ಪುಟ:ತಿಲೋತ್ತಮೆ.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಶೌರ್ಯಸಂಜೀವನ. ೧೬೯ ಕಾಲದಲ್ಲಿಯೂ ಆನಂದಸ್ಥಿತಿಯು ಯಾರಿಗೂ ಸ್ಥಿರವಾಗಿ ಉಳಿದೇ ಉಳದಿ ತೆಂದು ಹೇಳಲಿಕ್ಕೆ ಆಗುವದಿಲ್ಲ, ಯಾವ ಸಾಂಸಾರಿಕರಿಗೂ ಸ್ಥಿರವಾದ ಆನಂದವು 'ಆಗದಿರುವಾಗ, ಅದು ಜಗತ್ತಿಂಗನಿಗಾದರೂ ಯಾಕ ಆಗಬೇಕು? ಒಡಿಸಾ ಪ್ರಾಂತದಿಂದ ರಾಮಚಂದ್ರ ದೇವನು ಜಗತ್ತಿ೦ಗನಿಗೆ- (C ನಬಾಬ ಉಸ್ಮಾನ ಖಾನನು ಪ್ರಚಂಡವಾದ ಸೆನೆಯನ್ನು ಕೂಡಿಸುತ್ತಿರುವನು. ಆತನು ಬಾದ ಶಹರ ಅಧಿಕಾರವನ್ನು ಬದಿಗೊತ್ತಬೇಕೆಂದು ಮಾಡಿದಂತೆ ತೋರು ತದೆ. ಸ್ವಲ್ಪ ದಿವಸಗಳಲ್ಲಿ ಘೋರವಾದ ಯುದ್ದ ಪ್ರಸಂಗವು ಒದಗಬಹು ದಾದ್ದರಿಂದ ಜಾಗರೂಕರಾಗಿರಬೇಕು ” ಎಂದು ಹೇಳಿ ಕಳಿಸಿದನು, ಅದನ್ನು ಕೇಳಿ ನೂತನ ಸುಭೇದಾರನು ಚಿಂತಾಮಗ್ನನಾದನು. ಆತನು ತನ್ನ ತಮ್ಮನಾದ ಮಹಾಸಿಂಹನನ್ನು ಕರೆಸಿ ಆಲೋಚನೆಯನ್ನು ಕೇಳಲು, ಪಠಾ ಣರೊಡನೆ ಯುದ್ಧಮಾಡುವದಕ್ಕಾಗಿ ನಮ್ಮ ಸೈನ್ಯವನ್ನು ಸಿದ್ಧಗೊಳಿಸಬೇಕೆಂದು ಅವನು ಹೇಳಿದನು. ಮೊಗಲಸೈನ್ಯವೂ ಯುದ್ಧಕ್ಕೆ ಸನ್ನದ್ದವಾಗತೊಡ ಗಿತು. ಅಷ್ಟರಲ್ಲಿ ಉಸ್ಮಾನಖಾನನು ಪುರಿಯಮೇಲೆ ದಾಳಿಮಾಡಿರಾಮಚಂದ್ರು ದೇವನನ್ನು ಓಡಿಸಿದನೆಂಬ ವರ್ತಮಾನವು ಬಂದಿತು, ಪಠಾಣರು ವಿಲಕ್ಷಣ ವಾದ ಆವೇಶದಿಂದ ಕಾದಿ ಭರದಿಂದ ತಮ್ಮ ಅಧಿಕಾರವನ್ನು ಸ್ಥಾಪಿಸುವ ರೆಂತಲೂ ಚಾರರು ಸುದ್ದಿ ಯನ್ನು ತಂದರು. ಇದನ್ನು ಕೇಳಿದ ಕೂಡಲೆ ಕುಮಾರ ಮಹಾಸಿಂಹನು ಪಠಾಣರನ್ನು ದಂಡಿಸುವದಕ್ಕಾಗಿ ಪ್ರಚಂಡ ಸೈನ್ಯದೊಡನೆ ಒಡಿಸಾಸ್ರಾಂತದಮೇಲೆ ಸಾಗಿ ಹೋದನು. ಭದ್ರ ಕೇದಾರದ ಬಳಿಯಲ್ಲಿ ಅವೆರಡು ಸೈನ್ಯಗಳ ನಡುವೆ ಯುದ್ಧವು ಆರಂಭವಾಯಿತು. ಆ ಘನಘೋರ ಯುದ್ದದಲ್ಲಿ ಪಠಾಣರ ಮುಖ್ಯ ಸೇನಾಪತಿಯಾದ ಉಸ್ಮಾನಖಾನನು ಸ್ವತಃ ಸೈನ್ಯವನ್ನು ನಡಿಸಿಕೊಳ್ಳು ದ್ದನು. ಆತನು ಯುದ್ದದಲ್ಲಿ ಅಪೂರ್ವವಾದ ಉತ್ಸಾಹವನ್ನು ವ್ಯಕ್ತ ಮಾಡಿ ದನು (( ಹೊಡೆಯಬೇಕು, ಇಲ್ಲವೆ ಮಡಿಯಬೇಕು. ” ಎಂಬ ನಿಶ್ಚಯ -ದಿಂದ ಪಠಾಣರು ಅಂದು ಕಾದುತ್ತಿದ್ದದ್ದರಿಂದ, ಅವರಲ್ಲಿ ಆವೇಶವು ತೋರು ತಿತ್ತು, ಅವರ ಆವೇಶಕ್ಕೆ ಮೊಗಲಸೈನ್ಯವು ತಡೆಯಲಿಲ್ಲ. ಜಯಲಕ್ಷ್ಮಿಯು ಪಠಾಣರಿಗೆ ಮಾಲೆಹಾಕಿದಳು. ಸೋಲಿನ ಕುಂದು ಮೊಗಲರಿಗೆ ತಗಲಿತು ಮಹಾಸಿಂಹನ ಹಲವು ಸೈನಿಕರು ಆ ಯುದ್ದದಲ್ಲಿ ದೇಹವಿಟ್ಟರು, ಉಳಿದ