತುಕೊಳ್ಳಬೇಕಾಯಿತು. ಮಾನಸಿಂಹನಿಗೂ, ಉರ್ಮಿಳಾರಾಣಿಗೂ ತಿಲೋ ತಮೆಯನ್ನು ಅಗಲಿ ಹೋಗುವಾಗ ಬಹಳ ವ್ಯಸನವಾಯಿತು. ಹೊರಟು ನಿಂತ ಮಾವನಿಗೆ ತಿಲೋತ್ತಮೆಯು ಕಣ್ಣೀರು ಹಾಕುತ್ತ ನಮಸ್ಕರಿಸಲು ಕಠೋರ ಹೃದಯದ ವೀರಶ್ರೇಷ್ಠ ನಾದ ಮಾನಸಿ೦ಕನ ಕಣ್ಣುಗಳೊಳಗಿಂದ ಬಳಬಳ ನೀರುಗಳು ಉದುರಿದವು, ಊರ್ಮಿಳಾರಾಣಿಯ ಶೋಕವಂತೂ ತಡೆಯಲಸಾಧ್ಯವಾಯಿತು, ಆಕೆಯು ತಿಲೋತ್ತಮೆಯನ್ನು ಅಪ್ಪಿ ಕೊಂಡು ಹೊಟ್ಟೆಯ ಮಗಳಂತೆ ಆಕೆಯ ಸಮಾಧಾನ ಮಾಡಿದಳು. ಜಗಕ್ಸಿಂಗನ ಸಹಾ ಯಕ್ಕೆಂದು ಮಾನಸಿಂಹನು ತನ್ನ ಚಿಕ್ಕ ಮಗನಾದ ಕುಮಾರ ಮಹಾಸಿಂಹ ನನು ಪಾಟಣಾಪಟ್ಟಣದಲ್ಲಿ ಇಟ್ಟನು. ಮಹಾಸಿಂಹನು ಚತುರ ಸೇನಾ ಪತಿಯೂ, ಸಾಹಸಿಯಾದ ನೀರನೂ, ಮೊಗಲಬಾದಶಹರ ಏಕನಿಷ್ಠ ಸೇವ ಕನೂ ಆಗಿದ್ದನು. ಜಗತ್ತಿಂಗನಿಗಿಂತ ಮಹಾಸಿಂಹನು ಎರಡುವರ್ಷ ಚಿಕ್ಕವ ನಾಗಿದ್ದನು. ಜಗಂಗನ ಆಡಳಿತದಲ್ಲಿ ಮೊದಮೊದಲಿಗೆ ಬ೦ಗಾಲ, ಬಿಹಾರ ಒಡಿಸಾ ಪ್ರಾಂತಗಳಲ್ಲಿ ವಿಶೇಷ ಗೊಂದಲವೇಳಲಿಲ್ಲ: ರಾಜಕಾರ್ಯವು ಸುಸೂತ್ರವಾಗಿ ಸಾಗಿತು, ಪ್ರಜೆಗಳು ಯಾವ ತೊಂದರೆಯೂ ಇಲ್ಲದೆ, ನಿಶ್ಚಿಂತೆಯಿಂದ ಕಾಲ ಹರಣಮಾಡಹತ್ತಿದರು. ಅಸಂತೋಷದ ಚಿಹವು ಎಲ್ಲಿಯೂ ಉಳಿದಂತೆ ತೋರಲಿಲ್ಲ, ರಾಜಕುಮಾರನಾದ ಜಗಕ್ಸಿಂಗನು ತನ್ನ ಪ್ರಿಯಪತ್ನಿ ಯಾದ ತಿಲೋತ್ತಮೆಯ ಸಹವಾಸದಿಂದ ಉಚ್ಚ ಪದವಿಯನ್ನು ಉಪಭೋಗಿಸುತ್ತ ಆನಂದದಿಂದ ಕಾಲಹರಣಮಾಡಹತ್ತಿದರು. ಆದರೆ ಈ ಜಗತ್ತಿನಲ್ಲಿ ಸರ್ವ